ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೋಪಾಲ್‌ನಲ್ಲಿ ಸಂಸದರಾಗಿದ್ದ ಕನ್ನಡಿಗ ಯಾರು?

|
Google Oneindia Kannada News

ಭೋಪಾಲ್‌, ಮೇ 12: ಹಾಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಅಸ್ತಿತ್ವಕ್ಕೆ ಬರುವ ಮುನ್ನ ಜನಸಂಘ ಎನ್ನುವ ಹೆಸರಿನಲ್ಲಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆಗ ಕರ್ನಾಟಕದಲ್ಲಿ ಖಾತೆಯನ್ನೇ ತೆರೆಯಲು ಜನಸಂಘಕ್ಕೆ ಅಸಾಧ್ಯವಾಗಿದ್ದರೂ, ದೂರದ ಮಧ್ಯಪ್ರದೇಶಕ್ಕೆ ಕನ್ನಡಿಗರೊಬ್ಬರು ಹೋಗಿ ಎರಡು ಬಾರಿ ಸಂಸದರಾಗಿದ್ದಾರೆ.

6ನೇ ಹಂತದ ಚುನಾವಣೆ LIVE:ವಿರಾಟ್ ಕೊಹ್ಲಿ ಮತದಾನ6ನೇ ಹಂತದ ಚುನಾವಣೆ LIVE:ವಿರಾಟ್ ಕೊಹ್ಲಿ ಮತದಾನ

ಒಮ್ಮೆ ಭೋಪಾಲ್‌ ಹಾಗೂ ಇನ್ನೊಮ್ಮೆ ಷಾಜಾಪುರ ಲೋಕಸಭಾ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದಾರೆ.

Prestigious Bhopal constituency was once represented by Kannadiga

ಇವರ ಹೆಸರು ಜಗನ್ನಾಥ್‌ ರಾವ್‌ ಜೋಷಿ. ಮೂಲತಃ ಗದಗಿನ ನರಗುಂದ ತಾಲೂಕಿನವರಾದ ಜೋಷಿ, ಮೊದಲಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಗುರುತಿಸಿಕೊಂಡಿದ್ದರು.

1951 ರಲ್ಲಿ ಜನಸಂಘ ಆರಂಭವಾದ ಬಳಿಕ ಕರ್ನಾಟಕ ಹಾಗೂ ರಾಷ್ಟ್ರ ಮಟ್ಟದಲ್ಲಿ ಜೋಷಿ ಅಗ್ರಗಣ್ಯ ನಾಯಕರಾಗಿ ಬೆಳೆದರು. 1967ರಲ್ಲಿ ಭೋಪಾಲ್‌ ಹಾಗೂ 1971ರಲ್ಲಿ ಷಾಜಾಪುರದಿಂದ ಅವರ ಸಂಸದರಾಗಿದ್ದರು.

ಭೋಪಾಲ್‌ ರಾಜನಿಗೆ ಹಿಂದು ಫೈರ್‌ ಬ್ರಾಂಡ್‌ ಸಾಧ್ವಿ ಸವಾಲುಭೋಪಾಲ್‌ ರಾಜನಿಗೆ ಹಿಂದು ಫೈರ್‌ ಬ್ರಾಂಡ್‌ ಸಾಧ್ವಿ ಸವಾಲು

ಭೋಪಾಲ್‌ ನವಾಬನ ಹಿಡಿತದಲ್ಲಿದ್ದ ಕ್ಷೇತ್ರದಲ್ಲಿ ಜಗನ್ನಾಥ್‌ ರಾವ್‌ ಜೋಷಿ ಸ್ಪರ್ಧಿಸಿ ಗೆದ್ದಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಭವಿಷ್ಯದಲ್ಲಿ ಈ ಕ್ಷೇತ್ರವನ್ನು ಮಾಜಿ ರಾಷ್ಟ್ರಪತಿ ಶಂಕರ್‌ದಯಾಳ್‌ ಶರ್ಮಾ, ಮಾಜಿ ಕ್ರಿಕೆಟಿಗ ಮನ್ಸೂರ್‌ ಅಲಿ ಖಾನ್ ಪಟೌಡಿ, ಹಾಲಿ ಕೇಂದ್ರ ಸಚಿವೆ ಉಮಾ ಭಾರತಿ ಪ್ರತಿನಿಧಿಸಿದ್ದರು. ಸದ್ಯಕ್ಕೆ ಅಲೋಕ್‌ ಸಂಜರ್‌ ಬಿಜೆಪಿ ಸಂಸದರಾಗಿದ್ದಾರೆ.

ಆರನೇ ಹಂತದ ಘಟಾನುಘಟಿ ಅಭ್ಯರ್ಥಿಗಳು ಯಾರ್ಯಾರು? ಆರನೇ ಹಂತದ ಘಟಾನುಘಟಿ ಅಭ್ಯರ್ಥಿಗಳು ಯಾರ್ಯಾರು?

ಕರ್ನಾಟಕ ಬಿಜೆಪಿ ಕಚೇರಿಗೂ ಕೂಡ ಇದೇ ವ್ಯಕ್ತಿ ಜಗನ್ನಾಥ್‌ ರಾವ್‌ ಜೋಷಿ ಹೆಸರಿಟ್ಟಿರುವುದು ವಿಶೇಷ. ಇದಕ್ಕೆ ಜೋಷಿಯವರ ಈ ರಾಜಕೀಯ ಮೇರು ನಾಯಕತ್ವ ಕೂಡ ಕಾರಣ.

English summary
Prestigious Bhopal constituency was represented by Kannadiga Jagannath Rao Joshi He was a tollest leader in earlier Jansangh Party also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X