ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಥೂರಾಮ್ ಗೋಡ್ಸೆ ಬಗೆಗಿನ ಹೇಳಿಕೆ ತಿದ್ದಿಕೊಂಡ ಸಾದ್ವಿ ಪ್ರಜ್ಞಾ

|
Google Oneindia Kannada News

ಭೋಪಾಲ್, ಮೇ 16: ಮಹಾತ್ಮಾ ಗಾಂಧಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂದು ಹೇಳಿದ್ದ ಬಿಜೆಪಿ ಮುಖಂಡೆ ಸಾದ್ವಿ ಪ್ರಜ್ಞಾ ಠಾಕೂರ್ ಅವರು ತಮ್ಮ ಹೇಳಿಕೆಯನ್ನು ತಿದ್ದಿಕೊಂಡಿದ್ದಾರೆ.

ಸಾದ್ವಿ ಪ್ರಜ್ಞಾ ಠಾಕೂರ್ ಅವರ ಹೇಳಿಕೆಯನ್ನು ಸ್ವತಃ ಬಿಜೆಪಿ ಖಂಡಿಸಿತ್ತು, ಅಲ್ಲದೆ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಸೂಚನೆ ನೀಡಿತ್ತು.

ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ: ಸಾಧ್ವಿ ಪ್ರಜ್ಞಾ ಸಿಂಗ್ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ: ಸಾಧ್ವಿ ಪ್ರಜ್ಞಾ ಸಿಂಗ್

ಹಾಗಾಗಿ ಸಂಜೆ ವೇಳೆಗೆ ತಮ್ಮ ಹೇಳಿಕೆಯನ್ನು ತಿದ್ದಿಕೊಂಡಿರುವ ಸಾದ್ವಿ ಪ್ರಜ್ಞಾ ಠಾಕೂರ್, ನಾನು ಬಿಜೆಪಿಯ ಕಾರ್ಯಕರ್ತೆ, ಬಿಜೆಪಿಯ ವಿಚಾರಗಳಲ್ಲಿ ನಂಬಿಕೆ ಇಟ್ಟಿದ್ದೇನೆ, ಬಿಜೆಪಿಯ ಅಭಿಪ್ರಾಯವೇ ನನ್ನ ಅಭಿಪ್ರಾಯವೂ ಆಗಿದೆ ಎಂದು ಒಲ್ಲದ ಮನಸ್ಸಿನಿಂದಲೇ ತಮ್ಮ ಹೇಳಿಕೆಯನ್ನು ಬದಲಾಯಿಸಿಕೊಂಡಿದ್ದಾರೆ.

Pragya Takur took back her statement about Nathuram Godse

ಸುದ್ದಿ ಸಂಸ್ಥೆಯೊಂದಕ್ಕೆ ಈ ಬಗ್ಗೆ ಪ್ರಜ್ಞಾ ಠಾಕೂರ್ ಅವರು ಹೇಳಿಕೆ ನೀಡಿದ್ದು, ಯಾವುದೇ ಕ್ಷಮಾಪಣೆ ಕೋರುವುದಾಗಿ, ವಿಷಾದ ವ್ಯಕ್ತಪಡಿಸುವುದಾಗಲಿ ಮಾಡಿಲ್ಲ, ಅಲ್ಲದೆ ಅವರ ಮುಖಚರ್ಯೆಯೂ ಸಹ ಒಲ್ಲದ ಮನಸ್ಸಿನಿಂದಲೇ ಹೇಳಿಕೆಯನ್ನು ಬದಲಾಯಿಸಿಕೊಂಡತೆ ತೋರುತ್ತಿದೆ.

ಸ್ವತಂತ್ರ ಭಾರತದ ಮೊತ್ತಮೊದಲ ಉಗ್ರ ಒಬ್ಬ ಹಿಂದು: ಕಮಲ್ ಹಾಸನ್ಸ್ವತಂತ್ರ ಭಾರತದ ಮೊತ್ತಮೊದಲ ಉಗ್ರ ಒಬ್ಬ ಹಿಂದು: ಕಮಲ್ ಹಾಸನ್

ತಮಿಳು ನಟ ಕಮಲ್‌ ಹಸನ್ ಅವರು ಇತ್ತೀಚೆಗೆ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ಮಹಾತ್ಮಾ ಗಾಂಧಿಯನ್ನು ಕೊಂದ ನಾಥೂರಾಮ್ ಗೂಡ್ಸೆ, ಸ್ವತಂತ್ರ್ಯ ಭಾರತದ ಮೊದಲ ಹಿಂದೂ ಭಯೋತ್ಪಾದಕ ಎಂದಿದ್ದರು, ಇದನ್ನು ಖಂಡಿಸಿದ್ದ ಸಾದ್ವಿ ಪ್ರಜ್ಞಾ ಠಾಕೂರ್ ಅವರು ನಾಥೂರಾಮ್ ಒಬ್ಬ ದೇಶಭಕ್ತ ಆಗಿದ್ದರು ಎಂದು ಅವರ ಪರವಾಗಿ ಹೇಳಿಕೆ ನೀಡಿದ್ದರು.

English summary
BJP candidate Sadvi Pragya Takur took back her statement about Nathuram Godse, earlier she said that Nathuram Godse is a 'deshbhakt ', condemned her statement & asked her to apologies publicly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X