ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಕಿಂಗ್ ಸುದ್ದಿ: ಒಂದೇ ಒಂದು ಲೀಟರ್ ಹಾಲಿನ ಬೆಲೆ 43 ರೂ. ಅಲ್ಲ 55 ರೂಪಾಯಿ!

|
Google Oneindia Kannada News

ಭೋಪಾಲ್, ಫೆಬ್ರವರಿ.26: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್ ಎದುರಾಗಿದೆ. ಮಾರ್ಚ್.01ರಿಂದ ಹಾಲಿನ ದರದಲ್ಲೂ ಭಾರಿ ಏರಿಕೆಯಾಗುವ ಸುಳಿವು ಸಿಕ್ಕಿದೆೆ.

ಮಧ್ಯಪ್ರದೇಶದಲ್ಲಿ ರತ್ಲಮ್ ನಗರದ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಮುಂಬರುವ ಮಾರ್ಚ್.01ರಿಂದ ಒಂದು ಲೀಟರ್ ಹಾಲಿನ ಮೇಲೆ 12 ರೂಪಾಯಿ ಹೆಚ್ಚಿಸುವುದಕ್ಕೆ ತೀರ್ಮಾನಿಸಲಾಗಿದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಡಿಎನ್ಎ ವರದಿ ಮಾಡಿದೆ.

ಸರ್ಕಾರಿ ಕಚೇರಿ ಶುದ್ಧೀಕರಣಕ್ಕೆ ಗೋಮೂತ್ರ ಮಿಶ್ರಿತ ಫಿನಾಯಿಲ್!ಸರ್ಕಾರಿ ಕಚೇರಿ ಶುದ್ಧೀಕರಣಕ್ಕೆ ಗೋಮೂತ್ರ ಮಿಶ್ರಿತ ಫಿನಾಯಿಲ್!

ಮಧ್ಯಪ್ರದೇಶ ರತ್ಲಮ್ ನಗರದಲ್ಲಿರುವ ಕಾಳಿಕಾ ಮಠದ ಆವರಣದಲ್ಲಿರುವ ರಾಮ ಮಂದಿರದಲ್ಲಿ ಈ ಸಂಬಂಧ ಸಭೆ ನಡೆಸಲಾಗಿತ್ತು. 25 ಗ್ರಾಮಗಳ ಸದಸ್ಯರು ಸೇರಿದ ಸಭೆಯಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು 12 ರೂಪಾಯಿ ಹೆಚ್ಚಳ ಮಾಡುವುದಕ್ಕೆ ನಿರ್ಧರಿಸಲಾಯಿತು.

ಪ್ರತಿ ಲೀಟರ್ ಹಾಲಿನ ಮೇಲೆ 12 ರೂಪಾಯಿ ಹೆಚ್ಚಳ

ಪ್ರತಿ ಲೀಟರ್ ಹಾಲಿನ ಮೇಲೆ 12 ರೂಪಾಯಿ ಹೆಚ್ಚಳ

ಮಧ್ಯಪ್ರದೇಶದಲ್ಲಿ ಪ್ರಸ್ತುತ ಒಂದು ಲೀಟರ್ ಹಾಲಿಗೆ 43 ರೂಪಾಯಿ ನೀಡಲಾಗುತ್ತಿದೆ. ಆದರೆ ಮುಂಬರುವ ಮಾರ್ಚ್.01ರಿಂದ ಅದೇ ಒಂದು ಲೀಟರ್ ಹಾಲಿನ ಬೆಲೆಯನ್ನು 55 ರೂಪಾಯಿಗೆ ನಿಗದಿಗೊಳಿಸಲು ನಿರ್ಧರಿಸಲಾಗಿದೆ ಎಂದು ಡಿಎನ್ಎ ವರದಿ ಮಾಡಿದೆ.

ಹಾಲು ಸಾಗಾಟವೇ ಬಲುದುಬಾರಿ

ಹಾಲು ಸಾಗಾಟವೇ ಬಲುದುಬಾರಿ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಹಾಲಿನ ಸಾಗಾಟ ವೆಚ್ಚವೇ ಹೆಚ್ಚಳವಾಗಿದೆ. ಇದರ ಜೊತೆಗೆ ಹೈನುಗಾರಿಕೆ ವೇಳೆ ಪ್ರಾಣಿಗಳ ಆಹಾರದ ಬೆಲೆಯೂ ದುಬಾರಿಯಾಗಿದೆ. ಒಂದು ವೇಳೆ ಹಾಲಿನ ಬೆಲೆ ಏರಿಕೆಗೆ ಒಪ್ಪಿಗೆ ನೀಡದಿದ್ದಲ್ಲಿ ನಾವು ಹಾಲು ಪೂರೈಕೆಯನ್ನೇ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ.

ಕೊವಿಡ್-19 ಬಿಕ್ಕಟ್ಟಿನಿಂದ ಹಾಲಿನ ಬೆಲೆ ಏರಿಕೆಗೆ ಕಡಿವಾಣ

ಕೊವಿಡ್-19 ಬಿಕ್ಕಟ್ಟಿನಿಂದ ಹಾಲಿನ ಬೆಲೆ ಏರಿಕೆಗೆ ಕಡಿವಾಣ

ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚುವುದಕ್ಕೂ ಮೊದಲೇ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ವ್ಯಾಪಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿತ್ತು. ಪ್ರತಿ ಲೀಟರ್ ಮೇಲೆ 2 ರೂಪಾಯಿ ಹೆಚ್ಚಿಸುವ ಕುರಿತು ಒಪ್ಪಂದವನ್ನು ಮಾಡಿಕೊಳ್ಳುವುದಷ್ಟೇ ಬಾಕಿ ಉಳಿದಿತ್ತು. ಆದರೆ ಕೊವಿಡ್-19 ಬಿಕ್ಕಟ್ಟಿನ ಹಿನ್ನೆಲೆ ಬೆಲೆ ಏರಿಕೆ ನಿರ್ಧಾರವನ್ನು ಕೈ ಬಿಡಲಾಗಿತ್ತು.

ಹಸು ಸಾಕಾಣಿಕೆ ವೆಚ್ಚದ ಬಗ್ಗೆ ಉಲ್ಲೇಖಿಸಿದ ರೈತರು

ಹಸು ಸಾಕಾಣಿಕೆ ವೆಚ್ಚದ ಬಗ್ಗೆ ಉಲ್ಲೇಖಿಸಿದ ರೈತರು

ಮಧ್ಯಪ್ರದೇಶ ರತ್ಲಮ್ ಸುತ್ತಮುತ್ತಲಿನ 25 ಗ್ರಾಮಗಳಿಂದ ಆಗಮಿಸಿದ ರೈತರು ಸಭೆಯಲ್ಲಿ ಭಾಗವಹಿಸಿದ್ದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಹಾಲು ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತಿದೆ. ಒಂದು ಹಸುವಿಗೆ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ನೀಡಿ ಖರೀದಿಸಲಾಗುತ್ತಿದ್ದು, ಅದರ ಮೇವು ಮತ್ತು ಆಹಾರದ ಬೆಲೆಯೂ ಹೆಚ್ಚಳವಾಗಿದೆ. ಕಳೆದ ವರ್ಷವೇ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿತ್ತಾದರೂ, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆದ್ದರಿಂದ ಈ ಬಾರಿ ನಡೆಸಿದ ಸಭೆಯಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯನ್ನು 43 ರೂಪಾಯಿಯಿಂದ 55 ರೂಪಾಯಿಗೆ ಏರಿಕೆ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಈ ಸಂಬಂಧ ನಗರದ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂದು ರತ್ಲಮ್ ಹಾಲು ಉತ್ಪಾದಕರ ಸಮಿತಿ ಅಧ್ಯಕ್ಷ ಹೀರಾಲಾಲ್ ಚೌಧರಿ ತಿಳಿಸಿದ್ದಾರೆ.

English summary
Milk Prices May Increase By Rs 12 Per Litre From March 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X