• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶತಕ ಮುಟ್ಟಿದ ಪೆಟ್ರೋಲ್ ಬೆಲೆ; ವೈರಲ್ ಆಯ್ತು ಈ ಫೋಟೊ...

|

ಭೋಪಾಲ್, ಫೆಬ್ರುವರಿ 16: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಮುಖಿಯಾಗಿ ಸಾಗುತ್ತಲೇ ಇದೆ. ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುತ್ತಾ, ಇನ್ನಷ್ಟು ದುಬಾರಿಯಾಗುವ ಸೂಚನೆಯೂ ದೊರೆತಿದೆ. ಮಧ್ಯಪ್ರದೇಶದ ಭೋಪಾಲದಲ್ಲಿ ಶನಿವಾರ ಪೆಟ್ರೋಲ್ ಬೆಲೆ ಲೀಟರಿಗೆ ನೂರು ರೂಪಾಯಿ ಮುಟ್ಟಿದೆ.

ಕೊರೊನಾ ಸೋಂಕಿನ ನಡುವೆ ಜನ ಸಾಮಾನ್ಯರಿಗೆ ಇನ್ನಷ್ಟು ಹೊರೆ ತಂದಿರುವ ಇಂಧನ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಹಾಗೆಯೇ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿಯೂ ವ್ಯಕ್ತಿಯೊಬ್ಬರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅವರ ಈ ಪ್ರತಿಭಟನಾ ವೈಖರಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ...

ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮತ್ತೊಮ್ಮೆ ಏರಿಕೆ

 ಕ್ರಿಕೆಟ್ ಬ್ಯಾಟ್, ಹೆಲ್ಮೆಟ್ ಹಿಡಿದು ಪ್ರತಿಭಟನೆ

ಕ್ರಿಕೆಟ್ ಬ್ಯಾಟ್, ಹೆಲ್ಮೆಟ್ ಹಿಡಿದು ಪ್ರತಿಭಟನೆ

ಭೋಪಾಲದಲ್ಲಿ ಪೆಟ್ರೋಲ್ ಬಂಕ್ ಎದುರು ವ್ಯಕ್ತಿಯೊಬ್ಬರು ಕ್ರಿಕೆಟ್ ಬ್ಯಾಟ್ ಹಾಗೂ ಹೆಲ್ಮೆಟ್ ಎತ್ತಿಹಿಡಿದು ಪೋಸ್ ಕೊಟ್ಟಿದ್ದಾರೆ. ಇಂಧನ ಬೆಲೆ ಕೊನೆಗೂ ಶತಕ ಬಾರಿಸಿತು ಎಂಬುದನ್ನು ಬಿಂಬಿಸುತ್ತಿದ್ದು, ಭಿನ್ನ ರೀತಿ ಪ್ರತಿಭಟನೆ ನಡೆಸಿದ್ದಾರೆ. ಬ್ಯಾಟ್ ಹಾಗೂ ಹೆಲ್ಮೆಟ್ ಎತ್ತಿ ಹಿಡಿದಿರುವುದು ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಗಗನಮುಖಿಯಾಗುತ್ತಿರುವುದನ್ನು ಪ್ರತಿನಿಧಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

 ಮಧ್ಯ ಪ್ರದೇಶದಲ್ಲಿ ಬೆಲೆ ಇನ್ನೂ ಹೆಚ್ಚು

ಮಧ್ಯ ಪ್ರದೇಶದಲ್ಲಿ ಬೆಲೆ ಇನ್ನೂ ಹೆಚ್ಚು

ದೆಹಲಿಯಲ್ಲಿ ಲೀಟರ್ ಪೆಟ್ರೋಲಿಗೆ 89.29 ರೂ ಬೆಲೆ ಇದ್ದರೆ, ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಗೆ 95.75 ರೂ ನೀಡಬೇಕಿದೆ. ದೇಶದ ಇನ್ನೆಲ್ಲಾ ರಾಜ್ಯಗಳಿಗಿಂತ ಮಧ್ಯಪ್ರದೇಶದಲ್ಲಿ ಹೆಚ್ಚಿನ ಇಂಧನ ತೆರಿಗೆಯನ್ನು ವಿಧಿಸಲಾಗುತ್ತಿದೆ. ಹೀಗಾಗಿ ಮಧ್ಯಪ್ರದೇಶದಲ್ಲಿ ದೇಶದ ಎಲ್ಲೆಡೆಗಿಂತ ಹೆಚ್ಚಿಗೆ ಇಂಧನ ಬೆಲೆ ವಿಧಿಸಲಾಗಿದೆ.

 ವೈರಲ್ ಆದ ವ್ಯಕ್ತಿ ಫೋಟೊ

ವೈರಲ್ ಆದ ವ್ಯಕ್ತಿ ಫೋಟೊ

ಬೆಲೆ ಏರಿಕೆ ವಿರುದ್ಧ ಭಿನ್ನ ಪ್ರತಿಭಟನೆಯ ಈ ಫೋಟೊ ಇದೀಗ ವೈರಲ್ ಆಗಿದ್ದು, ಕೇಂದ್ರ ಸರ್ಕಾರದ ಬೆಲೆ ಏರಿಕೆಗೆ ನೆಟಿಜನ್ ಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಫೋಟೊವನ್ನು ಹಲವರು ಹಂಚಿಕೊಂಡಿದ್ದಾರೆ. "ಸಾಕಷ್ಟು ಪರಿಶ್ರಮ ಹಾಗೂ ಹೋರಾಟದ ನಂತರ ಕೊನೆಗೂ ಸಾಧ್ಯವಾಗಿದೆ" ಎಂದು ಅಡಿಬರಹದೊಂದಿಗೆ ಕೇಂದ್ರ ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ವ್ಯಂಗ್ಯ ಮಾಡಿದ್ದಾರೆ.

 ಈ ವರ್ಷ 19 ಬಾರಿ ಏರಿಕೆಯಾದ ಇಂಧನ ಬೆಲೆ

ಈ ವರ್ಷ 19 ಬಾರಿ ಏರಿಕೆಯಾದ ಇಂಧನ ಬೆಲೆ

2021ರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 19 ಬಾರಿ ಏರಿಕೆಯಾಗಿದೆ. ಇದುವರೆಗೂ ಪೆಟ್ರೋಲ್ ಗೆ 5.28 ರೂ ಏರಿಕೆಯಾದ್ದರೆ, ಡೀಸೆಲ್‌ಗೆ 5.48 ರೂ ಆಗಿದೆ. ಕೊನೆಯ ಎರಡು ಏರಿಕೆಗಳು ಇಂಧನ ಬೆಲೆಯನ್ನು ದಾಖಲೆ ಮಟ್ಟವನ್ನು ತಲುಪಿಸಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗಲಿವೆ ಎಂದು ತೈಲ ಉತ್ಪಾದನಾ ತಜ್ಞರು ಮಾಹಿತಿ ನೀಡಿದ್ದಾರೆ.

English summary
A man in Bhopal of madhya pradesh staged a unique form of protest against petrol price rise. A photo of him standing infront of petrol pump with a cricket bat and a helmet went viral in social media,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X