ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ.ಪ್ರ ಉಪ ಚುನಾವಣೆ ಫಲಿತಾಂಶ 2020: ಭಗವಂತ ಹನುಮಾನ್ ನಿಂದ ಕಮಲ್ ನಾಥ್‌ಗೆ ನ್ಯಾಯ: ದಿಗ್ವಿಜಯ ಸಿಂಗ್

|
Google Oneindia Kannada News

ಭೋಪಾಲ್, ನವೆಂಬರ್ 10: ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದೆ.

ಮಂಗಳವಾರ ದಿನವನ್ನು ಹನುಮಂತ ದೇವರ ದಿನವೆಂದು ಪರಿಗಣಿಸಲ್ಪಟ್ಟಿದ್ದರಿಂದ, ಉಪ ಚುನಾವಣೆ ಫಲಿತಾಂಶಗಳು ಹೊರಬರುವ ಮೊದಲು ಆತಂಕದಲ್ಲಿರು ರಾಜಕಾರಣಿಗಳು ತೀವ್ರ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದನ್ನು ಕಾಣಬಹುದಾಗಿದೆ.

 'ತೇಜಸ್ವಿ ಭವಃ ಬಿಹಾರ!' ಎಂದು ತೇಜಸ್ವಿ ಯಾದವ್‌ಗೆ ಆಶೀರ್ವದಿಸಿದ ಸಹೋದರ ತೇಜ್ ಪ್ರತಾಪ್ 'ತೇಜಸ್ವಿ ಭವಃ ಬಿಹಾರ!' ಎಂದು ತೇಜಸ್ವಿ ಯಾದವ್‌ಗೆ ಆಶೀರ್ವದಿಸಿದ ಸಹೋದರ ತೇಜ್ ಪ್ರತಾಪ್

ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್‌ಗೆ ಭಗವಾನ್ ಹನುಮಂತ ನ್ಯಾಯ ಒದಗಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

MP By-Election Results 2020: Will Justice To Kamalnath From Lord Hanuman: Digvijaya Singh

"ಮಧ್ಯಪ್ರದೇಶದಲ್ಲಿ ಮಂಗಳವಾರದಂದು ಉಪ ಚುನಾವಣೆ ಮತದಾನ ನಡೆದಿದ್ದು, ಮಂಗಳವಾರವೇ ಮತ ಎಣಿಕೆ ನಡೆಯುತ್ತಿದೆ. ಹನುಮಂತನ ಭಕ್ತ ಕಮಲ್ ನಾಥ್ ಜಿ ಅವರನ್ನು ನಿರಾಶೆಗೊಳಿಸುವುದಿಲ್ಲ ಎಂದು ನಾನು ನಂಬುತ್ತೇನೆ. ಮಾಜಿ ಸಿಎಂ ಕಮಲ್ ನಾಥ್ ಅವರಿಗೆ ನ್ಯಾಯ ಒದಗಿಸಲಾಗುತ್ತದೆ' ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಮಧ್ಯಪ್ರದೇಶ ಉಪ ಚುನಾವಣೆಯಲ್ಲಿ ಒಟ್ಟು 355 ಅಭ್ಯರ್ಥಿಗಳಿದ್ದು, ಅದರಲ್ಲಿ 12 ಮಂತ್ರಿಗಳು ಕಣದಲ್ಲಿದ್ದಾರೆ. 230 ಸದಸ್ಯರ ಅಸೆಂಬ್ಲಿಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಸರಳ ಬಹುಮತವನ್ನು ಪಡೆಯಲು ಬಿಜೆಪಿ ಈ 28 ಸ್ಥಾನಗಳಲ್ಲಿ ಕನಿಷ್ಠ 8 ಸ್ಥಾನಗಳನ್ನು ಗೆಲ್ಲಬೇಕಾಗಿದೆ.

ಇಂದಿನ ಉಪ ಚುನಾವಣೆ ಫಲಿತಾಂಶ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವಾಣ್, ಅವರ ನಿಕಟಪೂರ್ವ ಸಿಎಂ ಕಮಲ್ ನಾಥ್ ಮತ್ತು ಬಿಜೆಪಿ ಮುಖಂಡ ಜ್ಯೋತಿರಾಧಿತ್ಯ ಸಿಂಧಿಯಾ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

English summary
Congress leader Digvijay Singh tweeted that Bhagwan Hanumantha will provide justice to former Madhya Pradesh CM Kamalnath In This By Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X