ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಯಾದ ಜೋಡಿಗೆ 55 ಸಾವಿರ ರೂ. ಉಡುಗೊರೆ ನೀಡಿದ ಮಧ್ಯಪ್ರದೇಶ ಸಿಎಂ

|
Google Oneindia Kannada News

ಭೋಪಾಲ್, ಏಪ್ರಿಲ್ 22: ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಸೆಹೋರ್ ಜಿಲ್ಲೆಯ ನಸ್ರುಲ್ಲಗಂಜ್‌ನಲ್ಲಿ 'ಕನ್ಯಾ ವಿವಾಹ ಯೋಜನೆ' ಗೆ ಮರು ಚಾಲನೆ ನೀಡಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಚೌಹಾಣ್, ಮಗಳನ್ನು ಹೊರೆ ಎಂದು ಪರಿಗಣಿಸುವ ರಾಜ್ಯದ ಎಲ್ಲಾ ಸಹೋದರ ಸಹೋದರಿಯರಿಗೆ ನಾನು ಹೇಳಲು ಬಯಸುತ್ತೇನೆ. ಈ ಹೆಣ್ಣು ಮಕ್ಕಳ ಚಿಕ್ಕಪ್ಪ ರಾಜ್ಯದ ಮುಖ್ಯಮಂತ್ರಿ ಎಂದು ಧೈರ್ಯವಾಗಿರಿ. ಈ ತಾಯಂದಿರ ಚಿಕ್ಕಪ್ಪ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಾರೆ ಎಂದು ಚಿಂತೆಯಿಂದ ದೂರವಿರಿ ಎಂದಿದ್ದಾರೆ.

ನಿನ್ನೆ ನಸ್ರುಲ್ಲಾಗಂಜ್‌ನಲ್ಲಿ ಇಡೀ ರಾಜ್ಯದ ಹೆಣ್ಣು ಮಕ್ಕಳ ಮದುವೆ ಸಮಾರಂಭ ನಡೆಯಿತು. ಇದರಲ್ಲಿ 457 ಹೆಣ್ಣು ಮಕ್ಕಳು ವಿವಾಹವಾದರು. ಮದುವೆಯಾದ ಜೋಡಿಗೆ ಒಟ್ಟು 55 ಸಾವಿರ ರೂ. ಎಲ್‌ಇಡಿ ಟಿವಿ, ಪಾತ್ರೆ, ಬಟ್ಟೆ, ಹಾಸಿಗೆ, ಸೀಲಿಂಗ್ ಫ್ಯಾನ್, ಚಿನ್ನಾಭರಣ ಹೀಗೆ ರೂ.11 ಸಾವಿರ ಚೆಕ್ ಕೂಡ ನೀಡಿದ್ದಾರೆ. ಮೆರವಣಿಗೆ ಸ್ವಾಗತದ ಸಮಯದಲ್ಲಿ ಮುಖ್ಯಮಂತ್ರಿ ಚೌಹಾಣ್ ಅವರ ಪತ್ನಿ ಶ್ರೀಮತಿ ಸಾಧನಾ ಸಿಂಗ್, ಸೆಹೋರ್ ಜಿಲ್ಲಾ ಉಸ್ತುವಾರಿ ಸಚಿವ ಡಾ. ಪ್ರಭುರಾಮ್ ಚೌಧರಿ ಮತ್ತು ಸಂಸದ ರಮಾಕಾಂತ್ ಭಾರ್ಗವ ಅವರೊಂದಿಗೆ ಇದ್ದರು. ನಸ್ರುಲ್ಲಾಗಂಜ್‌ನಲ್ಲಿ ಮೆರವಣಿಗೆಗೆ ಮಹಿಳೆಯರು, ಮಕ್ಕಳು ಮತ್ತು ಅಪಾರ ಸಂಖ್ಯೆಯ ಜನರು ಪುಷ್ಪವೃಷ್ಟಿ ಮಾಡುವ ಮೂಲಕ ಸಂಭ್ರಮದಿಂದ ಸ್ವಾಗತಿಸಿದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೆರವಣಿಗೆಯಲ್ಲಿ ತೆರೆದ ಜೀಪಿನಲ್ಲಿ ಭಾಗಿಯಾಗಿದ್ದರು.

Mukhya Mantri Kanya Vivah Yojana started again by Madhya Pradesh CM

ಈ ವೇಳೆ ಮಾತನಾಡಿದ ಅವರು, 'ಚಿಂತಿಸಬೇಡಿ ಹೆಣ್ಣುಮಕ್ಕಳ ಷೋಷಕರ ಸ್ಥಾನದಲ್ಲಿ ನಿಂತು ನಾನು ಅವರಿಗೆ ಎಲ್ಲಾ ಸಹಾಯವನ್ನು ಮಾಡುತ್ತೇನೆ. ಅವರ ಜೀವನವನ್ನು ಉತ್ತಮ ಮತ್ತು ಸಂತೋಷದಿಂದ ಇರಬೇಕು. ನಾವು ಈ ಪ್ರಯತ್ನದಲ್ಲಿ ತೊಡಗಿದ್ದೇವೆ. ಮದುವೆಯ ನಂತರವೂ ಬೇಕಾದರೆ ಚಿಕ್ಕಪ್ಪನ ಸ್ಥಾನದಲ್ಲಿ ನಿಂತು ಅವರನ್ನು ನೋಡಿಕೊಳ್ಳುತ್ತೇನೆ. ಅವರು ಯಾರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೋ ಅವರ ಜೀವನ ಸುಖಮಯವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಹೇಳಿದರು.

Mukhya Mantri Kanya Vivah Yojana started again by Madhya Pradesh CM

ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸೆಹೋರ್‌ನ ನಸ್ರುಲ್ಲಗಂಜ್‌ನಿಂದ ಮರುಪ್ರಾರಂಭಿಸಿದರು. ಈ ಯೋಜನೆಯಡಿ ಹೆಣ್ಣು ಮಗುವಿಗೆ 55 ಸಾವಿರ ಆರ್ಥಿಕ ನೆರವು ನೀಡಲಾಗುತ್ತದೆ. ಇದರಲ್ಲಿ 38 ಸಾವಿರ ರೂ.ಮೌಲ್ಯದ ಗೃಹೋಪಯೋಗಿ ವಸ್ತುಗಳು, 11 ಸಾವಿರ ರೂ. ಚೆಕ್ ಹಾಗೂ ಇತರೆ ವ್ಯವಸ್ಥೆಗಾಗಿ 6 ​​ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ.

Recommended Video

T20 ವಿಶ್ವಕಪ್ ಜೊತೆಗೆ ಮದುವೆಯಾಗೋದಕ್ಕೆ ರೆಡಿಯಾದ ಕೆಎಲ್ ರಾಹುಲ್ | Oneindia Kannada

English summary
Chief Minister Shivraj Singh Chouhan’s ambitious “Kanya Vivah Yojana” was started again today from Nasrullaganj in Sehore district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X