ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಜನಸಂಖ್ಯಾ ನಿಯಂತ್ರಣ ಕಾನೂನು- ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್

|
Google Oneindia Kannada News

ರಾಯ್‌ಪುರ, ಜೂನ್ 1: ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಬಿಜೆಪಿ ಮುಂದಾಗಿದೆ. ಇದರ ಬೆನ್ನಲ್ಲೆ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನನ್ನು ಶೀಘ್ರದಲ್ಲೇ ತರಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಮಂಗಳವಾರ ಹೇಳಿದ್ದಾರೆ. ರಾಯ್‌ಪುರದ ಬರೋಂಡಾ ICAR-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಟಿಕ್ ಸ್ಟ್ರೆಸ್ ಮ್ಯಾನೇಜ್‌ಮೆಂಟ್‌ನಲ್ಲಿ 'ಗರೀಬ್ ಕಲ್ಯಾಣ್ ಸಮ್ಮೇಳನ'ದಲ್ಲಿ ಭಾಗವಹಿಸಿದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಕೇಂದ್ರ ಸಚಿವರಾದ ಪ್ರಹ್ಲಾದ್ ಸಿಂಗ್ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಶೀಘ್ರದಲ್ಲಿ ತರಲಾಗುವುದು ಎಂದು ಹೇಳಿದ್ದಾರೆ.

ಜನಸಂಖ್ಯೆ ನಿಯಂತ್ರಣ ಕಾನೂನು ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಟೇಲ್, 'ಶೀಘ್ರದಲ್ಲೇ ಜನಸಂಖ್ಯೆ ನಿಯಂತ್ರಣ ಕಾನೂನು ತರಲಾಗುವುದು. ಅಂತಹ ಬಲವಾದ ಮತ್ತು ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡ ನಂತರ ಉಳಿದ ಕಾರ್ಯಗಳನ್ನು ಮಾಡಲಾಗುತ್ತದೆ' ಎಂದಿದ್ದಾರೆ. ಛತ್ತೀಸ್‌ಗಢದಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಂದ್ರದ ಕೆಲವು ಯೋಜನೆಗಳ ಅಡಿಯಲ್ಲಿ ಗುರಿ ಸಾಧಿಸಲು ವಿಫಲವಾಗಿದೆ ಎಂದು ಆರೋಪಿಸಿದರು.

2021ರಲ್ಲಿ ಪ್ರಪಂಚದಲ್ಲಿ 7.4 ಕೋಟಿ ಜನಸಂಖ್ಯೆ ಹೆಚ್ಚಳ2021ರಲ್ಲಿ ಪ್ರಪಂಚದಲ್ಲಿ 7.4 ಕೋಟಿ ಜನಸಂಖ್ಯೆ ಹೆಚ್ಚಳ

'ಕೆಲಸ ಸಾಧಿಸಲು ಅಸಮರ್ಥ ಕಾಂಗ್ರೆಸ್'

'ಕೆಲಸ ಸಾಧಿಸಲು ಅಸಮರ್ಥ ಕಾಂಗ್ರೆಸ್'

"ರಾಜ್ಯ ಸರ್ಕಾರವು ಜಲ ಜೀವನ್ ಮಿಷನ್ ಅಡಿಯಲ್ಲಿ ಕೇವಲ 23 ಪ್ರತಿಶತದಷ್ಟು ಕೆಲಸವನ್ನು ಸಾಧಿಸಲು ಸಮರ್ಥವಾಗಿದೆ. ಆದರೆ ಅದರ ಅಡಿಯಲ್ಲಿ ಇನ್ನೂ ಸರಾಸರಿ 50 ಪ್ರತಿಶತದಷ್ಟು ಗುರಿ ಸಾಧನೆಯಿದೆ. ರಾಜ್ಯದಲ್ಲಿ ನೀರಿನ ಮೂಲ ಸಮಸ್ಯೆ ಇಲ್ಲ ಆದರೆ ನಿರ್ವಹಣೆಯದ್ದೇ ಸಮಸ್ಯೆ. ಅದೇ ರೀತಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗುರಿಯನ್ನು ಪೂರ್ಣಗೊಳಿಸಲು ರಾಜ್ಯಕ್ಕೆ ಸಾಧ್ಯವಾಗಿಲ್ಲ'' ಎಂದು ಹೇಳಿದರು.

2100 ರೂ. ಹಣಕ್ಕೆ ನಡೆಯಿತು ಜಗಳ: 15 ವಾಹನಕ್ಕೆ ಬೆಂಕಿ, 11 ಜನಕ್ಕೆ ಗಾಯ2100 ರೂ. ಹಣಕ್ಕೆ ನಡೆಯಿತು ಜಗಳ: 15 ವಾಹನಕ್ಕೆ ಬೆಂಕಿ, 11 ಜನಕ್ಕೆ ಗಾಯ

ಮೋದಿ ಸರ್ಕಾರವನ್ನು ಕೊಂಡಾಡಿದ ಪ್ರಹ್ಲಾದ್ ಸಿಂಗ್

ಮೋದಿ ಸರ್ಕಾರವನ್ನು ಕೊಂಡಾಡಿದ ಪ್ರಹ್ಲಾದ್ ಸಿಂಗ್

ಇದಕ್ಕೂ ಮುನ್ನ, ಗರೀಬಿ ಕಲ್ಯಾಣ ಸಮ್ಮೇಳನದ ಸಂದರ್ಭದಲ್ಲಿ ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪಟೇಲ್, ಕಳೆದ ಎಂಟು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದ ವಿವಿಧ ಸಾಧನೆಗಳನ್ನು ಕೊಂಡಾಡಿದ್ದಾರೆ. 'ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ' ಕೇಂದ್ರ ಸರ್ಕಾರದ ಮೂಲ ಮಂತ್ರವಾಗಿದೆ ಎಂದು ಹೇಳಿದ್ದಾರೆ.

ಚೀನಾ ಉದಾಹರಣೆಯಾಗಿ ಕೊಟ್ಟ ನಿತೀಶ್ ಕುಮಾರ್

ಚೀನಾ ಉದಾಹರಣೆಯಾಗಿ ಕೊಟ್ಟ ನಿತೀಶ್ ಕುಮಾರ್

ಬಿಜೆಪಿ ಆಡಳಿತ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಅಸ್ಸಾಂ ಜನಸಂಖ್ಯೆ ನಿಯಂತ್ರಣಕ್ಕಾಗಿ ಕಾನೂನು ಜಾರಿಗೆ ಮುಂದಾಗುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿಯವರ ಬಿಹಾರದ ಸ್ನೇಹಿತ ನಿತೀಶ್ ಕುಮಾರ್ ತಮ್ಮ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. "ರಾಜ್ಯಗಳು ತಮಗೆ ಬೇಕಾದುದನ್ನು ಮಾಡಬಹುದು. ಆದರೆ ಕಾನೂನಿನಿಂದ ಜನಸಂಖ್ಯಾ ನಿಯಂತ್ರಣ ಸಾಧ್ಯವಿಲ್ಲ ಎಂದು ನಾನು ಸ್ಪಷ್ಟವಾಗಿ ನಂಬುತ್ತೇನೆ. ಚೀನಾ ಅಥವಾ ಇನ್ನಾವುದೇ ರಾಷ್ಟ್ರದ ಉದಾಹರಣೆಯನ್ನು ಇದಕ್ಕಾಗಿ ತೆಗೆದುಕೊಳ್ಳಬಹುದು" ನಿತೀಶ್ ಕುಮಾರ್ ಹೇಳಿದರು.

ಮಹಿಳೆಯರಿಗೆ ಶಿಕ್ಷಣ ಅಗತ್ಯ- ನಿತೀಶ್ ಕುಮಾರ್

ಮಹಿಳೆಯರಿಗೆ ಶಿಕ್ಷಣ ಅಗತ್ಯ- ನಿತೀಶ್ ಕುಮಾರ್

ಬಿಹಾರ ಮುಖ್ಯಮಂತ್ರಿ ಪ್ರಕಾರ ಕುಟುಂಬದ ಮಹಿಳೆ ಹೆಚ್ಚು ವಿದ್ಯಾವಂತಳಾದರೆ ಫಲವತ್ತತೆ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಅಂಕಿಅಂಶವು ಒಂದು "ಅಚ್ಚರಿಯ ಸತ್ಯ". "ಮಹಿಳೆಯರಿಗೆ ಅರಿವು ಮತ್ತು ಶಿಕ್ಷಣ ದೊರೆತಾಗ, ಜನಸಂಖ್ಯೆ ಬೆಳವಣಿಗೆ ದರ ಕುಸಿಯುತ್ತದೆ" ಎಂದು ಅವರು ಹೇಳಿದ್ದಾರೆ.

"2040 ರ ವೇಳೆಗೆ ಜನಸಂಖ್ಯೆಯು ಕುಸಿಯಲು ಪ್ರಾರಂಭವಾಗುತ್ತದೆ. ನಾವು ಈ ಮಾರ್ಗದಲ್ಲಿದ್ದೇವೆ. ಇದನ್ನು ಕಾನೂನಿನ ಜಾರಿ ಮೂಲಕ ಮಾಡಬಹುದೆಂದು ಕೆಲವರು ನಂಬಿದರೆ ಅದು ಅವರ ಆಲೋಚನೆ. ನಾವು ಇದನ್ನು ಹೇಗೆ ಮಾಡಬಹುದು ಎಂಬುದರ ಕುರಿತು ನನ್ನ ಆಲೋಚನೆ ಸ್ಪಷ್ಟವಾಗಿದೆ. ಇದು ಕೇವಲ ಒಂದು ಸಮುದಾಯದ ಸಮಸ್ಯೆಯಲ್ಲ, ಆದರೆ ಮಹಿಳೆಯರಿಗೆ ಶಿಕ್ಷಣ ನೀಡಿದರೆ ಎಲ್ಲರಿಗೂ ಲಾಭವಾಗುತ್ತದೆ. ಬಿಹಾರದಲ್ಲಿ ಫಲವತ್ತತೆ ಪ್ರಮಾಣ ಎಷ್ಟು ಕಡಿಮೆಯಾಗುತ್ತಿದೆ ಎಂಬುದನ್ನು ನೀವೇ ಗಮನಿಸಿ" ಎಂದು ಸಿಎಂ ಹೇಳಿದರು.

English summary
Law on population control will soon be brought in, Union Minister Prahlad Singh Patel said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X