ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶುಪತಿನಾಥ ದೇವಾಲಯದಲ್ಲಿ ಮುಸ್ಲಿಂ ವ್ಯಕ್ತಿಯ ಪರಿಕಲ್ಪನೆಗೆ ಭಕ್ತಾದಿಗಳು ಫಿದಾ

|
Google Oneindia Kannada News

ಭೋಪಾಲ್, ಜೂನ್ 28: ಪ್ರಾರ್ಥನಾ ಮಂದಿರ ಆರಂಭಿಸಲು ಸರಕಾರದಿಂದ ಅನುಮತಿ ಸಿಕ್ಕಿದ್ದರೂ, ಹಲವು ಷರತ್ತುಗಳನ್ನು ವಿಧಿಸಿರುವುದು ಗೊತ್ತೇ ಇದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಪ್ರಸಾದ ವಿತರಣೆ ಮಾಡುವಂತಿಲ್ಲ.. ಹೀಗೆ ಹಲವು ನಿಯಮಗಳನ್ನು ಪಾಲಿಸಲೇಬೇಕಿದೆ.

ರಾಜಧಾನಿ ಭೋಪಾಲ್ ನಿಂದ ಸುಮಾರು 320 ಕಿಲೋಮೀಟರ್ ದೂರದಲ್ಲಿರುವ ಪುರಾಣ ಪ್ರಸಿದ್ದ ಪಶುಪತಿನಾಥ ದೇವಾಲಯ ಅಥವಾ ಮಂಡ್ಸೂರು ಶಿವ ದೇವಾಲಯದಲ್ಲಿ, ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬನ ಪರಿಕಲ್ಪನೆಯಿಂದಾಗಿ ಹೊಸ ಪದ್ದತಿಯನ್ನು ಜಾರಿಗೆ ತರಲಾಗಿದೆ.

ಮೇಲುಕೋಟೆಗೆ ಹರಕೆ ತೀರಿಸಲು ಬಂದ ಮಧ್ಯಪ್ರದೇಶ ಸಿಎಂಮೇಲುಕೋಟೆಗೆ ಹರಕೆ ತೀರಿಸಲು ಬಂದ ಮಧ್ಯಪ್ರದೇಶ ಸಿಎಂ

ಶಿವ್ನಾ ನದಿ ದಂಡೆಯಲ್ಲಿರುವ ಅಷ್ಟಮುಖ ಶಿವನ ದೇವಾಲಯ ಇದಾಗಿದೆ. ಐದು ಅಥವಾ ಆರನೇ ಶತಮಾನದ ಶಿವನ ದೇವಸ್ಥಾನ ಇದೆಂದು ಹೇಳಲಾಗುತ್ತದೆ ಮತ್ತು ಈ ಕ್ಷೇತ್ರವನ್ನು ದಶಾಪುರ ಎಂದೂ ಕರೆಯಲಾಗುತ್ತದೆ.

ವಿಶ್ವ ಹಿಂದೂ ಪರಿಷತ್ ಮುಖಂಡನ ಕೊಲೆ ವಿಡಿಯೋ ವೈರಲ್ವಿಶ್ವ ಹಿಂದೂ ಪರಿಷತ್ ಮುಖಂಡನ ಕೊಲೆ ವಿಡಿಯೋ ವೈರಲ್

ಲಾಕ್ ಡೌನ್ ನಂತರ ಈ ದೇವಾಲಯವೂ ಭಕ್ತರ ಪ್ರವೇಶಕ್ಕೆ ಮುಕ್ತವಾಗಿತ್ತು. ಹಲವು ಷರತ್ತುಗಳನ್ನು ಭಕ್ತರಿಗೆ ಹಾಕಲಾಗಿತ್ತು. ಅದರಲ್ಲಿ ಗಂಟೆಯನ್ನು ಮೊಳಗಿಸಬಾರದೆಂದು ಎನ್ನುವುದೂ ಒಂದು. ನಹ್ರೂ ಖಾನ್ ವಿಶಿಷ್ಟ ಪರಿಕಲ್ಪನೆ, ಮುಂದೆ ಓದಿ...

ರಾಜಸ್ಥಾನದ ಗಡಿಯಲ್ಲಿರುವ ಪಶುಪತಿನಾಥ ದೇವಾಲಯ

ರಾಜಸ್ಥಾನದ ಗಡಿಯಲ್ಲಿರುವ ಪಶುಪತಿನಾಥ ದೇವಾಲಯ

ರಾಜಸ್ಥಾನದ ಗಡಿಯಲ್ಲಿರುವ ಪಶುಪತಿನಾಥ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಗಂಟೆಯನ್ನು ಮೊಳಗಿಸಬಾರದು ಎನ್ನುವ ನಿಯಮವನ್ನು ಹಾಕಲಾಗಿದೆ. ಕಾರಣ, ಎಲ್ಲರೂ ಗಂಟೆಯನ್ನು ಮೊಳಗಿಸಿದರೆ, ಅದರಿಂದ ಕೊರೊನಾ ಸೋಂಕು ಹರಡಬಹುದು ಎನ್ನುವ ಮುಂಜಾಗೃತೆಗಾಗಿ.

ಆಜಾನ್ ಅನ್ನು ಕೇಳುತ್ತೇವೆ, ಗಂಟೆಯ ಶಬ್ದವನ್ನೂ ನಾವು ಕೇಳಬೇಕು

ಆಜಾನ್ ಅನ್ನು ಕೇಳುತ್ತೇವೆ, ಗಂಟೆಯ ಶಬ್ದವನ್ನೂ ನಾವು ಕೇಳಬೇಕು

ಆದರೆ, ಅದೇ ಪ್ರದೇಶದ ನಿವಾಸಿಯಾಗಿರುವ ನಹ್ರೂ ಖಾನ್ ಎನ್ನುವ ವ್ಯಕ್ತಿ ವಿಶಿಷ್ಟ ಕಲ್ಪನೆಯೊಂದನ್ನು ದೇವಾಲಯದ ಆಡಳಿತ ಮಂಡಳಿಗೆ ನೀಡಿದ್ದಾರೆ. ನಾವು, ಆಜಾನ್ ಅನ್ನು ಕೇಳುತ್ತೇವೆ, ಗಂಟೆಯ ಶಬ್ದವನ್ನೂ ನಾವು ಕೇಳಬೇಕು ಎನ್ನುವುದು ಇವರ ಧಾರ್ಮಿಕ ಭಾವೈಕ್ಯತೆ.

ಗಂಟೆಯನ್ನು ಮುಟ್ಟದೆಯೇ ಗಂಟೆ ಮೊಳಗುತ್ತದೆ

ಗಂಟೆಯನ್ನು ಮುಟ್ಟದೆಯೇ ಗಂಟೆ ಮೊಳಗುತ್ತದೆ

ದೇವಾಲಯದ ಗಂಟೆಯನ್ನು ಮುಟ್ಟದೆಯೇ ಗಂಟೆ ಮೊಳಗುತ್ತದೆ, ಇದು ಖಾನ್ ಪರಿಕಲ್ಪನೆ. ಗಂಟೆಯ ಕೆಳಗೆ ಕೈಯಾಡಿಸಿದರೆ ಸಾಕು ಗಂಟೆ ಮೊಳಗಲು ಆರಂಭವಾಗುತ್ತದೆ. ಅದಕ್ಕೆ ಕಾರಣ ಗಂಟೆಗೆ ಅಳವಡಿಸಲಾಗಿರುವ ಸೆನ್ಸಾರ್. ಇದರಿಂದ ಕೋವಿಡ್ ಹಾವಳಿಯಿಂದ ಎಚ್ಚರಿಕೆಯಿಂದ ಇರಲು, ಸ್ಪರ್ಶಿಸದೆಯೇ ಭಕ್ತರು ಗಂಟೆ ಮೊಳಗಿಸಬಹುದಾಗಿದೆ. ದೇವಾಲಯದ ಆಡಳಿತ ಮಂಡಳಿ, ಅರ್ಚಕರು ಮತ್ತು ಅಸಂಖ್ಯಾತ ಭಕ್ತರು ನಹ್ರೂ ಖಾನ್ ಪರಿಕಲ್ಪನೆಗೆ ಫಿದಾ ಆಗಿದ್ದಾರೆ, ಈ ಕ್ರಮವನ್ನು ಶ್ಲಾಘಿಸಿದ್ದಾರೆ.

ನಹ್ರೂ ಖಾನ್ ಪರಿಕಲ್ಪನೆಗೆ ಫಿದಾ

ನಹ್ರೂ ಖಾನ್ ಪರಿಕಲ್ಪನೆಗೆ ಫಿದಾ

"ನಾವು ಆಜಾನ್ ಅನ್ನು ಕೇಳುತ್ತೇವೆ, ಆದರೆ, ದೇವಾಲಯದ ಘಂಟೆಯ ಶಬ್ದ ಕೇಳಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಘಂಟೆಗಳ ಶಬ್ದವನ್ನೂ ಸಹ ಕೇಳುವಂತಹ ಕೆಲಸವನ್ನು ಏಕೆ ಮಾಡಬಾರದು ಎಂದು ನಾನು ಯೋಚಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾನು ಅದರ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ. ದೇವಾಲಯದ ಗಂಟೆಯನ್ನು ಸೆನ್ಸಾರ್‌ ಗಳೊಂದಿಗೆ ಏಕೆ ಸಂಪರ್ಕಿಸಬಾರದು ಎಂಬ ಕಲ್ಪನೆ ನನಗೆ ಬಂದಿತು" ಎಂದು ನಹ್ರೂ ಖಾನ್ ಹೇಳುತ್ತಾರೆ.

English summary
Nahru Khan Installed Contactless Sensor Based Bell In Pashupatinath Temple In Mandasur, Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X