ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ವರ್ಷದಲ್ಲಿ 18 ಮನೆ ಬದಲು; ವಿಚ್ಛೇದನದವರೆಗೂ ಬಂದ ಹೆಂಡತಿಯ "ಜಿರಲೆ ಫೋಬಿಯಾ"

|
Google Oneindia Kannada News

ಭೋಪಾಲ್, ಏಪ್ರಿಲ್ 17: ಹೆಂಡತಿಯ ಜಿರಲೆ ಭಯ, ಮೂರು ವರ್ಷದಲ್ಲಿ ಹದಿನೆಂಟು ಬಾರಿ ಮನೆ ಬದಲಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ಈ ವಿಚಾರ ಈಗ ವಿಚ್ಛೇದನದವರೆಗೂ ಬಂದು ನಿಂತಿದೆ.

ಹೆಂಡತಿಯ ಜಿರಲೆ ಫೋಬಿಯಾದಿಂದ ಬೇಸತ್ತಿರುವ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಸಂಗತಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬೆಳಕಿಗೆ ಬಂದಿದೆ. ಭೋಪಾಲ್‌ನಲ್ಲಿ 2017ರಲ್ಲಿ ಇವರ ಮದುವೆಯಾಗಿದೆ. ಆತ ಸಾಫ್ಟ್‌ವೇರ್ ಇಂಜಿನಿಯರ್. ತನಗೆ ಜಿರಲೆ ಫೋಬಿಯಾ ಇದ್ದು, ಜಿರಲೆ ಕಂಡರೆ ಸಾಕು ಜೋರಾಗಿ ಕೂಗಿಕೊಳ್ಳುತ್ತೇನೆ. ಆ ಜಿರಲೆ ಕಂಡ ಜಾಗಕ್ಕೆ ಮತ್ತೆ ಕಾಲಿಡುವುದೇ ಇಲ್ಲ ಎಂದು ಹೆಂಡತಿ ಮದುವೆ ನಂತರ ತಿಳಿಸಿದ್ದಾಳೆ. ಇದು ಸಹಜ ಎಂದು ಆತನೂ ಮೊದಮೊದಲು ಸುಮ್ಮನಿದ್ದ.

ವಿಚಿತ್ರ ಘಟನೆ: ಹೃದಯಾಘಾತದಿಂದ ಮಹಿಳಾ ಅಪರಾಧಿ ಸತ್ತರೂ ಗಲ್ಲುಶಿಕ್ಷೆ ನಿಲ್ಲಿಸಲಿಲ್ಲ!ವಿಚಿತ್ರ ಘಟನೆ: ಹೃದಯಾಘಾತದಿಂದ ಮಹಿಳಾ ಅಪರಾಧಿ ಸತ್ತರೂ ಗಲ್ಲುಶಿಕ್ಷೆ ನಿಲ್ಲಿಸಲಿಲ್ಲ!

ಮದುವೆ ನಂತರ 2018ರಲ್ಲಿ ಮೊದಲ ಬಾರಿ ಜಿರಲೆ ಕಾರಣಕ್ಕೆ ದಂಪತಿ ಮನೆ ಬದಲಾಯಿಸಿದ್ದರು. ಆಗಲೂ ಆತನಿಗೆ ಬೇಸರವಾಗಿರಲಿಲ್ಲ. ಆನಂತರ ಆಗಿದ್ದೇ ಬೇರೆ. ಮೂರು ವರ್ಷದಲ್ಲಿ ಒಂದಾದ ನಂತರ ಒಂದರಂತೆ ಸುಮಾರು ಹದಿನೆಂಟು ಮನೆಗಳನ್ನು ಬದಲಾಯಿಸಿದ್ದಾರೆ.

Man Applied For Divorce Fed Up By His Wifes Cockroach Phobia In Madhya Pradesh

ಇದರಿಂದ ಬೇಸತ್ತ ಗಂಡ, ಹೆಂಡತಿಯನ್ನು ಹಲವು ಮನಃಶಾಸ್ತ್ರಜ್ಞರ ಬಳಿಯೂ ಕರೆದುಕೊಂಡು ಹೋಗಿ ಕೌನ್ಸಿಲಿಂಗ್ ಕೊಡಿಸಿದ್ದಾನೆ. ಆದರೂ ಅದ್ಯಾವುದೂ ಫಲ ನೀಡಿಲ್ಲ. ಯಾವುದೇ ಸಲಹೆ ಪಾಲಿಸದೇ ಗಂಡ ತನ್ನನ್ನು ಹುಚ್ಚಿಯಂತೆ ಪರಿಗಣಿಸುತ್ತಿದ್ದಾನೆ ಎಂದು ಪ್ರತ್ಯಾರೋಪ ಮಾಡಿದ್ದಾಳೆ. ಈ ವಿಷಯ ಪುರುಷ ಹಕ್ಕಿನ ಸಂಸ್ಥೆವರೆಗೂ ತಲುಪಿದೆ. ಸದ್ಯಕ್ಕೆ ಆಕೆಗೆ ಈ ಫೋಬಿಯಾ ಬಿಡುವವರೆಗೂ ನಾನು ಆಕೆ ಜೊತೆಗಿರಲು ಸಾಧ್ಯವಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾನೆ.

English summary
Husband applied for divorce after they shifted homes 18 times in 3 years due to his wife's cockroach phobia in madhya pradesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X