ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ ರಾಜಕಾರಣಕ್ಕೆ ಟ್ವಿಸ್ಟ್: ರಾತ್ರೋರಾತ್ರಿ ದೆಹಲಿಯತ್ತ ಶಾಸಕರು!

|
Google Oneindia Kannada News

ಭೂಪಾಲ್, ಮಾರ್ಚ್.10: ಮಧ್ಯಪ್ರದೇಶ ರಾಜಕಾರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾಂಗ್ರೆಸ್ ಆಂತರಿಕ ವಲಯದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಲಾಭ ಪಡೆದುಕೊಳ್ಳುವ ಕಸರತ್ತು ನಡೆಯುತ್ತಿದೆ. ರಾತ್ರೋರಾತ್ರಿ ಬಿಜೆಪಿ ಶಾಸಕರ ದಂಡು ದೆಹಲಿಯತ್ತ ಮುಖ ಮಾಡಿದೆ.

ಭೂಪಾಲ್ ಬಿಜೆಪಿ ಕಚೇರಿಯ ಎದುರಿಗೆ ನಿಂತಿದ್ದ ಐದು ಬಸ್ ಗಳಲ್ಲಿ ಬಿಜೆಪಿ ಶಾಸಕರು ಏರ್ ಪೋರ್ಟ್ ಗೆ ತೆರಳಿದ್ದು, ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡ ಗೋಪಾಲ್ ಭಾಗ್ವತ್ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸೇರುವ ಜ್ಯೋತಿರಾದಿತ್ಯ ಸಿಂಧಿಯಾ ಲೆಕ್ಕಾಚಾರವೇನು?ಬಿಜೆಪಿ ಸೇರುವ ಜ್ಯೋತಿರಾದಿತ್ಯ ಸಿಂಧಿಯಾ ಲೆಕ್ಕಾಚಾರವೇನು?

ಇದಕ್ಕೂ ಮೊದಲು ಬಸ್ ಏರಿದ ಬಿಜೆಪಿ ಶಾಸಕರು ಕುಣಿದು ಕುಪ್ಪಳಿಸುತ್ತಾ ಪ್ರಧಾನಮಂತ್ರಿ ಮೋದಿಗೆ ಜೈಕಾರ ಕೂಗುತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

Madhya Pradesh Political Crisis: Overnight BJP MLAs Travel To Delhi

ಸರ್ಕಾರಕ್ಕೆ ಅಪಾಯವಿಲ್ಲ ಎಂದ ಸಿಎಂ ಕಮಲನಾಥ್:

ಮಧ್ಯಪ್ರದೇಶದಲ್ಲಿ ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದರೂ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಸಿಎಂ ಕಮಲನಾಥ್ ತಿಳಿಸಿದ್ದಾರೆ. ಕಾಂಗ್ರೆಸ್ ಮುಖಂಡರಾದ ಸಜ್ಜನ್ ಸಿಂಗ್ ವರ್ಮಾ ಹಾಗೂ ಡಾ.ಗೋವಿಂದ್ ಸಿಂಗ್ ಬೆಂಗಳೂರಿಗೆ ತೆರಳಲಿದ್ದು, ಸರ್ಕಾರದ ವಿರುದ್ಧ ಸಿಡಿದೆದ್ದ 19 ಬಂಡಾಯ ಶಾಸಕರ ಮನವೊಲಿಕೆ ಪ್ರಯತ್ನ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

English summary
Madhya Pradesh Political Crisis: Overnight BJP MLA's Travel To Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X