ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

just in: ಬೈಕ್‌ನಲ್ಲಿ 50 ಕಿ.ಮೀ ತಾಯಿಯ ಶವ ಸಾಗಿಸಿದ ಮಗ

|
Google Oneindia Kannada News

ಭೂಪಾಲ್, ಆ.01: ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯೊಂದು ಶವ ವಾಹನವನ್ನು ನಿರಾಕರಿಸಿದ ನಂತರ ವ್ಯಕ್ತಿಯೊಬ್ಬರು ತನ್ನ ತಾಯಿಯ ಶವವನ್ನು ತನ್ನ ತಮ್ಮ ಬೈಕ್‌ನಲ್ಲಿ 50 ಕಿ.ಮೀ.ಗೂ ಹೆಚ್ಚು ದೂರ ಸಾಗಿಸಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಮೃತರನ್ನು ಜೈಮಂತ್ರಿ ಯಾದವ್ ಎಂದು ಗುರುತಿಸಲಾಗಿದ್ದು, ಇವರು ಮಧ್ಯಪ್ರದೇಶ-ಛತ್ತೀಸ್‌ಗಢ ಗಡಿಯ ಅನುಪ್ಪುರ್ ಜಿಲ್ಲೆಯ ನಿವಾಸಿ.

ತಮ್ಮನ ಶವದ ಜೊತೆ ರಸ್ತೆ ಬದಿಯಲ್ಲಿ ಕುಳಿತು ಅಪ್ಪನ ಆಗಮನಕ್ಕೆ ಕಾಯುತ್ತಿರುವ 8 ವರ್ಷದ ಬಾಲಕತಮ್ಮನ ಶವದ ಜೊತೆ ರಸ್ತೆ ಬದಿಯಲ್ಲಿ ಕುಳಿತು ಅಪ್ಪನ ಆಗಮನಕ್ಕೆ ಕಾಯುತ್ತಿರುವ 8 ವರ್ಷದ ಬಾಲಕ

ಕೆಲ ದಿನಗಳ ಹಿಂದೆ ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ, ಅನುಪ್ಪುರ್ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ಆಕೆಯನ್ನು ಪಕ್ಕದ ಜಿಲ್ಲೆಯ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.

Man carry mothers body on bike for cremation in Madhya Pradesh

ಮಹಿಳೆ ಸಾವನ್ನಪ್ಪಿದ ನಂತರ, ಆಕೆಯ ಮಗ ಶವಸಂಸ್ಕಾರಕ್ಕೆ ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಶವವಾಹನ ವ್ಯವಸ್ಥೆ ಮಾಡಲು ಪ್ರಯತ್ನಿಸಿದನು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಆಸ್ಪತ್ರೆಯಲ್ಲಿ ಯಾವುದೇ ಶವ ವಾಹನ ಲಭ್ಯವಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ಗುಟ್ಟಾಗಿ ಆತನಿಗೆ ತಿಳಿಸಿದ್ದಾರೆ.

ಬಳಿಕ ಖಾಸಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅತಿಯಾದ ಶುಲ್ಕದ ಕಾರಣ ಅವರು ಮೃತದೇಹವನ್ನು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಬೈಕ್‌ಗೆ ಕಟ್ಟಿ ಸುಮಾರು 50 ಕಿ.ಮೀ. ಸಾಗಿದ್ದಾರೆ.

ಆಂಬ್ಯುಲೆನ್ಸ್ ಅಲಭ್ಯತೆಯಿಂದಾಗಿ ಶವಗಳನ್ನು ಕುಟುಂಬದವರೇ ತೆಗೆದುಕೊಂಡು ಹೋಗುವ ಇಂತಹ ಘಟನೆಗಳು ಮಧ್ಯಪ್ರದೇಶದಲ್ಲಿ ಇದೇ ಮೊದಲಲ್ಲ.

ಜುಲೈ 11 ರಂದು ಕೂಡ, ಗುನಾ ಜಿಲ್ಲೆಯಲ್ಲಿ 8 ವರ್ಷದ ಮಗು ತನ್ನ ಎರಡು ವರ್ಷದ ಸಹೋದರನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ವಾಹನಕ್ಕಾಗಿ ಕಾಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

English summary
Hospital denied hearse van: man was forced to carry his mother's body on his bike for over 50 km in Madhya Pradesh's Shahdol district. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X