ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನೋ ಪ್ರಾಬ್ಲಮ್' , ಬಹುಮತ ಸಾಬೀತುಪಡಿಸಲು ಸಿದ್ಧ: ಕಮಲನಾಥ್

|
Google Oneindia Kannada News

ಭೋಪಾಲ್, ಮೇ 20: ಕಮಲನಾಥ್ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಅಲ್ಪಮತಕ್ಕೆ ಕುಸಿದಿದೆ, ಮೊದಲಿಗೆ ಬಹುಮತ ಸಾಬೀತುಪಡಿಸಿ ನಂತರ ರಾಜ್ಯಭಾರ ಮಾಡಲಿ ಎಂದು ಬಿಜೆಪಿ ಎಸೆದ ಸವಾಲನ್ನು ಕಮಲನಾಥ್ ಸ್ವೀಕರಿಸಿದ್ದಾರೆ. ನೋ ಪ್ರಾಬ್ಲಮ್, ಬಹುಮತ ಸಾಬೀತುಪಡಿಸಲು ಸಿದ್ಧ ಎಂದಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

'ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ನಾವು ಸಿದ್ಧ. ನಮ್ಮ ಸರ್ಕಾರಕ್ಕೆ ಯಾವುದೇ ರೀತಿಯ ಬಹುಮತದ ಕೊರತೆಯಾಗಿಲ್ಲ' ಎಂದು ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ ಅವರು ಸ್ಪಷ್ಟಪಡಿಸಿದ್ದಾರೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೂ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಕಳೆದ 5 ತಿಂಗಳಲ್ಲಿ ನಾನು ನಾಲ್ಕು ಬಾರಿ ಬಹುಮತ ಸಾಬೀತುಪಡಿಸಿದ್ದೇನೆ. ಇನ್ನೊಮ್ಮೆ ಸಾಬೀತುಪಡಿಸಲು ನಮಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಕಮಲ್​ನಾಥ್​ ಹೇಳಿದರು.

‘No problem’: MP CM Kamal Nath ready for floor test to prove majority

ಕಾಂಗ್ರೆಸ್ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಬೇಕಿದೆ ಜೊತೆಗೆ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ಶಾಸಕ ಗೋಪಾಲ್​ ಭಾರ್ಗವ ಅವರು ರಾಜ್ಯಪಾಲ ಆನಂದಿಬೆನ್ ಪಟೇಲ್​ ಅವರಿಗೆ ಪತ್ರ ಬರೆದಿದ್ದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸಂಕಷ್ಟ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸಂಕಷ್ಟ

ಮೇ 29ರಂದು ಪ್ರಕಟವಾದ ಲೋಕಸಭೆ ಚುನಾವಣೆ 2019ರ ಎಕ್ಸಿಟ್ ಪೋಲ್ ಪ್ರಕಾರ ಮಧ್ಯಪ್ರದೇಶದಲ್ಲಿ 29 ಸ್ಥಾನಗಳನ್ನು ಗೆಲ್ಲಲಿದ್ದು, ಕಾಂಗ್ರೆಸ್ ಕೇವಲ 5 ಸ್ಥಾನ ಗಳಿಸಲಿದೆ ಎಂದು ವರದಿ ಬಂದಿದೆ. 2018ರ ವಿಧಾನಸಭೆ ಫಲಿತಾಂಶದಲ್ಲಿ 230 ಸ್ಥಾನಗಳ ಪೈಕಿ ಕಾಂಗ್ರೆಸ್ 114 ಸ್ಥಾನ ಗಳಿಸಿತ್ತು. ಬಿಜೆಪಿ 109, ಬಿಎಸ್ಪಿ 2,ಎಸ್ಪಿ 1 ಹಾಗೂ ಪಕ್ಷೇತರರು 4 ಮಂದಿ ಶಾಸಕರಾಗಿದ್ದರು.

English summary
Hitting out at the BJP for causing disruptions, the Chief Minister said, "They (BJP) have been trying this since day 1. I have proved the majority at least four times in the last months. They want to do it again, we have no problem."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X