ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ 'ರಾಕಿ'ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೇ ಇಲ್ಲ!

|
Google Oneindia Kannada News

ಭೋಪಾಲ್, ಜುಲೈ 23 : ಆಗಸ್ಟ್ ಮೊದಲ ವಾರದಲ್ಲಿ ರಕ್ಷಾ ಬಂಧನವಿದೆ. ಭಾರತ-ಚೀನಾ ನಡುವಿನ ಬಿಕ್ಕಟ್ಟು ರಾಕಿಗಳ ಮೇಲೆಯೂ ಪ್ರಭಾವ ಬೀರಿದೆ. ಚೀನಾದಲ್ಲಿ ತಯಾರಾಗುವ ರಾಕಿಗಳಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಬೇಡಿಕೆಯೇ ಇಲ್ಲವಾಗಿದೆ.

ಹಿಮಾಚಲ ಪ್ರದೇಶದ ಶಿಮ್ಲಾದ ವ್ಯಾಪಾರಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಈ ಬಾರಿಯ ರಕ್ಷಾ ಬಂಧನ ಸಮಯದಲ್ಲಿ ಚೀನಾದ ರಾಕಿಗಳಿಗೆ ಬೇಡಿಕೆಯೇ ಇಲ್ಲವಾಗಿದೆ. ನಾವು ಸಹ ಅವುಗಳನ್ನು ಮಾರಾಟ ಮಾಡುವುದಿಲ್ಲ" ಎಂದು ಹೇಳಿದ್ದಾರೆ.

ಚಿತ್ರಗಳಲ್ಲಿ : ಸೋದರ ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಸಂಭ್ರಮಚಿತ್ರಗಳಲ್ಲಿ : ಸೋದರ ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಸಂಭ್ರಮ

"ರಕ್ಷಾ ಬಂಧನದ ಖರೀದಿಗೆ ಬರುವ ಜನರು ಸ್ಥಳೀಯವಾಗಿ ಮಾಡಿದ ರಾಕಿಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ. ನಾವು ಸಹ ಈ ಬಾರಿ ಚೀನಾದಲ್ಲಿ ತಯಾರಾದ ರಾಕಿಗಳನ್ನು ಮಾರಾಟ ಮಾಡುವುದಿಲ್ಲ" ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

 ಭಾರತ-ಚೀನಾ ಗಡಿಯಲ್ಲಿ ಸನ್ನದ್ಧರಾಗಿರಿ: ರಾಜನಾಥ್ ಸಿಂಗ್ ಭಾರತ-ಚೀನಾ ಗಡಿಯಲ್ಲಿ ಸನ್ನದ್ಧರಾಗಿರಿ: ರಾಜನಾಥ್ ಸಿಂಗ್

Rakshabandhan Demand For Chinese Rakhis Has Fallen

21 ಸಾವಿರ ರಾಕಿ ತಯಾರು : ಮಧ್ಯಪ್ರದೇಶದ ಇಂಧೋರ್‌ನಲ್ಲಿ ರಕ್ಷಾ ಬಂಧನದ ಅಂಗವಾಗಿ ಸ್ಥಳೀಯ ಉತ್ಪನ್ನಗಳನ್ನು ಬಳಸಿಕೊಂಡು ರಾಕಿ ತಯಾರು ಮಾಡಲಾಗುತ್ತಿದೆ. ಮಹಿಳೆಯರು 22 ಕೇಂದ್ರಗಳಲ್ಲಿ ರಾಕಿಗಳನ್ನು ಮಾಡುತ್ತಿದ್ದಾರೆ.

ಚೀನಾ ಗಡಿಯಲ್ಲಿ ಕಣ್ಗಾವಲಿಗೆ ಭಾರತದ ಸ್ವದೇಶಿ ಡ್ರೋನ್ ಚೀನಾ ಗಡಿಯಲ್ಲಿ ಕಣ್ಗಾವಲಿಗೆ ಭಾರತದ ಸ್ವದೇಶಿ ಡ್ರೋನ್

ಬಿಜೆಪಿ ಸಂಸದ ಶಂಕರ್ ಲಾಲ್ವಾನಿ ಈ ಕುರಿತು ಮಾಹಿತಿ ನೀಡಿದ್ದು, "ಮಹಿಳೆಯರು 21,000 ರಾಕಿಗಳನ್ನು ಮಾಡಲಿದ್ದಾರೆ. ಅದನ್ನು ನಾವು ದೇಶದ ಗಡಿಯಲ್ಲಿರುವ ಯೋಧರಿಗೆ ಕಳುಹಿಸುತ್ತಿದ್ದೇವೆ. ಪ್ರಧಾನಮಂತ್ರಿಗಳ ಕಚೇರಿ, ಗೃಹ ಮತ್ತು ರಕ್ಷಣಾ ಸಚಿವರಿಗೂ ಸಹ ರಾಕಿ ಕಳಿಸಲಾಗುತ್ತದೆ" ಎಂದರು.

Rakshabandhan Demand For Chinese Rakhis Has Fallen

ಲಡಾಖ್‌ನಲ್ಲಿ ಭಾರತ-ಚೀನಾ ಯೋಧರ ನಡುವೆ ಘರ್ಷಣೆ ಸಂಭವಿಸಿದ ಬಳಿಕ ಎರಡೂ ದೇಶಗಳ ನಡುವಿನ ಸಂಬಂಧ ಹಳಸಿದೆ. ಭಾರತದಲ್ಲಿ ಸಹ ಚೀನಾ ವಸ್ತುಗಳ ಬಳಕೆ ನಿಲ್ಲಿಸಬೇಕು ಎಂಬ ಕೂಗೂ ಜೋರಾಗಿದೆ. ಆಗಸ್ಟ್ 3ರಂದು ಈ ಬಾರಿ ರಕ್ಷಾ ಬಂಧನವಿದೆ.

English summary
Shopkeepers in Himachal Pradesh Shimla said that demand for Chinese rakhis has fallen. Customers are preferring locally made products and We are not selling Chinese rakhis this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X