ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ ಮತದಾರರಿಗೆ ರಾಹುಲ್ ಗಾಂಧಿ 'ಭರವಸೆ' ಭರಿತ ಪತ್ರ

|
Google Oneindia Kannada News

ಭೋಪಾಲ್, ನವೆಂಬರ್ 28 : ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮತದಾರರಿಗೆ ಭರವಸೆಗಳಿಂದ ತುಂಬಿದ ಪತ್ರವೊಂದನ್ನು ಬರೆದಿದ್ದಾರೆ.

ಈ ಬಹಿರಂಗ ಪತ್ರದಲ್ಲಿ. ಕಾಂಗ್ರೆಸ್ ಮತದಾರರಿಗೆ ನೀಡಿದ ಎಲ್ಲ ಭರವಸೆಗಳನ್ನೂ ಈಡೇರಿಸಿ ಈ ರಾಜ್ಯವನ್ನು ಹೊಸ ಉತ್ತುಂಗಕ್ಕೆ ಕರೆದೊಯ್ಯುವುದಾಗಿ ರಾಹುಲ್ ಗಾಂಧಿ ಅವರು ಭರವಸೆ ನೀಡಿದ್ದಾರೆ.

ರಾಹುಲ್ ಗಾಂಧಿ ಪೂರ್ವಿಕರ ವಂಶವೃಕ್ಷ ಬಿಚ್ಚಿಟ್ಟ ಟ್ವೀಟ್ ಲೋಕ ರಾಹುಲ್ ಗಾಂಧಿ ಪೂರ್ವಿಕರ ವಂಶವೃಕ್ಷ ಬಿಚ್ಚಿಟ್ಟ ಟ್ವೀಟ್ ಲೋಕ

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಹತ್ತು ದಿನಗಳಲ್ಲಿ ರೈತರ ಸಾಲಮನ್ನಾ ಮಾಡುವ ಭರವಸೆ ನೀಡಿದ್ದ ರಾಹುಲ್ ಗಾಂಧಿ, ತಮ್ಮ ಪತ್ರದಲ್ಲೂ ಅದನ್ನು ಉಲ್ಲೇಖಿಸಿದ್ದಾರೆ. ಅವರು ಇಲ್ಲಿ ಮಾತ್ರವಲ್ಲ ಎಲ್ಲ ರಾಜ್ಯಗಳಲ್ಲಿಯೂ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಮಧ್ಯ ಪ್ರದೇಶ ವಿಧಾನಸಭೆಗೆ ಇಂದು (ನವೆಂಬರ್ 28) ಮತದಾನ ನಡೆಯುತ್ತಿದ್ದು, ಡಿಸೆಂಬರ್ 11 ರಂದು ಮತ ಎಣಿಕೆ ನಡೆಯಲಿದೆ. ಕಳೆದೊಂದು ದಶಕದಿಂದ ಕಾಂಗ್ರೆಸ್ ಅಧಿಕಾರವನ್ನು ಮರುಗಳಿಸಿಲ್ಲ. ಬಿಜೆಪಿಯಿಂದ ಆಡಳಿತವನ್ನು ಕಿತ್ತುಕೊಂಡು ಕಾಂಗ್ರೆಸ್ ಆಡಳಿತವನ್ನು ಸ್ಥಾಪಿಸುವುದು ರಾಹುಲ್ ಮಹದಾಸೆ. ಮತದಾರರಿಗೆ ರಾಹುಲ್ ಗಾಂಧಿ ಬರೆದ ಬಹಿರಂಗ ಪತ್ರದ ಮುಖ್ಯಾಂಶ ಇಲ್ಲಿದೆ.

ಮಧ್ಯಪ್ರದೇಶ ಎಂದರೆ...

ಮಧ್ಯಪ್ರದೇಶ ಎಂದರೆ...

"ಮಧ್ಯಪ್ರದೇಶ ಎಂದರೆ... ಕೇವಲ ರಾಜ್ಯದ ಹೆಸರಲ್ಲ. ಅದು ರೈತರ ಮನೋಬಲ, ಹೆಣ್ಣುಮಕ್ಕಳ ಆತ್ಮವಿಶ್ವಾಸ, ಯುವಕರ ಆಶಾಕಿರಣ ಮತ್ತು ಬಡವರ ಗೆಲುವು" ಎಂದು ಮಾರ್ಮಿಕ ಸಾಲುಗಳನ್ನು ರಾಹುಲ್ ಗಾಂಧಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ರಾಹುಲ್ ಗಾಂಧಿ ನೈಜ ಗೋತ್ರ ಯಾವುದು? ಅರ್ಚಕ ಬಹಿರಂಗಪಡಿಸಿದ ಸಂಗತಿರಾಹುಲ್ ಗಾಂಧಿ ನೈಜ ಗೋತ್ರ ಯಾವುದು? ಅರ್ಚಕ ಬಹಿರಂಗಪಡಿಸಿದ ಸಂಗತಿ

ರೈತರ ಬೆಳೆಗೆ ಪೊಲೀಸರ ಗುಂಡಿನ ಬೆಲೆ!

ರೈತರ ಬೆಳೆಗೆ ಪೊಲೀಸರ ಗುಂಡಿನ ಬೆಲೆ!

ಕಳೆದ ಹದಿನೈದು ವರ್ಷಗಳಿಂದ ಈ ರಾಜ್ಯದ ಚಿತ್ರಣ ಬದಲಾಗುತ್ತಿದೆ. ಬೆಳೆಗೆ ಸೂಕ್ತ ಬೆಲೆ ಕೇಳಿದ ರೈತರಿಗೆ ಪೊಲೀಸರ ಗುಂಡಿನ ಬೆಲೆ ಸಿಕ್ಕಿದೆ! ವ್ಯಾಪಂ, ಮರಳು ಮಾಫಿಯಾ, ಟೆಂಡರ್ ಹಗರಣ, ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಈ ರಾಜ್ಯ ಕತ್ತಲಿನಲ್ಲಿದೆ- ರಾಹುಲ್ ಗಾಂಧಿ

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನೆ ಮಾಡುವ ಕಾಂಗ್ರೆಸ್ ಗೆ ನೈತಿಕತೆ ಇದೆಯಾ?: ಮೋದಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನೆ ಮಾಡುವ ಕಾಂಗ್ರೆಸ್ ಗೆ ನೈತಿಕತೆ ಇದೆಯಾ?: ಮೋದಿ

ಹೊಸ ಆಶಾಕಿರಣ

ಹೊಸ ಆಶಾಕಿರಣ

ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು ಸಂಖ್ಯೆಯ ಬುಡಕಟ್ಟು ಸಮುದಾಯದ ಜನರಿದ್ದಾರೆ. ಆದರೆ ಅವರಿಗೆ ಕಾಡಿನ ಭೂಮಿಯಲ್ಲಿ ಅಧಿಕಾರ ಮತ್ತು ಉದ್ಯೋಗದ ಭರವಸೆ ನೀಡಲಾಗಿಲ್ಲ. ಆದರೆ ಕಾಂಗ್ರೆಸ್, ರೈತರ ಸಾಲಮನ್ನಾ, ಕೇವಲ ಅರ್ಧಬೆಲೆಗೆ 24 ಗಂಟೆ ವಿದ್ಯುತ್ ಪೂರೈಕೆ, ಮಹಿಳೆಯರಿಗೆ ನ್ಯಾಯ, ಕೈಗಾರಿಕೆಗಳ ಬೆಳವಣಿಗೆ, ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದೆ. ಇದು ಈ ರಾಜ್ಯದ ಯುವಕರಿಗೆ ಹೊಸ ಆಶಾಕಿರಣವಾದಂತಾಗಿದೆ- ರಾಹುಲ್ ಗಾಂಧಿ

ರೈತರ ವಿಶ್ವಾಸ ಉಳಿಸಿಕೊಂಡಿದ್ದೇವೆ

ರೈತರ ವಿಶ್ವಾಸ ಉಳಿಸಿಕೊಂಡಿದ್ದೇವೆ

ಭೂ ಸ್ವಾಧೀನ ಮಸೂದೆಯನ್ನು ಎನ್ ಡಿಎ ಸರ್ಕಾರವು ಮಂಡಿಸುವುದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಕಾಂಗ್ರೆಸ್ ಪಕ್ಷದ ಮೇಲೆ ರೈತರು ಇರಿಸಿಕೊಂಡ ವಿಶ್ವಾಸವನ್ನು ಈ ಮೂಲಕ ಉಳಿಸಿಕೊಂಡಿದ್ದೇವೆ. ರಾಜ್ಯದಲ್ಲಿ ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್ಸಿಗೇ ಮತನೀಡಿ ಎಂದು ರಾಹುಲ್ ಗಾಂಧಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

English summary
Congress president Rahul Gandhi has written an open letter addressing people of Madhya Pradesh just before the voting in the state. He reiterated to fulfill the promises made by the Congress to people of the state and take the developmental journey of the state to a next height.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X