ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಆಕ್ಸಿಜನ್ ಸಿಲಿಂಡರ್ ಕೊರತೆ, 4 ಕೊರೊನಾ ಸೋಂಕಿತರು ಸಾವು

|
Google Oneindia Kannada News

ಭೋಪಾಲ್, ಸೆಪ್ಟೆಂಬರ್ 11: ಆಕ್ಸಿಜನ್ ಸಿಲಿಂಡರ್ ಕೊರತೆಯಿಂದಾಗಿ ನಾಲ್ವರು ಕೊರೊನಾ ಸೋಂಕಿತರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ರಾಜ್ಯ ಸರ್ಕಾರವು ಅಮಲ್ತಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ ಖಾಸಗಿ ಆಸ್ಪತ್ರೆಯನ್ನು ಕೊವಿಡ್ ಕೇಂದ್ರವಾಗಿ ಮಾರ್ಪಾಡು ಮಾಡಿತ್ತು.ರೋಗಿಗಳಿಗೆ ಕಡಿಮೆ ಪ್ರಮಾಣದ ಆಕ್ಸಿಜನ್ ಒದಗಿಸಲಾಗುತ್ತಿತ್ತು, ಹೀಗಾಗಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ 45 ಲಕ್ಷದ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ ಭಾರತದಲ್ಲಿ 45 ಲಕ್ಷದ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ

ಆಮ್ಲಜನಕ ಪೂರೈಕೆಯ ಸಮಸ್ಯೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಆದರೆ ಈ ಸಾವು ಮತ್ತು ಆ ವಿಷಯಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

Oxygen Cylinder Shortage 4 Covid Patients Die In Madhya Pradesh

ಅಮಲ್ಟಾಸ್ ಆಸ್ಪತ್ರೆ 40 ಸಿಲಿಂಡರ್‌ಗಳನ್ನು ಹೊಂದಿದ್ದು, ಅವರು ನಿತ್ಯ ಸುಮಾರು 200 ಸಿಲಿಂಡರ್ ಬಳಸುತ್ತಿದ್ದಾರೆ.ಸಾವು ಆಮ್ಲಜನಕದ ಕೊರತೆ ಇಂದ ಆಗಿದೆ ಎಂಬುದರ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ.ಇಂದೋರ್, ಭೋಪಾಲ್ ಸೇರಿದಂತೆ 15 ಜಿಲ್ಲೆಗಳಿಗೆ ಮಹಾರಾಷ್ಟ್ರವು ಸಿಲಿಂಡರ್ ಪೂರೈಸುತ್ತಿದೆ.

ಕೊರೊನಾದಿಂದ ಚೇತರಿಸಿಕೊಂಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ , ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಳಿ ಮಾತನಾಡಿದ್ದಾರೆ. ಆಮ್ಲಜನಕ ಕೊರತೆ ದೊಡ್ಡ ತಲೆನೋವಾಗಿದೆ.

ಯಾವುದೇ ಕಾರಣಕ್ಕೂ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಬೇಡಿ ಎಂದು ಮನವಿ ಮಾಡಿದ್ದಾರೆ.ಉದ್ಧವ್ ಠಾಕ್ರೆ ಕೂಡ ಮನವಿಗೆ ಸ್ಪಂದಿಸಿದ್ದು ಯಾವುದೇ ಕಾರಣಕ್ಕೂ ಆಕ್ಸಿಜನ್ ಪೂರೈಕೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

Recommended Video

Zameer Ahmed ಗರಂ Sambargi ವಿರುದ್ಧ ಬಿತ್ತು ಸಿಕಾಪಟ್ಟೆ ಸೆಕ್ಷನ್ | Oneindia Kannada

ಮಧ್ಯಪ್ರದೇಶದಲ್ಲಿ 50 ಟನ್‌ ಅಷ್ಟು ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯವಿದೆ. ಅದನ್ನು ಈಗ 120 ಟನ್‌ಗಳಿಗೆ ವಿಸ್ತರಿಸಲಾಗಿದೆ. ಸೆಪ್ಟೆಂಬರ್ 30ರೊಳಗೆ ಅದನ್ನು 150 ಟನ್‌ಗಳಿಗೆ ಹೆಚ್ಚಿಸಲಾಗುತ್ತದೆ. ಎಂದು ತಿಳಿಸಿದ್ದಾರೆ.

English summary
Kangana Ranaut has been in the news after the Brihanmumbai Municipal Corporation (BMC) demolished her office in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X