• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೈಲ ಬೆಲೆ ಏರಿಕೆ: ಪೆಟ್ರೋಲ್ ಬಂಕ್ ನಲ್ಲಿ ವಿಶಿಷ್ಟ ಫೋಸ್ ಕೊಟ್ಟು ವ್ಯಕ್ತಿಯ ಪ್ರತಿಭಟನೆ

|

ಭೋಪಾಲ್, ಫೆ 19: ತೈಲ ಬೆಲೆ ಏರಿಕೆ ಜನಸಾಮಾನ್ಯರ ಜೀವನವನ್ನು ಹೈರಾಣ ಮಾಡುತ್ತಿದೆ. ಸಾರ್ವಜನಿಕರ ಯಾವ ಪ್ರತಿಭಟನೆ/ಆಕ್ರೋಶಕ್ಕೂ ಸರಕಾರ ಜಗ್ಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ಜಡಾಯಿಸುವ ತೆರಿಗೆಯನ್ನು ಕಮ್ಮಿ ಮಾಡಬೇಕು ಎನ್ನುವ ಯಾವ ಒತ್ತಡಕ್ಕೂ ಸರಕಾರ ಮಣಿಯುತ್ತಿಲ್ಲ.

ದೇಶದ ಕೆಲವು ಭಾಗಗಳಲ್ಲಿ (ಪ್ರಮುಖವಾಗಿ ತೈಲ ಸಾಗಣಿ ದೂರವಿರುವ ಪ್ರದೇಶಗಳಲ್ಲಿ) ಲೀಟರ್ ಒಂದರ ಬೆಲೆ ಶತಕ ದಾಟಿದೆ. ಬೆಂಗಳೂರಿನಲ್ಲಿ ಫೆಬ್ರವರಿ 18ರ ದರ 92.89. ಕಳೆದ ಹತ್ತು ದಿನದಿಂದ ಬೆಲೆ 2.67 ರೂಪಾಯಿ ಜಾಸ್ತಿಯಾಗಿದೆ.

ರಾಜಸ್ಥಾನ ನಂತರ ಮಧ್ಯ ಪ್ರದೇಶದಲ್ಲೂ ಪೆಟ್ರೋಲ್ ಬೆಲೆ 100 ರು ಪ್ಲಸ್

ಇನ್ನು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಪೆಟ್ರೋಲ್ ಬೆಲೆ ನೂರು ರೂಪಾಯಿ ಗಡಿ ದಾಟಿದೆ. ಅಲ್ಲಿ ಪವರ್ ಪೆಟ್ರೋಲ್ ದರ ಲೀಟರ್ ಗೆ 100.04. ಬೆಲೆ ಏರಿಕೆಯನ್ನು ವಿರೋಧಿಸಿ ವ್ಯಕ್ತಿಯೊಬ್ಬ ಪೆಟ್ರೋಲ್ ಬಂಕ್ ಮುಂದೆ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾನೆ.

ಒಂದು ಕೈಯಲ್ಲಿ ಕ್ರಿಕೆಟ್ ಬ್ಯಾಟ್, ಇನ್ನೊಂದು ಕೈಯಲ್ಲಿ ಹೆಲ್ಮೆಟ್ ಇಟ್ಟುಕೊಂಡು, ಎರಡು ಕೈಯನ್ನು ಮೇಲೆಕೆತ್ತಿ ಪೆಟ್ರೋಲ್ ದರ ನೂರರ ಗಡಿ ದಾಡಿದ್ದನ್ನು ಅಣಕವಾಡಿದ್ದಾನೆ. ಸಾಮಾಜಿಕ ತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.

ಈ ಫೋಟೋಗೆ ಹಲವರು ಒಕ್ಕಣೆ ಬರೆದು ಸರಕಾರದ ವಿರುದ್ದ ವ್ಯಂಗ್ಯವಾಡಿದ್ದಾರೆ. "ತುಂಬಾ ಪರಿಶ್ರಮದ ನಂತರ ಪೆಟ್ರೋಲ್ ಬೆಲೆ ನೂರು ರೂಪಾಯಿ ದಾಟಿದೆ"ಎಂದು ಒಬ್ಬರು ಬರೆದು ತಮಾಷೆ ಮಾಡಿದ್ದಾರೆ.

ಸತತ 11ನೇ ದಿನ ತೈಲ ಗ್ರಾಹಕರ ಜೇಬಿಗೆ ಕತ್ತರಿ: ಯಾವ ನಗರದಲ್ಲಿ ಎಷ್ಟು ದರ?

ಇನ್ನೊಬ್ಬರು, "ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಶತಕವನ್ನು ನೋಡಲು ಅವರ ಅಭಿಮಾನಿಗಳು ಒಂದು ವರ್ಷದಿಂದ ಕಾಯುತ್ತಿದ್ದಾರೆ. ಈಗ ನೋಡಿ, ಯಾರು ಮೊದಲು ಶತಕ ಹೊಡೆದದ್ದು"ಎಂದು ಅಣಕವಾಡಲಾಗಿದೆ. (ಚಿತ್ರಕೃಪೆ: ಟ್ವಿಟ್ಟರ್)

English summary
Man Poses With Cricket Bat And Helmet At Petrol Pump As Fuel Price Hits Century Mark In Bhopal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X