ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರ ಸಾವರ್ಕರ್ ಬಗ್ಗೆ ವಿವಾದದ ಕಿಡಿ ಹೊತ್ತಿಸಿದ ಕಾಂಗ್ರೆಸ್ ಬುಕ್ ಲೆಟ್?

|
Google Oneindia Kannada News

ಭೂಪಾಲ್, ಜನವರಿ.02: ಖ್ಯಾತ ಹಿಂದೂವಾದಿ ಎಂದು ಕರೆಯಲ್ಪಡುವ ವಿನಾಯಕ ದಾಮೋದರ್ ಸಾವರ್ಕರ್ ಹಾಗೂ ನಾಥುರಾಮ್ ಗೋಡ್ಸೆ ನಡುವೆ ದೈಹಿಕ ಸಂಪರ್ಕವಿತ್ತು ಎನ್ನಲಾಗಿದೆ. ಈ ಬಗ್ಗೆ ವಿವಾದಾತ್ಮಕ ಅಂಶವಿರುವ ಬುಕ್ ಲೆಟ್ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮಧ್ಯಪ್ರದೇಶದ ಭೂಪಾಲ್ ನಲ್ಲಿ ಅಖಿಲ ಭಾರತ ಕಾಂಗ್ರೆಸ್ ಸೇವಾ ದಳ ತರಬೇತಿ ಶಿಬಿರದಲ್ಲಿ 'How brave was Veer Savarkar' ಎಂಬ ಪುಸ್ತಕವನ್ನು ಹಂಚಿಕೆ ಮಾಡಲಾಗಿದೆ. ಈ ಪುಸ್ತಕದಲ್ಲಿ ವೀರ ಸಾವರ್ಕರ್ ಕಾಲದ ಕೆಲವು ಘಟನೆ, ಸನ್ನಿವೇಶ, ವಿವಾದ ಹಾಗೂ ಪ್ರಶ್ನೆಗಳನ್ನು ಕೇಳಲಾಗಿದೆ.

ಸಾವರ್ಕರ್ ಕುರಿತ ರಾಹುಲ್ ಹೇಳಿಕೆಗೆ ಉದ್ಧವ್ ಠಾಕ್ರೆ ಅಸಮಾಧಾನಸಾವರ್ಕರ್ ಕುರಿತ ರಾಹುಲ್ ಹೇಳಿಕೆಗೆ ಉದ್ಧವ್ ಠಾಕ್ರೆ ಅಸಮಾಧಾನ

ಒಂದು ಘಟನೆಯ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲಿ ಗಾಂಧೀಜಿಯವರನ್ನು ಕೊಂದ ನಾಥುರಾಮ್ ಗೋಡ್ಸೆ ಹಾಗೂ ವಿನಾಯಕ ದಾಮೋದರ್ ಸಾವರ್ಕರ್ ನಡುವೆ ದೈಹಿಕ ಸಂಪರ್ಕವಿತ್ತು ಎಂಬ ವಿವಾದಾತ್ಮಕ ಅಂಶವನ್ನು ಹೇಳಲಾಗಿದೆ.

 Physical Relationship Between Savarkar And Nathuram Godse Mentioned In Book

ವಿವಾದಾತ್ಮಕ ಪ್ರಶ್ನೆಗೆ ಹೌದು ಎಂಬ ಉತ್ತರ:

ವಿನಾಯಕ ದಾಮೋದರ್ ಸಾವರ್ಕರ್ ಬಗ್ಗೆ ಪುಸ್ತಕದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪೈಕಿ ಖಟ್ಟಾ ಹಿಂದೂವಾದಿ ಎಂದು ಕರೆಯಲ್ಪಡುವ ವೀರ ಸಾವರ್ಕರ್ ಅಲ್ಪಸಂಖ್ಯಾತ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವಂತೆ ಹಿಂದೂಗಳಿಗೆ ಪ್ರೇರೇಪಿಸುತ್ತಿದ್ದರಾ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಹೌದು ಎಂಬ ಉತ್ತರವನ್ನು ಬರೆದಿದ್ದು, ಮತ್ತೊಂದು ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

ಇದಿಷ್ಟೇ ಅಲ್ಲದೇ 12 ವರ್ಷದ ಬಾಲಕನಾಗಿದ್ದಾಗಲೇ ವೀರ ಸಾವರ್ಕರ್ ಮಸೀದಿಗೆ ಕಲ್ಲು ಹೊಡೆದಿದ್ದರು. ಆರ್ಎಸ್ಎಸ್ ಎಂಬ ಸಂಘಟನೆಯು ಹಿಟ್ಲರ್ ನ ನಾಜಿಯಿಸಂ ಹಾಗೂ ಮುಸ್ಲೋನಿಯ ಫ್ಯಾಸಿಯಿಸಂನಿಂದ ಪ್ರೇರೇಪಿತಗೊಂಡಿದೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

English summary
'Physical Relationship Between Veer Savarkar And Nathuram Godse' Mentioned In 'How brave was Veer Savarkar Book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X