ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಸರು ಬದಲಾಯಿಸಿಕೊಳ್ಳಲು ಮುಸ್ಲಿಂ ಅಧಿಕಾರಿ ಬಯಸಿದ್ದೇಕೆ?

|
Google Oneindia Kannada News

ಭೋಪಾಲ್, ಜುಲೈ 07: ಮಧ್ಯಪ್ರದೇಶದ ಹಿರಿಯ ಅಧಿಕಾರಿ, ಕಾದಂಬರಿಕಾರ ಅಹ್ಮದ್ ಖಾನ್ ಅವರು ತಮ್ಮ ಹೆಸರು ಬದಲಾಯಿಸಿಕೊಳ್ಳಲು ಬಯಸಿದ್ದಾರೆ. ಭೂಗತ ಪಾತಕಿ ಅಬುಸಲೇಂ ಕುರಿತಂತೆ ಕಾದಂಬರಿ ಬರೆದಿರುವ ಅಹ್ಮದ್ ಅವರು ತಮ್ಮ ಮುಂದಿನ ಕಾದಂಬರಿಗೆ ಹೊಸ ಹೆಸರು ಹಾಗೂ ತಮ್ಮ ಹೆಸರು ಬಹಿರಂಗವಾಗದಂತೆ ಗುಪ್ತನಾಮ ಇರಿಸಿಕೊಳ್ಳಲು ಬಯಸಿದ್ದಾರೆ.

ಈ ಬಗ್ಗೆ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ. ಹೆಸರು ಬದಲಾಯಿಸದಿದ್ದರೆ ದ್ವೇಷ ಪೂರಿತ ವಾತಾವರಣ ಉಂಟಾಗಲಿದ್ದು, ಸಾಮೂಹಿಕ ಹಿಂಸಾಚಾರ ಘಟನೆಗಳು ಸಂಭವಿಸಬಹುದು, ಹೀಗಾಗಿ ತಮ್ಮ ಮುಸ್ಲಿಂ ಧರ್ಮದ ಹೆಸರನ್ನು ಅಡಗಿಸಬೇಕಿದೆ ಎಂದು ಹೇಳೀಕೊಂಡಿದ್ದಾರೆ.

MP bureaucrat Niyaz Khan wants to change his name, says it might save him

ಕಳೆದ 6 ತಿಂಗಳುಗಳಿಂದ ನಾನು ಹೊಸ ಹೆಸರಿನ ಹುಡುಕಾಟದಲ್ಲಿದ್ದೇನೆ, ಈ ಮೂಲಕ ನನ್ನ ಮುಸ್ಲಿಂ ಐಡೆಂಟಿಟಿ ಗೊತ್ತಾಗದಂತೆ ಮಾಡಬೇಕಿದೆ ಇದರಿಂದ ನನ್ನ ವಿರುದ್ಧ ಕತ್ತಿ ಮಸಿಯುವವರಿಂದ ತಪ್ಪಿಸಿಕೊಳ್ಳಬಹುದು ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್ ನಟರು ಕೂಡಾ ತಮ್ಮ ಸಮುದಾಯವನ್ನು ಬಿಂಬಿಸುವ ಹೆಸರನ್ನು ಅಡಗಿಸಿಕೊಳ್ಳುವುದು ಒಳ್ಳೆಯದು, ಟಾಪ್ ಸ್ಟಾರ್ ಗಳು ಈಗ ಫ್ಲಾಪ್ ಸಿನಿಮಾಗಳನ್ನು ನೀಡುತ್ತಿದ್ದಾರೆ ಎಂದು ಇನ್ನೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ. ಅಹ್ಮದ್ ಖಾನ್ ಅವರ ಟ್ವೀಟ್ ಬಗ್ಗೆ ಚರ್ಚೆ ನಡೆಯುತ್ತಿದ್ದು, ಪರ ವಿರೋಧ ಟ್ವೀಟ್ ಗಳು ಬರುತ್ತಲಿವೆ.

English summary
A Senior Madhya Pradesh officer, who has written several novels, including one on underworld don Abu Salem, has been looking for a new name for his book to hide his Muslim identity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X