ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಗ್ವಿಜಯ್ ಸಿಂಗ್ ಸೋಲು: ಆತ್ಮಾಹುತಿಗೆ ಮುಂದಾದ ಸ್ವಾಮೀಜಿ

|
Google Oneindia Kannada News

ಭೋಪಾಲ್, ಜೂನ್ 15: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಲೋಕಸಭಾ ಚುನಾವಣೆಯಲ್ಲಿ, ಭೋಪಾಲ್ ಕ್ಷೇತ್ರದಿಂದ, ಗೆಲುವು ಸಾಧಿಸಲು ಹೋಮ, ಹವನ ಇತ್ಯಾದಿಗಳನ್ನೆಲ್ಲಾ ಮಾಡಿಸಿದ್ದರು. ಆದರೆ, ಅದೆಲ್ಲಾ ನೀರಲ್ಲಿ ಮಾಡಿದ ಹೋಮದಂತಾಗಿತ್ತು.

ದಿಗ್ವಿಜಯ್ ಸಿಂಗ್ ತಮ್ಮ ಸಮೀಪದ ಬಿಜೆಪಿ ಪ್ರತಿಸ್ಪರ್ಧಿ ಸಾಧ್ವಿ ಪ್ರಜ್ಯಾಸಿಂಗ್ ಠಾಕೂರ್ ವಿರುದ್ದ, ಪೈಪೋಟಿಯನ್ನೂ ಕೊಡಲಾಗದೆ 364,822 ಮತಗಳ ಭಾರೀ ಅಂತರದಿಂದ ಸೋಲು ಅನುಭವಿಸಿದ್ದರು. ಆದರೆ, ದಿಗ್ವಿಜಯ್ ಸಿಂಗ್, ಗೆದ್ದೇ ಗೆಲ್ಲುತ್ತಾರೆಂದು ಈ ಭಾಗದ ಜನಪ್ರಿಯ ಖಾವಿಧಾರಿ ಮಿರ್ಚಿ ಬಾಬಾ ಭವಿಷ್ಯ ನುಡಿದಿದ್ದರು.

ದಿಗ್ವಿಜಯ್ ಯಶಸ್ಸಿಗಾಗಿ ಪ್ರಾರ್ಥಿಸಿದ್ದ ಬಾಬಾ ವಿರುದ್ಧ ಎಫ್ಐಅರ್ದಿಗ್ವಿಜಯ್ ಯಶಸ್ಸಿಗಾಗಿ ಪ್ರಾರ್ಥಿಸಿದ್ದ ಬಾಬಾ ವಿರುದ್ಧ ಎಫ್ಐಅರ್

ಈಗ, ತಾನು ನುಡಿದಿದ್ದ ಭವಿಷ್ಯ ಸುಳ್ಳಾಯಿತೆಂದು, ಮಿರ್ಚಿ ಸ್ವಾಮೀಜಿ 'ಜಲಸಮಾಧಿ' ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಅದಕ್ಕೆ ಮಿರ್ಚಿ ಬಾಬಾ ಸರಕಾರದ ಅನುಮತಿಯನ್ನು ಕೇಳಿದ್ದಾರೆ. ಜೂನ್ ಹದಿನಾರರಂದು ಆತ್ಮಾಹುತಿ ಮಾಡಿಕೊಳ್ಳಲು, ಜಿಲ್ಲಾಧಿಕಾರಿಯ ಬಳಿ ಅನುಮತಿ ಕೋರಿದ್ದರು.

Mirchi Baba swamy asked permission to carry out of his promise of Jal Samadhi

ಜೂನ್ ಹದಿಮೂರರಂದು ಬಾಬಾ ವೈರಾಗ್ಯನಂದ ಗಿರಿ ಮಹಾರಾಜ್ ಆಲಿಯಾಸ್ ಮಿರ್ಚಿ ಬಾಬಾ ಜಿಲ್ಲಾಧಿಕಾರಿ ತರುಣ್ ಕುಮಾರ್ ಅವರಿಗೆ ಜಲ ಸಮಾಧಿ ಮಾಡಿಕೊಳ್ಳಲು ಪತ್ರ ಬರೆದಿದ್ದರು. ಆದರೆ, ಅವರಿಗೆ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಡಿಸಿ ಹೇಳಿದ್ದಾರೆ.

ಈ ರೀತಿಯ ವಿಚಿತ್ರ ಮನವಿಯನ್ನು ಇದುವರೆಗೆ ನಾವು ಸ್ವೀಕರಿಸಿರಲಿಲ್ಲ ಹಾಗೂ ಇದಕ್ಕೆ ಅನುಮತಿ ಕೊಡಲು ಸಾಧ್ಯವಿಲ್ಲ. ಅವರಿಗೆ ಸೂಕ್ತ ರಕ್ಷಣೆ ಕೊಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ದಿಗ್ವಿಜಯ್ ಸಿಂಗ್ ಸೋತರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಮಿರ್ಚಿ ಬಾಬಾ ಚುನಾವಣೆಯ ಮುನ್ನ ಹೇಳಿದ್ದರು. ಫಲಿತಾಂಶ ಬಂದ ನಂತರ, ಮಿರ್ಚಿ ಬಾಬಾ ಅವರನ್ನು ಸಾಮಾಜಿಕ ತಾಣದಲ್ಲಿ ಟ್ರೋಲ್ ಮಾಡಲಾಗಿತ್ತು.

ಮತ ಚಲಾಯಿಸದೆ ಮಂಗಳಾರತಿ ಮಾಡಿಸಿಕೊಂಡ ದಿಗ್ವಿಜಯ್ ಸಿಂಗ್ಮತ ಚಲಾಯಿಸದೆ ಮಂಗಳಾರತಿ ಮಾಡಿಸಿಕೊಂಡ ದಿಗ್ವಿಜಯ್ ಸಿಂಗ್

ಜೂನ್ ಹದಿನಾರು, ಮಧ್ಯಾಹ್ನ 2:11 ಆತ್ಮಾಹುತಿ ಮಾಡಿಕೊಳ್ಳಲು ಅತ್ಯಂತ ಪ್ರಶಕ್ತ ಸಮಯ ಎಂದು ಡಿಸಿಗೆ ನೀಡಿದ ಅರ್ಜಿಯಲ್ಲಿ ಮಿರ್ಚಿ ಬಾಬಾ ನಮೂದಿಸಿದ್ದರು.

English summary
‘Mirchi Baba’, who predicted the victory of Digvijaya Singh in the Lok Sabha election 2019, has asked for permission to carry out his promise of ‘samadhi’ on June 16. But, District Collector denied the permission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X