ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್‌ಗಢದ ಗ್ರಾಮಸ್ಥರಿಗೆ ರಫೇಲ್ ಹೆಸರಿನ ಕಿರಿಕಿರಿ

|
Google Oneindia Kannada News

ರಾಯ್ಪುರ, ಏ.16: ರಾಷ್ಟ್ರರಾಜಕಾರಣದಲ್ಲಿ ಸದ್ದು ಮಾಡಿರುವ ರಫೇಲ್ ಛತ್ತೀಸ್‌ಗಢದ ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ.

ಆದರೆ ಅವರಿಗೆ ರಫೇಲ್ ಯುದ್ಧ ವಿಮಾನದಿಂದ ಬಾಂಬ್ ಏನೂ ಹಾಕಲಾಗಿಲ್ಲ ಆ ಹಳ್ಳಿಯ ಹೆಸರೇ ರಫೇಲ್ ಎಂದಿರುವುದು ಸ್ಥಳೀಯ ಸಮಸ್ಯೆಗೆ ಕಾರಣವಾಗಿದೆ.

ಆ ಹಳ್ಳಿಯ ಹೆಸರೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಇದು ಸ್ಥಳೀಯರಿಗೆ ಹೆಮ್ಮೆ ಮೂಡಿಸುವ ವಿಷಯವಾಗಿಲ್ಲ.

Name of this villages is rafel that why it is upset

ಬದಲಾಗಿ ಮುಜುಗರ ಉಂಟು ಮಾಡುತ್ತಿದೆ. ಹೀಗಾಗಿ ಹಳ್ಳಿಯ ಹೆಸರನ್ನೇ ಬದಲಾಯಿಸಿ ಎಂಬ ಒತ್ತಾಯ ಅವರದ್ದು.

ಅಂದ ಹಾಗೆ ಆ ಹಳ್ಳಿಯ ಹೆಸರು ರಫೆಲ್. ಛತ್ತೀಸ್‌ಗಢದ ಮಹಾಮಂದ್ ಕ್ಷೇತ್ರ ವ್ಯಾಪ್ತಿಯಲ್ಲಿರುವ ರಫೆಲ್ ಗ್ರಾಮದಲ್ಲಿ 200ಕ್ಕೂ ಹೆಚ್ಚು ಕುಟುಂಬಗಳಿವೆ. ಯಾವುದೇ ಚುನಾವಣೆಗೆ ಅಭ್ಯರ್ಥಿಗಳು ಪ್ರಚಾರಕ್ಕೂ ಬರುತ್ತಿಲ್ಲ, ಅಕ್ಕಪಕ್ಕದ ಊರಿನವರು ಇವರನ್ನು ಆಡಿಕೊಳ್ಳುತ್ತಿದ್ದಾರೆ.

ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಚರ್ಚೆ ಆದಾಗಲೆಲ್ಲ ಈ ಹಳ್ಳಿಯ ಹೆಸರು ನಗೆಪಾಟಲಿಗೆ ಗುರಿಯಾಗುತ್ತಿದೆ. ಮೂಲಸೌಕರ್ಯವೂ ಇಲ್ಲದೆ ಈ ಹಳ್ಳಿಯ ಹೆಸರನ್ನೇ ಬಲಾಯಿಸಿ ಎಂದು ಮುಖ್ಯಮಂತ್ರಿಗೆ ಆಗ್ರಹಿಸಲು ನಿರ್ಧರಿಸಿದ್ದಾರೆ.

English summary
Rafale fighter gets making sounds in indian politics bu this Rafel name become irritaion for the Chhattisgarh villages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X