ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ತರಗತಿಯಲ್ಲಿ ಛತ್ರಿ ಹಿಡಿದು ಪಾಠ ಕೇಳಿದ ಬುಡಕಟ್ಟು ವಿದ್ಯಾರ್ಥಿಗಳು

|
Google Oneindia Kannada News

ಶಾಲೆಯ ಮಾಳಿಗೆ ಸೋರುತ್ತಿರುವುದರಿಂದ ಶಾಲೆಯಲ್ಲಿ ಮಕ್ಕಳು ಛತ್ರಿ ಹಿಡಿದು ಪಾಠ ಕೇಳಿದ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬುಡಕಟ್ಟು ವಿದ್ಯಾರ್ಥಿಗಳು ಶಾಲೆಯ ಮೇಲ್ಛಾವಣಿ ಸೋರುತ್ತಿರುವುದರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತರಗತಿಯೊಳಗೆ ಛತ್ರಿ ಹಿಡಿದು ಕುಳಿತಿದ್ದಾರೆ.

ಟ್ರೈಬಲ್ ಆರ್ಮಿ ಎಂಬ ಹೆಸರಿನ ಜನಪ್ರಿಯ ಬುಡಕಟ್ಟು ಹಕ್ಕುಗಳ ವಕಾಲತ್ತು ಖಾತೆಯು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದೆ. "ಈ ವಿಡಿಯೊ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯದ ಖೈರಿಕಲಾ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ತೆಗೆಯಲಾಗಿದೆ. ವಿದ್ಯಾರ್ಥಿಗಳಿಗೆ ಮಳೆನೀರು ತೊಟ್ಟಿಕ್ಕುವುದನ್ನು ತಪ್ಪಿಸಲು ಶಾಲೆಯೊಳಗೆ ಛತ್ರಿ ಹಿಡಿದು ಓದಲು ಒತ್ತಾಯಿಸಲಾಗುತ್ತದೆ. ಶಿವರಾಜ್ ಚೌಹಾಣ್ ತನ್ನ ಮಗುವನ್ನು ವಿದೇಶಕ್ಕೆ ಓದಲು ಕಳುಹಿಸುತ್ತಾರು. ಇದು ಬಡ ಬುಡಕಟ್ಟು ಮಕ್ಕಳ ಸ್ಥಿತಿ." ಎಂದು ಬರೆಯಲಾಗಿದೆ.

 ಅಜಾದಿ ಕಾ ಅಮೃತ ಮಹೋತ್ಸವ; ಶಾಲೆ, ಮದರಸಾ ಮೇಲೆ ರಾಷ್ಟ್ರಧ್ವಜ ಹಾರಾಟ ಅಜಾದಿ ಕಾ ಅಮೃತ ಮಹೋತ್ಸವ; ಶಾಲೆ, ಮದರಸಾ ಮೇಲೆ ರಾಷ್ಟ್ರಧ್ವಜ ಹಾರಾಟ

ವಿಡಿಯೋ ಬಗ್ಗೆ ಪ್ರಶ್ನೆ

ಸಮಾಜದ ಕೆಳಸ್ತರದ ವರ್ಗಗಳ ಮೂಲಭೂತ ಅಗತ್ಯಗಳನ್ನು ಉನ್ನತೀಕರಿಸುವಲ್ಲಿ ಮತ್ತು ಸುಧಾರಿಸುವಲ್ಲಿ ಸರ್ಕಾರದ ನೀತಿಗಳ ಪರಿಣಾಮಕಾರಿತ್ವದ ಮೇಲೆ ವಿಡಿಯೊ ಹಲವಾರು ಪ್ರಶ್ನೆಗಳನ್ನು ಎತ್ತಿದೆ. ರಾಷ್ಟ್ರೀಯ ಸಾಧನೆ ಸಮೀಕ್ಷೆಯಲ್ಲಿ (ಎನ್‌ಎಎಸ್) ಪ್ರಾಥಮಿಕ ತರಗತಿಗಳು ರಾಷ್ಟ್ರೀಯ ಶೈಕ್ಷಣಿಕ ಸಾಧನೆಗಳಲ್ಲಿ ಮಧ್ಯಪ್ರದೇಶವು ಐದನೇ ಸ್ಥಾನದಲ್ಲಿದೆ. ಆದರೆ ಈ ವಿಡಿಯೋ ವರದಿಗಳು ಮತ್ತು ಸಮೀಕ್ಷೆಗಳು ಬಿಂಬಿಸುವ ವ್ಯತಿರಿಕ್ತ ವಾಸ್ತವತೆಯನ್ನು ತೋರಿಸಿದೆ.

ಮಕ್ಕಳ ಹಾಜರಾತಿಯಲ್ಲಿ ಇಳಿಕೆ

ಮಕ್ಕಳ ಹಾಜರಾತಿಯಲ್ಲಿ ಇಳಿಕೆ

ವರದಿಗಳ ಪ್ರಕಾರ, ಶಾಲೆಯ ಪರಿಸ್ಥಿತಿಯು ಮಳೆಗಾಲದಲ್ಲಿ ಅತೀ ಹೆಚ್ಚು ಹದಗೆಡುತ್ತದೆ. ಆದ್ದರಿಂದ ಹೆಚ್ಚಿನ ಪೋಷಕರು ಮಳೆಗಾಲದಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ಬಯಸುತ್ತಾರೆ. ಸೋರುವ ಮೇಲ್ಛಾವಣಿಯಿಂದಾಗಿ ಅನೇಕ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಬಯಸುವುದಿಲ್ಲ.

ದುರಸ್ಥಿ ಕಾರ್ಯಕ್ಕೆ ಮಂಜೂರಾಗದ ಹಣ

ದುರಸ್ಥಿ ಕಾರ್ಯಕ್ಕೆ ಮಂಜೂರಾಗದ ಹಣ

ಹಲವು ಅಧಿಕಾರಿಗಳು ಮೇ ತಿಂಗಳಿನಲ್ಲಿ ಬಿಆರ್‌ಸಿ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಯಾರೂ ಗಮನಹರಿಸಿಲ್ಲ. ದುರಸ್ತಿಗೆ ಪ್ರಸ್ತಾವನೆ ಕಳುಹಿಸಿದ್ದು, ಹಣ ಬಂದ ನಂತರ ಮಾಡಲಾಗುವುದು ಎಂದು ಬಿಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಹೊಸ ನೀತಿಗಳು ಮತ್ತು ಯೋಜನೆಗಳನ್ನು ಪರಿಚಯಿಸುವ ಮೂಲಕ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಒತ್ತು ನೀಡುತ್ತಿರುವಾಗ, ಈ ರೀತಿಯ ನಿದರ್ಶನಗಳು ಅದೇ ಅನುಷ್ಠಾನದ ನೆಲದ ವಾಸ್ತವತೆಯ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡುತ್ತವೆ.

ಶಿವರಾಜ್ ಚೌಹಾಣ್ ಗೆ ಪ್ರಶ್ನೆ

ಶಿವರಾಜ್ ಚೌಹಾಣ್ ಗೆ ಪ್ರಶ್ನೆ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರಶ್ನೆ ಮಾಡಲಾಗುತ್ತಿದೆ. ಮಂತ್ರಿಗಳು ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಾರೆ. ಆದರೆ ಸರ್ಕಾರಿ ಶಾಲೆಗಳ ಸ್ಥಿತಿಯತ್ತ ಗಮನ ಹರಿಸುವವರು ಯಾರೂ ಎಂದು ಪ್ರಶ್ನೆ ಮಾಡಿದ್ದಾರೆ. ಮಕ್ಕಳು ಶಾಲೆಗಳಿಗೆ ಹೋಗದೇ ಎರಡು ಮೂರು ವರ್ಷಗಳು ಕಳೆದಿವೆ. ಹೀಗಿರುವಾಗ ಈಗಲೂ ಈ ಅವಸ್ಥೆಯಾದರೆ ಮಕ್ಕಳು ಶಾಲೆಗೆ ಹೋಗುವುದನ್ನೇ ನಿಲ್ಲಿಸಿಬಿಡುತ್ತಾರೆ. ಇದಕ್ಕೆ ನೇರ ಹೊಣೆ ಸರ್ಕಾರವೇ ಎಂದು ಕೆಲವರು ಕಿಡಿ ಕಾರಿದ್ದಾರೆ. ಮಕ್ಕಳಿಗೆ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಜವಬ್ದಾರಿ. ಆದರೆ ಇದನ್ನು ನಿರ್ಲಕ್ಷಿಸಿ ಮಕ್ಕಳ ಶಿಕ್ಷಣ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಮದು ದೂರಲಾಗಿದೆ.

Recommended Video

ಪ್ರವೀಣ್ ಹತ್ಯೆ ಬಗ್ಗೆ ಮಾತಾಡುವಾಗ ತೇಜಸ್ವಿ ಸೂರ್ಯ ಆಡಿದ ಮಾತು ಈಗ ಫುಲ್ ವೈರಲ್ | OneIndia Kannada

English summary
Madhya Pradesh showing tribal students holding umbrellas inside classrooms to protect themselves from leaky roofs of the building has recently surfaced online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X