ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಬಿಜೆಪಿ ಶಾಸಕರ ಪುತ್ರಿಯಿಂದ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲು

|
Google Oneindia Kannada News

ಶಿಯೋಪುರ, ಅಕ್ಟೋಬರ್ 08: ಮಧ್ಯಪ್ರದೇಶ ಬಿಜೆಪಿ ಶಾಸಕರ ಪುತ್ರಿ ತನ್ನ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ.

ಮಧ್ಯ ಪ್ರದೇಶದ ಬಿಜೆಪಿ ಶಾಸಕ ಸೀತಾರಾಮ್ ಆದಿವಾಸಿ ಅವರ ಪುತ್ರಿ, ತಮ್ಮ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಹಿಂಸೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ರಾಮನಗರ: ವರದಕ್ಷಿಣೆ ಕೂಪಕ್ಕೆ ನವವಿವಾಹಿತೆ ಬಲಿರಾಮನಗರ: ವರದಕ್ಷಿಣೆ ಕೂಪಕ್ಕೆ ನವವಿವಾಹಿತೆ ಬಲಿ

ಪತಿ ತನ್ನಿಂದ ಬೈಕು ಮತ್ತು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಒಂದು ವೇಳೆ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮನೆಯಲ್ಲಿ ಇರಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಶಾಸಕರ ಪುತ್ರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

MP: BJP MLAs Daughter Alleges Dowry Harassment

ಶಾಸಕರ ಪುತ್ರಿ ಐದು ವರ್ಷಗಳ ಹಿಂದೆ ಶಿಯೋಪುರದ ಕರಾಹಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಯಾಪುರ ಗ್ರಾಮದ ಸೋನು ಆದಿವಾಸಿ ಅವರೊಂದಿಗೆ ವಿವಾಹವಾಗಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ಶಾಸಕ ಸೀತಾರಾಮ್ ಆದಿವಾಸಿ ಅವರ ಮಗಳು, ಪತಿ ವಿರುದ್ಧ ದೂರು ನೀಡಿದ್ದು, ದೂರಿನ ಅದರ ಆಧಾರದ ಮೇಲೆ ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ ಮತ್ತು ಇತರ ಸಂಬಂಧಿತ ಸೆಕ್ಷೆನ್‌ನಲ್ಲಿ , ಪತಿ, ಅತ್ತೆ ಮತ್ತು ಮಾವನ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಕರಾಹಲ್ ಪೊಲೀಸ್ ಠಾಣೆಯ ಅಧಿಕಾರಿ ರಾಜೇಶ್ ಶರ್ಮಾ ತಿಳಿಸಿದ್ದಾರೆ.

ತನ್ನ ಪತಿ ಕಳೆದ ಎರಡು ವರ್ಷಗಳಿಂದ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಸಕರ ಪುತ್ರಿ ದೂರಿನಲ್ಲಿ ಆರೋಪಿಸಿರುವುದಾಗಿ ಶರ್ಮಾ ತಿಳಿಸಿದ್ದಾರೆ.

English summary
Madhya Pradesh BJP MLA Sitaram Adivasi's daughter has filed a police complaint alleging dowry harassment and domestic violence by her husband and in- laws, a police official said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X