ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೋಪಾಲ್‌ ರಾಜನಿಗೆ ಹಿಂದು ಫೈರ್‌ ಬ್ರಾಂಡ್‌ ಸಾಧ್ವಿ ಸವಾಲು

|
Google Oneindia Kannada News

ಭೋಪಾಲ್‌, ಮೇ 12: ಆರನೇ ಹಂತದ ಮತದಾನದಲ್ಲಿ ತೀವ್ರ ಗಮನ ಸೆಳೆದಿರುವ ಕ್ಷೇತ್ರವೆಂದರೆ ಮಧ್ಯಪ್ರದೇಶದ ಭೋಪಾಲ್‌. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ಹಾಗೂ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹಿಂದೂ ಭಯೋತ್ಪಾದನೆ ಎಂಬ ವಿಚಾರವನ್ನು ದೇಶದಲ್ಲಿ ಮೊದಲು ಹುಟ್ಟು ಹಾಕಿರುವ ದಿಗ್ವಿಜಯ್‌ ಸಿಂಗ್‌ ವಿರುದ್ಧ ಮಾಲೇಗಾಂವ್‌ ಬಾಂಬ್‌ ಸ್ಫೋಟದ ಆರೋಪಿ ಸಾಧ್ವಿಯನ್ನು ಬಿಜೆಪಿ ಸ್ಪರ್ಧೆಗಿಳಿಸುವ ಮೂಲಕ ತಿರುಗೇಟು ನೀಡಲು ಮುಂದಾಗಿದೆ.

ಆರನೇ ಹಂತದ ಘಟಾನುಘಟಿ ಅಭ್ಯರ್ಥಿಗಳು ಯಾರ್ಯಾರು? ಆರನೇ ಹಂತದ ಘಟಾನುಘಟಿ ಅಭ್ಯರ್ಥಿಗಳು ಯಾರ್ಯಾರು?

ಹಿಂದು ಸಂಘಟನೆಗಳಿಗೆ ಉಗ್ರವಾದ ಸಮಸಿ ಬಳಿಯಲು ದಿಗ್ವಿಜಯ್‌ ಸಿಂಗ್‌ ಹಾಗೂ ಕಾಂಗ್ರೆಸ್‌ ನಾಯಕರು ಷಡ್ಯಂತ್ರ ರೂಪಿಸಿದ್ದರು ಎನ್ನುವುದು ಬಿಜೆಪಿ ಆರೋಪವಾಗಿದೆ. ಇದೇ ಕಾರಣಕ್ಕೆ ಷಡ್ಯಂತ್ರದ ಸಂತ್ರಸ್ತೆ ಎಂದು ಬಿಜೆಪಿ ಕರೆಯುವ ಸಾಧ್ವಿಯನ್ನು ದಿಗ್ವಿಜಯ್‌ ವಿರುದ್ಧ ನಿಲ್ಲಿಸಲಾಗಿದೆ.

Prestigious Bhopal constituency witness Sadhvi and Digvijay fight

ಕಳೆದ 30 ವರ್ಷಗಳಿಂದಲೂ ಬಿಜೆಪಿ ಭದ್ರಕೋಟೆಯಾಗಿರುವ ಭೋಪಾಲ್‌ನಲ್ಲಿ ಕಾಂಗ್ರೆಸ್‌ ಗೆಲ್ಲಲು ಆಗಿಲ್ಲ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ3.7 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.

ಸುಮಾರು 19.4 ಲಕ್ಷ ಮತಗಳಿರುವ ಕ್ಷೇತ್ರದಲ್ಲಿ ಹಿಂದುತ್ವ ಮೊದಲಿನಿಂದಲೂ ಕೆಲಸ ಮಾಡುತ್ತಿದೆ. ದೇಶದಲ್ಲಿ ಅಯೋಧ್ಯೆ ರಾಮಮಂದಿರ ಅಭಿಯಾನ ಆರಂಭವಾದ ಬಳಿಕ ಕಾಂಗ್ರೆಸ್‌ಗೆ ಕ್ಷೇತ್ರ ದೊರೆತಿಲ್ಲ.

ವಿಜಯಕ್ಕಾಗಿ ಹಠ ಯೋಗ ಬಾಬಾರಿಂದ ಹೋಮ, ಸಂಕಷ್ಟದಲ್ಲಿ ದಿಗ್ವಿಜಯ್ ಸಿಂಗ್ ವಿಜಯಕ್ಕಾಗಿ ಹಠ ಯೋಗ ಬಾಬಾರಿಂದ ಹೋಮ, ಸಂಕಷ್ಟದಲ್ಲಿ ದಿಗ್ವಿಜಯ್ ಸಿಂಗ್

ಹೀಗಾಗಿ ದಿಗ್ವಿಜಯ್‌ ಸಿಂಗ್‌ ಅವರಂಥ ಪ್ರಭಾವಿ ಅಭ್ಯರ್ಥಿ ನಿಂತರೂ ಬಿಜೆಪಿಗೆ ಗೆಲುವು ಅಷ್ಟೊಂದು ಕಷ್ಟದಾಯಕವಲ್ಲ ಎನ್ನಲಾಗುತ್ತಿದೆ.

ಆದರೆ ಸಾಧ್ವಿಯ ಉಗ್ರ ಹಿಂದುತ್ವಕ್ಕೆ ಮೃದು ಹಿಂದುತ್ವದ ಮೂಲಕ ಮತ ಸೆಳೆಯಲು ದಿಗ್ವಿಜಯ್‌ ಕೂಡ ಕೆಲ ತಂತ್ರಗಾರಿಕೆ ಮಾಡಿದ್ದಾರೆ. ಕಂಪ್ಯೂಟರ್‌ ಬಾಬಾ ಸೇರಿ ಇತರರ ಮೂಲಕ ರೋಡ್‌ಶೋ, ಹವನಗಳ ಮೂಲಕ ಹಿಂದೂ ಮತ ಸೆಳೆಯುವ ಕೆಲಸ ಮಾಡಿದ್ದಾರೆ.

ಹಿಂದೂ ಭಯೋತ್ಪಾದನೆ ಎಂಬ ಆರೋಪಕ್ಕೆ ರಾಜಕೀಯ ಉತ್ತರ ನೀಡಲು ಸಾಧ್ವಿಗೆ ಇದು ಸಮಯವಾಗಿದ್ದರೆ, ಭೋಪಾಲ್‌ ಗೆಲುವಿನ ಮೂಲಕ ಮಧ್ಯಪ್ರದೇಶದಲ್ಲಿ ತನ್ನ ಪ್ರಭಾವ ತೋರುವುದು ದಿಗ್ವಿಜಯ್‌ಗೂ ಅಷ್ಟೇ ಪ್ರಮುಖವಾಗಿದೆ.

English summary
Bhopal witnessing the Prestigeous battle in 6th phase election, Digvijay singh and Sadhvi Pragya are Fighting each other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X