ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡನನ್ನು ತ್ಯಜಿಸಿದ್ದಕ್ಕೆ ಸಂಬಂಧಿಯನ್ನು ಹೊರುವ 'ಶಿಕ್ಷೆ': ಅಮಾನವೀಯ ಕೃತ್ಯದ ವೈರಲ್ ವಿಡಿಯೋ

|
Google Oneindia Kannada News

ಭೋಪಾಲ್, ಫೆಬ್ರವರಿ 16: ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆಯೊಬ್ಬರಿಗೆ ತಮ್ಮ ಹೆಗಲ ಮೇಲೆ ಪತಿ ಕುಟುಂಬದ ಸಂಬಂಧಿಯೊಬ್ಬನನ್ನು ಹೊತ್ತುಕೊಂಡು ಹೋಗುವ ಅಮಾನವೀಯ ಶಿಕ್ಷೆ ನೀಡಲಾಗಿದೆ. ಈ ಹೇಯ ಕೃತ್ಯದ ವಿಡಿಯೋ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ನೂರಾರು ಮಂದಿ ಹಂಚಿಕೊಂಡಿದ್ದು, ಮಹಿಳೆಯ ಸ್ಥಿತಿ ಹೃದಯಹಿಂಡುವಂತಿದೆ. ಆಕೆಯ ಸುತ್ತಲೂ ನೆರೆದು ಆಕೆಗೆ ಬೆದರಿಸುತ್ತಾ, ಸಂಭ್ರಮಿಸುವ ಮೂಲಕ ಗ್ರಾಮಸ್ಥರು ವಿಕೃತಿ ಮೆರೆದಿದ್ದಾರೆ.

 ನಿರ್ಗತಿಕನ ಶವಕ್ಕೆ ಹೆಗಲು ಕೊಟ್ಟ ಮಹಿಳಾ ಎಸ್ಐಗೆ ಹ್ಯಾಟ್ಸ್ ಆಫ್; ವೈರಲ್ ವಿಡಿಯೋ ನಿರ್ಗತಿಕನ ಶವಕ್ಕೆ ಹೆಗಲು ಕೊಟ್ಟ ಮಹಿಳಾ ಎಸ್ಐಗೆ ಹ್ಯಾಟ್ಸ್ ಆಫ್; ವೈರಲ್ ವಿಡಿಯೋ

ಗುಣ ಜಿಲ್ಲೆಯ ಸಗಾಯ್ ಮತ್ತು ಬನ್ಸ್ ಖೇಡಿ ಗ್ರಾಮಗಳ ನಡುವೆ ಈ ಘಟನೆ ನಡೆದಿದೆ. ಸುಮಾರು ಮೂರು ಕಿಮೀ ದೂರದವರೆಗೂ ಆ ಮಹಿಳೆ ಬಾಲಕನನ್ನು ಹೊತ್ತುಕೊಂಡು ಹೋಗಿದ್ದಾರೆ. ಬಡಿಗೆ, ಕ್ರಿಕೆಟ್ ಬ್ಯಾಟ್‌ಗಳನ್ನು ಹಿಡಿದು ಮಹಿಳೆಯ ಜತೆಯಲ್ಲಿಯೇ ಸಾಗಿದ ಗ್ರಾಮಸ್ಥರು ಕೂಗಾಡುತ್ತಾ ಆಕೆಯ ಪರದಾಟವನ್ನು ಸಂಭ್ರಮಿಸಿದ್ದಾರೆ. ಆಕೆ ನಡೆಯುವುದು ನಿಧಾನವಾದಾಗ ಕೆಲವರು ಬಡಿಗೆ ಹಾಗೂ ಬ್ಯಾಟ್‌ನಿಂದ ಥಳಿಸಿದ್ದಾರೆ.

ನಾಲ್ವರ ವಿರುದ್ಧ ಎಫ್‌ಐಆರ್

ನಾಲ್ವರ ವಿರುದ್ಧ ಎಫ್‌ಐಆರ್

ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ. ಮಹಿಳೆಗೆ ಸಹಾಯ ಮಾಡುವುದನ್ನು ಬಿಟ್ಟು ಆಕೆಗೆ ಮತ್ತಷ್ಟು ಕಿರುಕುಳ ನೀಡಿದ ಗ್ರಾಮಸ್ಥರ ಕೃತ್ಯ ಖಂಡನೆಗೆ ಒಳಗಾಗಿದೆ.

ಗಂಡನನ್ನು ತೊರೆದಿದ್ದಕ್ಕೆ ಶಿಕ್ಷೆ

ಪರಸ್ಪರ ಸಹಮತದೊಂದಿಗೆ ಪತಿಯಿಂದ ದೂರವಾಗಿದ್ದು, ಬಳಿಕ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಗಿ ಮಹಿಳೆ ತಿಳಿಸಿದ್ದಾರೆ. ಆದರೆ ಕಳೆದ ವಾರ ಆಕೆಯ ಮಾಜಿ ಪತಿಯ ಕುಟುಂಬದವರು ಅಪಹರಿಸಿದ್ದರು. ಅವರ ಜತೆಗೆ ಸೇರಿಕೊಂಡ ಗ್ರಾಮಸ್ಥರು ಆಕೆಗೆ ಈ ಅಮಾನವೀಯ ಶಿಕ್ಷೆ ವಿಧಿಸುವ ಮೂಲಕ ಕ್ರೌರ್ಯ ಮೆರೆದಿದ್ದಾರೆ.

ಮನೆಯಲ್ಲಿ ಹಲ್ಲೆ ನಡೆಸಿದ್ದ ಪತಿ

ಪತಿಯನ್ನು ತೊರೆದು ಎರಡನೆಯ ಗಂಡನ ಜತೆಗೆ ವಾಸಿಸುತ್ತಿರುವುದಕ್ಕೆ ಮೊದಲ ಪತಿಯ ಕುಟುಂಬದವರು ಮತ್ತು ಗ್ರಾಮಸ್ಥರು ಬಾಲಕನನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಶಿಕ್ಷೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಸಂಬಂಧಿಕರ ಜತೆಗೆ ಮಹಿಳೆಯ ಮನೆಗೆ ತೆರಳಿದ್ದ ಮೊದಲ ಪತಿ, ಆಕೆಗೆ ಥಳಿಸಿ ಎಳೆದುಕೊಂಡು ಬಂದಿದ್ದ.

ಇದು ಮೊದಲ ಘಟನೆಯಲ್ಲ

ಇದು ಮೊದಲ ಘಟನೆಯಲ್ಲ

ಮಧ್ಯಪ್ರದೇಶದಲ್ಲಿ ಇಂತಹ ಕ್ರೌರ್ಯ ನಡೆದಿರುವುದು ಇದು ಮೊದಲ ಸಲವೇನಲ್ಲ. ಕಳೆದ ವರ್ಷದ ಜುಲೈನಲ್ಲಿ ಮಹಿಳೆಯೊಬ್ಬರಿಗೆ ಪತಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ನಡೆಯುವ ಶಿಕ್ಷೆ ವಿಧಿಸಲಾಗಿತ್ತು. ಅಸಹಾಯಕ ಮಹಿಳೆ ಒಮ್ಮೆ ಸುಸ್ತಾಗಿ ನಿಂತಾಗ ಕೋಲುಗಳಿಂದ ಹೊಡೆಯಲಾಗಿತ್ತು. ಎರಡು ವರ್ಷದ ಹಿಂದೆ ಕೂಡ ಬುಡಕಟ್ಟು ಸಮುದಾಯ ಮಹಿಳೆ ಮನೆ ಬಿಟ್ಟು ಬೇರೊಬ್ಬನ ಜತೆ ಓಡಿ ಹೋಗಿದ್ದಕ್ಕೆ ಗಂಡನನ್ನು ಹೊರುವ ಶಿಕ್ಷೆ ನೀಡಲಾಗಿತ್ತು.

English summary
A tribal woman was beaten and forced to carry a child on shoulders for 3 KM as punishment for living with her second husband- video goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X