• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಸರಿಯಾಗಿ ಓದಿ" ಮಮತಾ ಬ್ಯಾನರ್ಜಿಗೆ ರಾಮಾಯಣ ಪ್ರತಿ ಕೊಟ್ಟ ಮಧ್ಯಪ್ರದೇಶ ಸ್ಪೀಕರ್

|
Google Oneindia Kannada News

ಭೋಪಾಲ್, ಜನವರಿ 26: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಬೋಸ್ ಅವರ 125ನೇ ಜನ್ಮದಿನೋತ್ಸವ ಸಂದರ್ಭ ಶನಿವಾರ ಕೋಲ್ಕತ್ತಾದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವೇದಿಕೆ ಮೇಲೆ ಭಾಷಣಕ್ಕೆ ಬರುತ್ತಿದ್ದಂತೆ ಗುಂಪಿನಿಂದ ಜೈಶ್ರೀರಾಮ್ ಘೋಷಣೆ ಕೇಳಿಬಂದಿತ್ತು.

ಈ ಘೋಷಣೆ ಕೇಳುತ್ತಿದ್ದಂತೆ ಸಿಡುಕಿದ ಮಮತಾ ಬ್ಯಾನರ್ಜಿ, ಕೆಲವೇ ಮಾತುಗಳನ್ನಾಡಿ ವೇದಿಕೆಯಿಂದ ಕೆಳಗಿಳಿದಿದ್ದರು. ಈ ಘಟನೆ ನಂತರ ಬಿಜೆಪಿ -ಟಿಎಂಸಿ ನಡುವಿನ ಸಮರ ಮತ್ತಷ್ಟು ಹೆಚ್ಚಾಗಿತ್ತು. ಹಲವು ಬಿಜೆಪಿ ಮುಖಂಡರು ರಾಮನಾಮದ ವಿರುದ್ಧ ಮಮತಾ ಬ್ಯಾನರ್ಜಿ ನಡೆ ಖಂಡಿಸಿದ್ದರು. ಈ ವಿವಾದದ ನಡುವೆ ಮಧ್ಯಪ್ರದೇಶದ ವಿಧಾನಸಭೆ ಸ್ಪೀಕರ್ ರಾಮೇಶ್ವರ ಶರ್ಮಾ ರಾಮಾಯಣದ ಪ್ರತಿಯನ್ನು ಸಿಎಂ ಮಮತಾ ಬ್ಯಾನರ್ಜಿಗೆ ಕೊಡುಗೆ ನೀಡಿ, ಇದನ್ನು ಸರಿಯಾಗಿ ಓದಿ ಎಂದು ಮನವಿ ಮಾಡಿಕೊಂಡಿದ್ದಾರೆ.

 ಗೂಳಿಗೆ ಕೆಂಪು ಬಟ್ಟೆ ತೋರಿಸಿದಂತಾಗಿದೆ ಗೂಳಿಗೆ ಕೆಂಪು ಬಟ್ಟೆ ತೋರಿಸಿದಂತಾಗಿದೆ "ಜೈಶ್ರೀರಾಮ್" ಘೋಷಣೆ; ಹರಿಯಾಣ ಸಚಿವ

ಬಾಂಗ್ಲಾದೇಶದ ಒತ್ತಡದಿಂದ ಮಮತಾ ಬ್ಯಾನರ್ಜಿ ರಾಮನ ಹೆಸರನ್ನು ವಿರೋಧಿಸುತ್ತಿದ್ದಾರೆ. ತಮ್ಮ ವೋಟ್ ಬ್ಯಾಂಕ್ ಗಾಗಿ ರಾಮನನ್ನೇ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಮ ನಾಮವನ್ನು ವಿರೋಧಿಸಿದರೆ ಅಂಥವರ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ರಾವಣನಿಗಿಂತ ದೊಡ್ಡ ರಾಜ್ಯ ಯಾರ ಬಳಿ ಇತ್ತು? ಆದರೆ ರಾಮನನ್ನು ವಿರೋಧಿಸಿದ್ದಕ್ಕೆ ರಾವಣನ ಗತಿ ಏನಾಯಿತು ಎಂಬುದು ಇಡೀ ಜಗತ್ತಿಗೇ ತಿಳಿದಿದೆ ಎಂದು ಹೇಳಿದರು.

72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ

ಸರ್ಕಾರಿ ಕಾರ್ಯಕ್ರಮದಲ್ಲಿ ಶ್ರೀರಾಮನ ಹೆಸರು ಹೇಳಬಾರದು ಎಂದೇನಾದರೂ ಇದೆಯೇ ಎಂದು ಮಮತಾ ಬ್ಯಾನರ್ಜಿಗೆ ಪ್ರಶ್ನಿಸಿದರು.

English summary
Pro-tem Speaker of Madhya Pradesh Assembly Rameshwar Sharma gifted Ramayana to Chief Minister Mamta Banerjee
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X