ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಯಾಗಿ ಕುದುರೆ ಏರಿದ ಮದುಮಗನಿಗೆ ಹಿಗ್ಗಾಮುಗ್ಗ ಥಳಿತ!

|
Google Oneindia Kannada News

ಭೂಪಾಲ್, ಡಿಸೆಂಬರ್.03: ಮದುವೆ ಮಾಡಿಕೊಂಡ ಸಂಭ್ರಮದಲ್ಲಿ ಕುದುರೆ ಏರಿ ಮೆರವಣಿಗೆ ಹೊರಟಿದ್ದ ಮದುಮಗನನ್ನೇ ಹಿಡಿದು ಥಳಿಸಿರುವಂತಾ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ದಲಿತ ವರ್ಗದ ವ್ಯಕ್ತಿಯೊಬ್ಬ ಕುದುರೆ ಸವಾರಿ ಮಾಡಿದ್ದಕ್ಕೆ ಮೇಲ್ವರ್ಗದ ಜನರು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಷ್ಟಕ್ಕೂ ಇಂಥದೊಂದು ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ನಡೆದಿದೆ. ಡಿಸೆಂಬರ್.01ರಂದು ಭದ್ವಾಸಿ ಗ್ರಾಮದ ಧರ್ಮೆಂದ್ರ ಮೆವಾಡ ಲೋಹರ್ ವಿವಾಹ ಮಹೋತ್ಸವ ನಡೆಯಿತು. ನಂತರ ನಡೆದ ಮೆರವಣಿಗೆಯಲ್ಲಿ ಮದುಮಗ ಕುದುರೆ ಏರಿ ಸವಾರಿ ಶುರು ಮಾಡಿದ್ದಾನೆ.

ಚಿಲ್ಲರೆ' ಕಾರಣಕ್ಕೆ ಪ್ರಯಾಣಿಕನ ಮೇಲೆ ತೀವ್ರ ಹಲ್ಲೆ ನಡೆಸಿದ ಬಸ್ ನಿರ್ವಾಹಕಚಿಲ್ಲರೆ' ಕಾರಣಕ್ಕೆ ಪ್ರಯಾಣಿಕನ ಮೇಲೆ ತೀವ್ರ ಹಲ್ಲೆ ನಡೆಸಿದ ಬಸ್ ನಿರ್ವಾಹಕ

ಹಿಂದುಳಿದ ವರ್ಗಕ್ಕೆ ಸೇರಿದ ಧರ್ಮೆಂದ್ರ ಮೆವಾಡ ಲೋಹರ್ ಕುದುರೆ ಸವಾರಿ ಮಾಡುವುದಕ್ಕೆ ಮೇಲ್ವರ್ಗದ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಜುಬನ್ ಸಿಂಗ್ ರಜಪುತ್ ಎಂಬಾತ ಕುದುರೆ ಬಿಟ್ಟು ಕೆಳಗೆ ಇಳಿಯುವಂತೆ ಆವಾಜ್ ಹಾಕಿದ್ದಾನೆ.

OBC Groom Attacked By Upper Caste Men.

ಕುದುರೆ ಇಳಿಯದಿದ್ದಕ್ಕೆ ಕೈಕೊಟ್ಟ ಸಮಯ

ಜುಬನ್ ಸಿಂಗ್ ರಜಪುತ್ ಬೆದರಿಕೆಗೆ ಅಂಜದೆ ಮದುಮಗನು ಕುದುರೆ ಸವಾರಿ ಮುಂದುವರಿಸಿದ್ದಾರೆ. ಇದರಿಂದ ಕೆಳಳಿದ ಮೇಲ್ವರ್ಗದ ಕೆಲ ಜನರು ಮದುಮಗ ಧರ್ಮೆಂದ್ರ ಮೆವಾಡ ಲೋಹರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಮದುಮಗ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.

ಕಳೆದ ಡಿಸೆಂಬರ್.01ರಂದು ನಡೆದ ಘಟನೆ ಬಗ್ಗೆ ಅಗರ್ ಮಾಲ್ವಾದ ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಪ್ರದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ಕೇಸ್ ದಾಖಲಿಸಿಕೊಂಡಿದ್ದು, ಈಗಾಗಲೇ 12 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಆಸ್ತಿ ಹಾನಿ ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪ್ರದೀಪ್ ಪಾಟೀಲ್ ಹೇಳಿದ್ದಾರೆ.

English summary
OBC Groom Forced Off Horse, Wedding Procession Attacked By Upper Caste Men.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X