ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಮ್ಮೆ ನೋಡಿಕೊಳ್ಳಲು ರಜೆ ಬೇಕು; ಪೊಲೀಸ್ ಕಾನ್ಸ್‌ಟೇಬಲ್ ರಜೆ ಪತ್ರ ವೈರಲ್

|
Google Oneindia Kannada News

ಭೋಪಾಲ್, ಜೂನ್ 26 : ಮಧ್ಯಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಪೊಲೀಸರು ರಜೆ ಪಡೆಯುತ್ತಿದ್ದಾರೆ. ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Recommended Video

India China Face-Off : ಚೀನಾ ವಿಚಾರದಲ್ಲಿ ಭಾರತೀಯರಿಗೊಂದು ಸಿಹಿಸುದ್ದಿ.! | Oneindia Kannada

ವಿಶೇಷ ಸಶಸ್ತ್ರ ದಳದ 9ನೇ ಬೆಟಾಲಿಯನ್‌ನ ಕಮಾಂಡೆಂಟ್ ಆರ್. ಎಸ್. ಮೀನಾ ಬರೆದಿರುವ ರಜೆ ಪತ್ರ ನೋಡಿ ಇಲಾಖೆ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ. ಆರು ದಿನಗಳ ರಜೆ ಬೇಕು ಎಂದು ಮೀನಾ ಪತ್ರದಲ್ಲಿ ಮನವಿ ಮಾಡಿದ್ದಾಳೆ. ರಜೆಗಾಗಿ ಆಕೆ ನೀಡಿರುವ ಕಾರಣ ಪೊಲೀಸರು ಹುಬ್ಬೇರಿಸುವಂತೆ ಮಾಡಿದೆ.

ಕೊರೊನಾ ವೈರಸ್‌ಗೆ ಹೆದರಿ ಪೊಲೀಸ್ ಕಾನ್ಸ್ ಸ್ಟೇಬಲ್ ಆತ್ಮಹತ್ಯೆಕೊರೊನಾ ವೈರಸ್‌ಗೆ ಹೆದರಿ ಪೊಲೀಸ್ ಕಾನ್ಸ್ ಸ್ಟೇಬಲ್ ಆತ್ಮಹತ್ಯೆ

ಒಟ್ಟು ಎರಡು ಕಾರಣಗಳಿಗಾಗಿ 6 ದಿನಗಳ ರಜೆ ನೀಡಬೇಕು ಎಂದು ಆರ್. ಎಸ್. ಮೀನಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮೊದಲನೇಯ ಕಾರಣ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಅಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲ ಎಂಬುದು.

36 ಸಾವಿರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ಭರ್ತಿಗೆ ಅಧಿಸೂಚನೆ 36 ಸಾವಿರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ಭರ್ತಿಗೆ ಅಧಿಸೂಚನೆ

Police Constable Leave Letter Goes Viral

ಎರಡನೇಯ ಕಾರಣ ಎಮ್ಮೆ. ಹೌದು, ತಾನು ಯಾವ ಎಮ್ಮೆಯ ಹಾಲು ಕುಡಿದು ಪೊಲೀಸ್ ತರಬೇತಿ ಪೂರ್ಣಗೊಳಿಸಿದ್ದೆನೋ ಅದನ್ನು ನೋಡಿಕೊಳ್ಳಲು ಈಗ ಯಾರೂ ಇಲ್ಲ. ಈ ಸಮಯದಲ್ಲಿ ನಾನು ಅದನ್ನು ನೋಡಿಕೊಳ್ಳಬೇಕು. ಆದ್ದರಿಂದ 6 ದಿನದ ರಜೆ ಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಸಿಬ್ಬಂದಿಗೆ ಕೋವಿಡ್ ಸೋಂಕು; ಪೊಲೀಸ್ ಠಾಣೆಯ ಎಲ್ಲರಿಗೂ ಕ್ವಾರಂಟೈನ್ ಸಿಬ್ಬಂದಿಗೆ ಕೋವಿಡ್ ಸೋಂಕು; ಪೊಲೀಸ್ ಠಾಣೆಯ ಎಲ್ಲರಿಗೂ ಕ್ವಾರಂಟೈನ್

ಎಮ್ಮೆ ನನ್ನ ಜೀವನದಲ್ಲಿ ಅವಿಭಾಗ್ಯ ಅಂಗವಾಗಿದೆ. ಪೊಲೀಸ್ ತರಬೇತಿ ಸಮಯದಲ್ಲಿ ಬೆಳಗ್ಗೆ ನಾನು ಎಮ್ಮೆ ಹಾಲು ಕುಡಿದು ಬರುತ್ತಿದೆ. ಎಮ್ಮೆ ಈಗ ಕರು ಹಾಕಿದ್ದು ನನ್ನ ತಾಯಿಗೂ ಆರೋಗ್ಯ ಸರಿ ಇಲ್ಲ. ಆದ್ದರಿಂದ ನಾನು ಎಮ್ಮೆಯ ಯೋಗಕ್ಷೇಮ ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿ ಮೀನಾ ಅಧಿಕಾರಿಗಳು ನನ್ನ ರಜೆ ಪತ್ರವನ್ನು ಗಂಭೀರವಾಗಿ ಪರಿಗಣಿಸಬೇಕು. ನಿಜವಾದ ಕಾರಣ ಹೇಳಿಯೇ ನಾನು ರಜೆ ಪಡೆಯುತ್ತಿದ್ದೇನೆ ಎಂದು ಹೇಳದ್ದಾರೆ.

English summary
Madhya Pradesh 9th battalion police constable R. S. Meena asked for 6 days of leave. Her leave letter goes viral on social media. Meena seeking leave for take care of buffalo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X