ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯಪ್ರಿಯರಿಗೆ ಮೋಜಿನ ಸುದ್ದಿ; ಕಡಿಮೆ ರೇಟಲ್ಲಿ ಎಣ್ಣೆ ಬೇಕಾ, ಈ ರಾಜ್ಯಕ್ಕೆ ಬನ್ನಿ!

|
Google Oneindia Kannada News

ಭೋಪಾಲ್, ಮೇ 27: ಭಾರತದಲ್ಲಿ ಪೆಟ್ರೋಲ್ ದರ ಕಡಿಮೆ ಆಯ್ತು, ಡೀಸೆಲ್ ದರ ಕಡಿಮೆ ಆಯ್ತು, ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಸಿಕ್ತು, ಕಬ್ಬಿಣ ಮತ್ತು ಸ್ಟೀಲ್ ಮೇಲಿನ ತೆರಿಗೆಯನ್ನೂ ಕಟ್ ಮಾಡಲಾಯಿತು. ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡರೆ, ಇಲ್ಲೊಂದು ರಾಜ್ಯವು ಮದ್ಯಪ್ರಿಯರಿಗೆ ಸಂತಸ ನೀಡುವಂತಾ ನಿರ್ಧಾರವನ್ನು ಜಾರಿಗೊಳಿಸಿದೆ.

ಕೇಂದ್ರ ಸರ್ಕಾರವು ಅಡುಗೆ ಎಣ್ಣೆಯ ಮೇಲಿನ ಸುಂಕವನ್ನು ತೆಗೆದು ಹಾಕಿದರೆ, ಮಧ್ಯ ಪ್ರದೇಶದಲ್ಲಿ ಮದ್ಯದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವುದಾಗಿ ಘೋಷಿಸಲಾಗಿದೆ.

ಎಣ್ಣೆಪ್ರಿಯರೇ ಎಚ್ಚರಿಕೆ: ಸಿಲಿಕಾನ್ ಸಿಟಿಯಲ್ಲಿ ಎರಡು ದಿನ ಸಿಗಲ್ಲ ಮದ್ಯ!ಎಣ್ಣೆಪ್ರಿಯರೇ ಎಚ್ಚರಿಕೆ: ಸಿಲಿಕಾನ್ ಸಿಟಿಯಲ್ಲಿ ಎರಡು ದಿನ ಸಿಗಲ್ಲ ಮದ್ಯ!

ರಾಜ್ಯದಲ್ಲಿ ಬಿಯರ್ ಮತ್ತು ವೈನ್ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರದ ಸಚಿವ ಸಂಪುಟವು (GoM) ಒಪ್ಪಿಗೆ ನೀಡಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಎಣ್ಣೆ ರೇಟು ಕಡಿಮೆ ಮಾಡುವುದಕ್ಕೆ ಸಂಪುಟ ಸಮ್ಮತಿ

ಎಣ್ಣೆ ರೇಟು ಕಡಿಮೆ ಮಾಡುವುದಕ್ಕೆ ಸಂಪುಟ ಸಮ್ಮತಿ

ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ "ಬಿಯರ್ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ಒಪ್ಪಿಗೆ ನೀಡಿದ ನಂತರದಲ್ಲಿ ಈ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಕ್ಯಾಬಿನೆಟ್‌ಗೆ ಕಳುಹಿಸಲು ನಿರ್ಧರಿಸಲಾಗಿದೆ," ಎಂದು ಮಿಶ್ರಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಯರ್ ಮೇಲೆ ಎಷ್ಟು ಸುಂಕ ಕಡಿಮೆ?

ಬಿಯರ್ ಮೇಲೆ ಎಷ್ಟು ಸುಂಕ ಕಡಿಮೆ?

ಮದ್ಯಪ್ರಿಯರು ಹೆೆಚ್ಚುವರಿ ಆಮದು ಸುಂಕದಿಂದ ದುಬಾರಿ ಬೆಲೆಯಲ್ಲಿ ಎಣ್ಣೆ ಖರೀದಿಸಲು ಪರಿತಪಿಸುವಂತಾ ಪರಿಸ್ಥಿತಿ ಈಗಿಲ್ಲ. ಏಕೆಂದರೆ ಮಧ್ಯಪ್ರದೇಶದಲ್ಲಿ ಮದ್ಯದ ಮೇಲಿನ ಸುಂಕವನ್ನು ತಗ್ಗಿಸುವುದಕ್ಕೆ ಈಗಾಗಲೇ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಬಿಯರ್ ಮೇಲಿನ ಆಮದು ಸುಂಕವನ್ನು ಪ್ರತಿ ಬಲ್ಕ್ ಲೀಟರ್‌ಗೆ 30 ರೂಪಾಯಿಯಿಂದ 20 ರೂಪಾಯಿಗೆ ಇಳಿಸಲಾಗಿದೆ.

ವೈನ್ ಮೇಲೆ ಎಷ್ಟು ಇಳಿಕೆಯಾಯ್ತು ಸುಂಕ?

ವೈನ್ ಮೇಲೆ ಎಷ್ಟು ಇಳಿಕೆಯಾಯ್ತು ಸುಂಕ?

ಬಿಯರ್ ಮೇಲಿನ ಆಮದು ಸುಂಕವಷ್ಟೇ ಅಲ್ಲದೇ ವೈನ್ ಮೇಲಿನ ಆಮದು ಸುಂಕವನ್ನೂ ಸಹ ಇಳಿಸುವುದಕ್ಕೆ ಸಮ್ಮತಿ ನೀಡಲಾಗಿದೆ. ಅದರಂತೆೆ ವೈನ್‌ನ ಮೇಲಿನ ಆಮದು ಸುಂಕವನ್ನು ಪ್ರತಿ ಪ್ರೂಫ್ ಲೀಟರ್‌ಗೆ 10 ರೂಪಾಯಿಯಿಂದ 5 ರೂಪಾಯಿಗೆ ಇಳಿಸಲು ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚಿಸಲಾಗಿದೆ,' ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

2021ರಲ್ಲಿ ಅಬಕಾರಿ ನೀತಿ ಅಳವಡಿಕೆಗೆ ಸೂಚನೆ

2021ರಲ್ಲಿ ಅಬಕಾರಿ ನೀತಿ ಅಳವಡಿಕೆಗೆ ಸೂಚನೆ

ಕಳೆದ 2021ರಲ್ಲಿ, ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರ್ನ್ಯಾಷನಲ್ ಎಕನಾಮಿಕ್ ರಿಲೇಶನ್ಸ್ (ICRIER) ಮತ್ತು ಕಾನೂನು ಸಂಸ್ಥೆ PLR ಚೇಂಬರ್ಸ್‌ನ ಜಂಟಿ ವರದಿಯು ಆಲ್ಕೊಹಾಲ್ ಯುಕ್ತ ಪಾನೀಯಗಳ ಮೇಲಿನ ಸುಂಕಗಳಲ್ಲಿ ಕಡಿತಗೊಳಿಸಬೇಕು. ಅದರ ಆಮದಿಗೆ ಸ್ಪಷ್ಟ ಮತ್ತು ಊಹಿಸಬಹುದಾದ ಅಬಕಾರಿ ನೀತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಸೂಚಿಸಿತ್ತು.

ವರದಿಯಲ್ಲಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ, 2019ರಲ್ಲಿ ಆಲ್ಕೊಹಾಲ್ ಯುಕ್ತ ಪಾನೀಯಗಳ ಜಾಗತಿಕ ರಫ್ತಿನಲ್ಲಿ ಭಾರತದ ಒಟ್ಟು ಪಾಲು ಕೇವಲ ಶೇ.0.27 ಮತ್ತು ಜಾಗತಿಕ ಆಮದುಗಳ ಪಾಲು ಶೇ.0.75 ಆಗಿತ್ತು. ಜಾಗತಿಕ ವ್ಯಾಪಾರದಲ್ಲಿನ ಕಡಿಮೆ ಪಾಲಿಗೆ ಹೆಚ್ಚಿನ ಸುಂಕದ ದರಗಳು ಪ್ರಮುಖ ಕಾರಣವೆಂದು ಉಲ್ಲೇಖಿಸಲಾಗಿತ್ತು.

English summary
Madhya Pradesh Ministerial group agrees to reduce import duty on wine, beer. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X