• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮದುವೆ ವೇಳೆ ಪವರ್ ಕಟ್: ವಧುಗಳನ್ನೇ ಬದಲಿ ಮಾಡಿದ ಪಂಡಿತ

|
Google Oneindia Kannada News

ಉಜ್ಜಯಿನಿ ಮೇ 10: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇಬ್ಬರು ಸಹೋದರಿಯರ ವಿವಾಹದ ವೇಳೆ ವಿದ್ಯುತ್ ಕಡಿತದಿಂದಾಗಿ ಮಧುಗಳು ಅದಲಿ ಬದಲಿಯಾದ ಘಟನೆ ನಡೆದಿದೆ. ಕತ್ತಲೆಯಲ್ಲಿ ಸ್ಪಷ್ಟವಾಗಿ ನೋಡಲು ಸಾಧ್ಯವಾಗದ ಕಾರಣ ವಧುಗಳು ತಪ್ಪಾದ ವರನೊಂದಿಗೆ ವಿವಾಹ ಸಮಾರಂಭ ನಡೆದು ಹೋಗಿದೆ.

ಭಾನುವಾರ ರಮೇಶ್‌ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ಅವರಿಗೆ ವಿವಿಧ ಕುಟುಂಬಗಳ ಇಬ್ಬರು ಗಂಡು ಮಕ್ಕಳಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರೊಂದಿಗೆ ವಿವಾಹ ನಿಗದಿಯಾಗಿತ್ತು. ವಧುಗಳು ಮುಸುಕುಗಳನ್ನು ಧರಿಸುತ್ತಿದ್ದರು ಮತ್ತು ಅವರ ಉಡುಪುಗಳು ಒಂದೇ ಆಗಿದ್ದವು. ಈ ಮದುವೆಯ ಆಚರಣೆಗಳ ಸಮಯದಲ್ಲಿ ಭಾರೀ ಅವಿವೇಕತನದ ಘಟನೆ ನಡೆದಿದೆ. ಇದನ್ನು ಮದುವೆಯಲ್ಲಿ ನೆರೆದವರು ಕೂಡ ಊಹಿಸಿಲ್ಲ. ಜೊತೆಗೆ ಇದಾಗಿರುವ ಬಗ್ಗೆ ಯಾರ ಅರಿವಿಗೂ ಬಂದಿಲ್ಲ. ಮದುವೆ ಮುಗಿದ ಬಳಿಕ ಮಧು ಗಂಡನ ಮನೆಗೆ ಹೋದಾಗ ಮಧು ಅದಲಿ ಬದಲಿಯಾಗಿರುವುದು ತಿಳಿದು ಬಂದಿದೆ.

ಮದುವೆ ವೇಳೆ ವಿದ್ಯುತ್ ವ್ಯತ್ಯಯವಾದ್ದರಿಂದ ಕತ್ತಲಲ್ಲಿ ಮದುವೆ ಮಾಡಿಸಿದ್ದ ಪಂಡಿತ ವರಗಳನ್ನು ತಪ್ಪಾದ ವಧುವಿನ ಜೊತೆ ಕೂರಿಸಿದ್ದಾನೆ. ಇಬ್ಬರೂ ವರರು ಸಂಪ್ರದಾಯದಂತೆ ಮದುವೆಯಾಗಿ ತಾಳಿ ಕೂಡ ಕಟ್ಟಿದ್ದಾರೆ. ವರಗಳು ತಮ್ಮ ವಧುಗಳನ್ನು ಮನೆಗೆ ಕರೆದೊಯ್ದಾಗ ಮಾತ್ರ ದೋಷದ ಅರಿವಾಯಿತು. ಬಳಿಕ ಇದು ಘರ್ಷಣೆಗೆ ಕಾರಣವಾಗಿದೆ. ಮರುದಿನ ಮತ್ತೊಮ್ಮೆ ಮದುವೆ ಸಮಾರಂಭ ನಡೆಸಿ ಅದಲಿಬದಲಿಯಾಗಿದ್ದ ವಧುಗಳನ್ನು ಸರಿಯಾದ ವರನಿಗೆ ಒಪ್ಪಿಸಲಾಗಿದೆ.

Power Cut while Marriage: Pundit has Altered Brides

ಈ ಘಟನೆಯನ್ನು ಹಂಚಿಕೊಂಡಿರುವ ಟ್ವಿಟ್ಟರ್ ಬಳಕೆದಾರರು "ಇದು ಭಾರತದಲ್ಲಿ ಮಾತ್ರ ಸಂಭವಿಸಬಹುದು" ಎಂದು ಹೇಳಿದ್ದಾರೆ.

ಕಳೆದ ತಿಂಗಳು ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಕುಡುಕ ವರನೊಬ್ಬ ನಿಗದಿತ ಸಮಯಕ್ಕೆ ಮದುವೆ ಸ್ಥಳಕ್ಕೆ ಬಾರದೇ ಇದ್ದುದರಿಂದ ಆತನ ವಧು ಬೇರೊಬ್ಬರನ್ನು ಮದುವೆಯಾಗಿದ್ದಳು. ಏಪ್ರಿಲ್ 22 ರಂದು ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್ ಪಾಂಗ್ರಾ ಗ್ರಾಮದಲ್ಲಿ ವಿವಾಹ ನಡೆಯಬೇಕಿತ್ತು. ಸಕಲ ಸಿದ್ಧತೆಗಳು ನಡೆದಿದ್ದು, ಸಂಜೆ 4 ಗಂಟೆಗೆ ಮದುವೆ ಸಮಾರಂಭಕ್ಕೆ ಶುಭ ಮುಹೂರ್ತ ಏರ್ಪಡಿಸಲಾಗಿತ್ತು. ಸಂಜೆ 8 ಗಂಟೆಯಾದರೂ ವರನ ಸುಳಿವು ಸಿಕ್ಕಿರಲಿಲ್ಲ. ವರ ಮತ್ತು ಆತನ ಸ್ನೇಹಿತರು ಕುಣಿದು ಕುಡಿದು ಕುಪ್ಪಳಿಸುತ್ತಿದ್ದರು ಎನ್ನಲಾಗಿದೆ. ನಾಲ್ಕು ಗಂಟೆ ತಡವಾಗಿ ವರ ಮಂಟಪಕ್ಕೆ ಆಗಮಿಸಿದಾಗ ವಧುವಿನ ತಂದೆ ಮಗಳ ಮದುವೆ ಮಾಡಲು ನಿರಾಕರಿಸಿದರು. ವಧುವಿನ ತಂದೆಯು ಸ್ಥಳದಲ್ಲಿ ಹಾಜರಿದ್ದ ಅತಿಥಿಗಳಲ್ಲಿ ವರನನ್ನು ಹುಡುಕಿ ಮಗಳ ಮದುವೆ ಮಾಡಿದ್ದಾರೆ.

English summary
wedding pandit also made the grooms do the pheras with the 'wrong' bride, and the error was only realised when the grooms took their brides home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X