ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಥಾ ಉಡುಗೊರೆ: ಪತ್ನಿಗಾಗಿ ತಾಜ್ ಮಹಲ್ ಹೋಲುವ ಮನೆ ನಿರ್ಮಾಣ

|
Google Oneindia Kannada News

ನವದೆಹಲಿ, ನವೆಂಬರ್ 22: ಆಗ್ರಾದ ತಾಜ್ ಮಹಲ್ ಪ್ರೀತಿಯ ಸಂಕೇತ. ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಪ್ರೀತಿಯ ಸಂಕೇತವಾಗಿ ಈ ಸ್ಮಾರಕವನ್ನು ನಿರ್ಮಿಸಿರುವುದು ಇಡೀ ಜಗತ್ತಿಗೆ ಗೊತ್ತಿರುವ ವಿಷಯ. ಆದರೆ ಅದೇ ರೀತಿ ಮಧ್ಯಪ್ರದೇಶ ಬುರ್ಹಾನ್‌ಪುರದ ವ್ಯಕ್ತಿಯೊಬ್ಬರು ತಮ್ಮ ಪತ್ನಿಗಾಗಿ ಅದೇ ತಾಜ್ ಮಹಲ್ ಅನ್ನೇ ಹೋಲುವ ಮನೆಯನ್ನು ನಿರ್ಮಿಸಿದ್ದಾರೆ.

ಆನಂದ್ ಚೋಕ್ಸೆ ಸದಾ ತಾಜ್ ಮಹಲ್ ಕಲ್ಪನೆಯ ಕಡೆಗೆ ಒಲವು ತೋರುತ್ತಿದ್ದರು. ಅಂಥದ್ದೇ ಒಂದು ಭವ್ಯ ಕಟ್ಟಡವನ್ನು ತಮ್ಮ ನಗರದಲ್ಲಿ ಏಕೆ ನಿರ್ಮಿಸಬಾರದು ಎಂದು ಆಲೋಚಿಸುತ್ತಿದ್ದರು, ಎಂದು ಇಂಡಿಯಾ ಟುಡೇ ಈ ಬಗ್ಗೆ ವರದಿ ಮಾಡಿದೆ.

ಕೋವಿಡ್‌ ಇಳಿಕೆ: ತಾಜ್‌ ಮಹಲ್‌ ಸ್ಮಾರಕ ಭೇಟಿಗೆ ಪ್ರವಾಸಿಗರಿಗೆ ಅವಕಾಶ ಕೋವಿಡ್‌ ಇಳಿಕೆ: ತಾಜ್‌ ಮಹಲ್‌ ಸ್ಮಾರಕ ಭೇಟಿಗೆ ಪ್ರವಾಸಿಗರಿಗೆ ಅವಕಾಶ

ತಾಜ್ ಮಹಲ್ ಕುರಿತು ಅವರ ಆಲೋಚನೆಯೇ ಒಂದು ರೀತಿ ಪ್ರೇರಣಶಕ್ತಿ ಆಯಿತು. ಅದೇ ರೀತಿಯ ಕಟ್ಟಡವನ್ನು ನಿರ್ಮಿಸಲು ಪ್ರೇರೇಪಣೆಯನ್ನು ನೀಡಿತು. ಚೋಕ್ಸೆ ಅವರು ತಾಜ್ ಮಹಲ್ ಅನ್ನು ಬಹಳ ಹತ್ತಿರದಿಂದ ಅಧ್ಯಯನ ಮಾಡಿದ್ದರು. ಆದ್ದರಿಂದಲೇ ಅವರು ನಿರ್ಮಿಸಿದ ನಾಲ್ಕು 4 ಮಲಗುವ ಕೋಣೆಯು ನಿಖರವಾಗಿ ತಾಜ್ ಮಹಲ್‌ನ್ನೇ ಹೋಲುವಂತಿದೆ.

MP: Man gifts his wife Taj Mahal-like home, it took 3 years to complete

ಐತಿಹಾಸಿಕ ಮನೆ ನಿರ್ಮಾಣಕ್ಕೆ ಹಲವು ಸವಾಲು:

ಸಾಂಪ್ರದಾಯಿಕ ಸ್ಮಾರಕವಾದ ತಾಜ್ ಮಹಲ್ ರೀತಿಯ ಮನೆಯನ್ನು ನಿರ್ಮಿಸುವುದಕ್ಕೆ ಮೂರು ವರ್ಷಗಳ ಕಾಲ ತೆಗೆದುಕೊಳ್ಳಲಾಗಿದೆ. ಈ ನಿರ್ಮಾಣ ಕಾರ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಲಾಗಿತ್ತು ಎಂದು ಅದನ್ನು ನಿರ್ಮಿಸಿದ ಎಂಜಿನಿಯರ್ ಬಹಿರಂಗಪಡಿಸಿದ್ದಾರೆ. ಮನೆ ನಿರ್ಮಾಣದ ಸಂದರ್ಭದಲ್ಲಿ ಮನೆಯೊಳಗಿನ ಕೆತ್ತನೆಗಳನ್ನು ಮಾಡಲು ಬಂಗಾಳ ಮತ್ತು ಇಂದೋರ್‌ನ ಕಲಾವಿದರನ್ನು ಬಳಸಿಕೊಳ್ಳಲಾಗಿತ್ತು ಎಂದು ಬುರ್ಹಾನಪುರ್ ನಿವಾಸಿ ಹೇಳಿದ್ದಾರೆ.

29 ಅಡಿ ಎತ್ತರದಲ್ಲಿರುವ ಗುಮ್ಮಟ:

ಬುರ್ಹಾನಪುರ್ ನಗರದಲ್ಲಿ ನಿರ್ಮಿಸಿದ ಮನೆಯ ಗುಮ್ಮಟವು 29 ಅಡಿ ಎತ್ತರದಲ್ಲಿದೆ. ಅಲ್ಲದೇ ತಾಜ್ ಮಹಲ್ ತರಹದ ಗೋಪುರಗಳನ್ನು ಸಹ ಹೊಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ಈ ಪ್ರತಿಕೃತಿ ಮನೆಯ ಬುನಾದಿಯನ್ನು ರಾಜಸ್ಥಾನದ 'ಮಕ್ರಾನಾ'ದಿಂದ ಮಾಡಲಾಗಿದ್ದು, ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ.

ಮನೆಯು ದೊಡ್ಡ ಹಾಲ್, ಕೆಳಗೆ ಎರಡು ಮಲಗುವ ಕೋಣೆಗಳು, ಮೇಲಿನ ಮಹಡಿಯಲ್ಲಿ ಎರಡು ಮಲಗುವ ಕೋಣೆಗಳು, ಗ್ರಂಥಾಲಯ ಮತ್ತು ಧ್ಯಾನ ಕೋಣೆಯನ್ನು ಹೊಂದಿದೆ. ಅವರ ಮನೆಗೆ ಇದೇ ರೀತಿಯ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಿಂದ ಅವರ ಮನೆಯು ನಿಜವಾದ ತಾಜ್ ಮಹಲ್‌ನಂತೆ ಕತ್ತಲೆಯಲ್ಲಿ ಹೊಳೆಯುತ್ತದೆ.

Recommended Video

ಕಡೇ ಓವರ್ನಲ್ಲಿ Deepak chahar ಸಿಡಿಸಿದ್ದು ಎಷ್ಟು ಗೊತ್ತಾ | Oneindia Kannada

English summary
Man from Madhya Pradesh built a house resembling the monument Taj Mahal for his wife. It took 3 years to complete. Know specialities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X