ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.15ರಂದು ದೇಶದ ಮೊದಲ ವಿಶ್ವದರ್ಜೆಯ ರೈಲು ನಿಲ್ದಾಣ ಉದ್ಘಾಟಿಸಲಿರುವ ಪ್ರಧಾನಿ ಮೋದಿ

|
Google Oneindia Kannada News

ಭೋಪಾಲ್, ನವೆಂಬರ್ 11: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 15ರಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಹಬೀಬ್‌ಗಂಜ್‌ನಲ್ಲಿ ದೇಶದ ಮೊದಲ ವಿಶ್ವ ದರ್ಜೆಯ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಭೋಪಾಲ್‌ನ ಹಬೀಬ್‌ಗಂಜ್ ರೈಲು ನಿಲ್ದಾಣವು ದೇಶದ ಮೊದಲ ವಿಶ್ವ ದರ್ಜೆಯ ಮಾದರಿ ನಿಲ್ದಾಣವಾಗಿದೆ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಇದನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಬನ್ಸಾಲ್ ಗ್ರೂಪ್ ಎಂಬ ಖಾಸಗಿ ಕಂಪನಿ ನಿರ್ಮಿಸಿದೆ.

ಹಬೀಬ್‌ಗಂಜ್ ರೈಲು ನಿಲ್ದಾಣದ ಯೋಜನೆಯ ಒಟ್ಟು ವೆಚ್ಚ ಸುಮಾರು 450 ಕೋಟಿ ರೂಪಾಯಿಯಾಗಿದ್ದು, ಜನಸಂದಣಿಯನ್ನು ನಿಯಂತ್ರಿಸಲು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳಿವೆ.

PM Narendra Modi To Inaugurate Countrys First World Class Railway Station In Habibganj On November 15

ರೈಲ್ವೆ ಪ್ಲಾಟ್‌ಫಾರ್ಮ್‌ಗೆ ತಲುಪಲು ನಿಲ್ದಾಣದಲ್ಲಿ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳನ್ನು ಅಳವಡಿಸಲಾಗಿದೆ. ತೆರೆದ ಸಭಾಂಗಣದಲ್ಲಿ 700ರಿಂದ 1,100 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ರೈಲುಗಳ ಸಂಚಾರದ ಮಾಹಿತಿಗಾಗಿ ನಿಲ್ದಾಣದಾದ್ಯಂತ ವಿವಿಧ ಭಾಷೆಯ ಡಿಸ್‌ಪ್ಲೇ ಬೋರ್ಡ್‌ಗಳನ್ನು ಅಳವಡಿಸಲಾಗಿದೆ.

ಹಬೀಬ್‌ಗಂಜ್ ರೈಲು ನಿಲ್ದಾಣವು ಫುಡ್ ಕೋರ್ಟ್‌ಗಳು, ರೆಸ್ಟೋರೆಂಟ್‌ಗಳು, ಹವಾನಿಯಂತ್ರಿತ ಕಾಯುವ ಕೊಠಡಿಗಳು, ಡಾರ್ಮಿಟರಿ, ವಿಐಪಿ ಲಾಂಜ್‌ಗಳನ್ನು ಸಹ ಹೊಂದಿದೆ. ನಿಲ್ದಾಣದಲ್ಲಿ 160 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ರಾತ್ರಿಯಿಡೀ ಕಣ್ಗಾವಲು ಇಡಲಾಗಿದೆ.

ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಹಬೀಬ್‌ಗಂಜ್ ರಿಡೆವಲಪ್‌ಮೆಂಟ್‌ನ ಯೋಜನಾ ನಿರ್ದೇಶಕ ಅಬು ಆಸಿಫ್, "ಇದನ್ನು ಮಾದರಿ ನಿಲ್ದಾಣವಾಗಿ ಮರು ಅಭಿವೃದ್ಧಿಗೊಳಿಸಲಾಗಿದೆ. ಇದು ಭಾರತೀಯ ರೈಲ್ವೆಯ ಪ್ರಾಯೋಗಿಕ ಯೋಜನೆಯಾಗಿದೆ. ಯೋಜನೆಯು ಎರಡು ಭಾಗಗಳನ್ನು ಹೊಂದಿದೆ. ಒಂದು ರೈಲು ನಿಲ್ದಾಣದ ಭಾಗ ಮತ್ತು ಇನ್ನೊಂದು ವಾಣಿಜ್ಯವಾಗಿದೆ. ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಿಂದ ನಿಲ್ದಾಣದ ಇಪ್ಪತ್ನಾಲ್ಕು ಗಂಟೆಗಳ ಮೇಲ್ವಿಚಾರಣೆಯನ್ನು ಮಾಡಲಾಗುವುದು," ಎಂದು ಹೇಳಿದ್ದಾರೆ.

PM Narendra Modi To Inaugurate Countrys First World Class Railway Station In Habibganj On November 15

"ಪ್ರಯಾಣಿಕರ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು ಮತ್ತು ವರ್ಧಿತ ಅನುಭವವನ್ನು ನೀಡಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ಹೋಗಲು ಮುಕ್ತ ಸಂಗಮವಿದೆ. ನಿಲ್ದಾಣದಲ್ಲಿ ಆಹಾರ ವಲಯ, ಮಕ್ಕಳ ವಲಯ, ಮನರಂಜನಾ ವಲಯ ಮತ್ತು ವ್ಯಾಪಾರ ವಲಯಗಳಿವೆ" ಎಂದು ಅಬು ಆಸಿಫ್ ಹೇಳಿದರು.
English summary
Prime Minister Narendra Modi will unveil the country's first world class railway station in Habibganj of Madhya Pradesh, on November 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X