ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: 90ರ ವಯಸ್ಸಿಗೆ ಕಾರು ಚಾಲನೆ ಮಾಡಿದ ವೃದ್ಧೆಗೆ ಶ್ಲಾಘನೆ

|
Google Oneindia Kannada News

ದೇವಾಸ್, ಸೆಪ್ಟೆಂಬರ್ 24: ಯಾವುದೇ ಒಂದು ಕಲೆಯನ್ನು ಮೈಗೂಡಿಸಿಕೊಳ್ಳಲು ವಯಸ್ಸಿನ ಹಂಗಿಲ್ಲ ಆಸಕ್ತಿ ಒಂದಿದ್ದರೆ ಸಾಕು ಎಂಬುದಕ್ಕೆ 90 ವರ್ಷದ ವೃದ್ಧರೊಬ್ಬರು ಸಾಕ್ಷಿಯಾಗಿದ್ದಾರೆ.

ನನ್ನ ಮಗಳು ಮತ್ತು ಸೊಸೆಯರು ಸೇರಿದಂತೆ ಕುಟುಂಬದ ಎಲ್ಲಿರಿಗೂ ಡ್ರೈವಿಂಗ್ ಗೊತ್ತು. ಹೀಗಾಗಿ ನಾನು ಸಹ ಡ್ರೈವಿಂಗ್ ಕಲಿತೆ ಎಂದು ಜಿಲ್ಲೆಯ ಬಿಲಾವಲಿ ಪ್ರದೇಶದ ನಿವಾಸಿ ರೇಶಮ್ ಬಾಯಿ ತನ್ವಾರ್ ಅವರು ಹೇಳಿದ್ದಾರೆ.

ನನಗೆ ಡ್ರೈವಿಂಗ್ ತುಂಬಾ ಇಷ್ಟ. ನಾನು ಕಾರು ಮತ್ತು ಟ್ರಾಕ್ಟರುಗಳನ್ನು ಓಡಿಸಿದ್ದೇನೆ ಎಂದು ತನ್ವರ್ ತಿಳಿಸಿದ್ದಾರೆ.ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ವೃದ್ಧಾಪ್ಯದಲ್ಲೂ ಕಾರು ಚಾಲನೆ ಕಲಿತ ಮಹಿಳೆಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ ಮತ್ತು ಇದು ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದಾರೆ.

MPs 90-Year-Old Grandma Learns To Drive, CM Lauds Her Efforts

ನಮ್ಮ ಆಸಕ್ತಿಯನ್ನು ಪೂರೈಸಿಕೊಳ್ಳಲು ವಯಸ್ಸಿನ ನಿರ್ಬಂಧವಿಲ್ಲ. ಈ ಅಜ್ಜಿ ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ಮಧ್ಯ ಪ್ರದೇಶ ಸಿಎಂ ಅವರು ಟ್ವೀಟ್ ಮಾಡಿದ್ದಾರೆ. ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ 90 ವರ್ಷದ ವೃದ್ಧೆಯೊಬ್ಬರು ಕಾರು ಚಲಾಯಿಸುತ್ತಿರುವ ವಿಡಿಯೋ ಗುರುವಾರ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಈ ರೀತಿಯ ಸಾರ್ವಜನಿಕ ರಸ್ತೆಯಲ್ಲಿ ಕಾರ್ ಅನ್ನು ಚಾಲನೆ ಮಾಡಲು ಅವರಿಗೆ ಮಾನ್ಯವಾದ ಚಾಲನಾ ಪರವಾನಗಿ ಇದೆಯೇ ಎಂದು ಸಾಕಷ್ಟು ಜನರು ಪ್ರಶ್ನಿಸಿದ್ದಾರೆ. ಮಧ್ಯಪ್ರದೇಶದ ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರ, ಶಾಶ್ವತ ಚಾಲನಾ ಪರವಾನಗಿಯನ್ನು 20 ವರ್ಷಗಳವರೆಗೆ ಅಥವಾ 50 ವರ್ಷ ವಯಸ್ಸಾಗುವವರೆಗೆ, ಯಾವುದು ಮೊದಲೋ ಅಲ್ಲಿಯವರೆಗೂ ನೀಡಲಾಗುತ್ತದೆ.

ವಾಣಿಜ್ಯ ವಾಹನಗಳಿಗೆ ನೀಡಲಾಗುವ ಶಾಶ್ವತ ಚಾಲನಾ ಪರವಾನಗಿಯನ್ನು ಮೂರು ವರ್ಷಗಳ ನಂತರ ನವೀಕರಿಸಬೇಕಾಗುತ್ತದೆ. ಭಾರತದಲ್ಲಿ ಚಾಲನಾ ಪರವಾನಗಿಗಳನ್ನು 75 ವರ್ಷ ವಯೋಮಿತಿಯವರೆಗೆ ನವೀಕರಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸುತ್ತಿದೆ. ಮೋಟಾರು ವಾಹನ ಕಾಯ್ದೆಯಲ್ಲಿ ಪರವಾನಗಿ ನವೀಕರಣಕ್ಕೆ 75 ವರ್ಷಗಳ ಗರಿಷ್ಠ ವಯೋಮಿತಿ ನಿಗದಿ ಪಡಿಸಲು ಕೇಂದ್ರವು ನಿರ್ಧರಿಸಿದೆ ಎಂದು ಹೇಳಲಾಗಿದೆ.

ಮೋಟಾರು ವಾಹನ ಕಾಯ್ದೆಗೆ ಸರ್ಕಾರವು ತರಲು ಬಯಸಿರುವ ಈ ಬದಲಾವಣೆಯು ರಾಜಕೀಯ ವಲಯದಲ್ಲಿ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ನಮ್ಮ ದೇಶದ ಬಹುತೇಕ ರಾಜಕಾರಣಿಗಳು 70 ವರ್ಷಕ್ಕಿಂತ ಮೇಲ್ಪಟ್ಟವರು ಎಂಬುದು ಗಮನಾರ್ಹ.

ಇನ್ನು ಅಜ್ಜಿಯ ಹುಮ್ಮಸ್ಸಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​​ ಸಿಂಗ್​ ಚೌಹಾಣ್​ ಅವರು ಟ್ವೀಟ್​ ಮಾಡಿ ಅಭಿನಂದಿಸಿದ್ದಾರೆ. ಈ ವಯಸ್ಸಿನಲ್ಲಿ ಡ್ರೈವಿಂಗ್​ ಕಲಿತಿರುವ ಅವರು ಎಲ್ಲರಿಗೂ ಸ್ಫೂರ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿ ಸಂಸ್ಥೆಯೊಂದರ ಜೊತೆಗೆ ಮಾತನಾಡಿದ ರೇಶಮ್ ಬಾಯ್, ತಮ್ಮ ಮಗಳು ಸೊಸೆ ಸೇರಿದಂತೆ ಕುಟುಂಬದ ಸದಸ್ಯರೆಲ್ಲರಿಗೂ ಕಾರು ಚಾಲನೆ ಮಾಡಲು ತಿಳಿದಿರುವುದರಿಂದ ನಾನು ಸಹ ಕಾರ್ ಅನ್ನು ಚಾಲನೆ ಮಾಡಲು ಕಲಿತೆ ಎಂದು ಹೇಳಿದ್ದಾರೆ. ನನಗೆ ಡ್ರೈವಿಂಗ್ ಮಾಡುವುದು ತುಂಬಾ ಇಷ್ಟ. ನಾನು ಕಾರುಗಳನ್ನು ಮಾತ್ರವಲ್ಲದೇ ಟ್ರ್ಯಾಕ್ಟರ್‌ಗಳನ್ನು ಸಹ ಚಾಲನೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

English summary
A 90-year-old woman from Madhya Pradesh's Dewas district became an internet sensation after a video of her driving a car went viral online on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X