ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: 3,419 ಕೋಟಿ ರುಪಾಯಿ ವಿದ್ಯುತ್ ಬಿಲ್ ಕಂಡು ವ್ಯಕ್ತಿ ಅಸ್ವಸ್ಥ!

|
Google Oneindia Kannada News

ಗ್ವಾಲಿಯರ್, ಜುಲೈ 27: ಒಂದು ತಿಂಗಳಿಗೆ ಒಂದು ಸಾಮಾನ್ಯ ಮನೆಗೆ ಎಷ್ಟು ವಿದ್ಯುತ್ ಬಿಲ್ ಬರಬಹುದು?. ಏನೇ ವಿದ್ಯುತ್ ಬಳಕೆ ಮಾಡಿರು 500 ರುಪಾಯಿಯಿಂದ 2000 ರುಪಾಯಿವರೆಗೆ ಬರಬಹುದು. ಆದರೆ ಇಲ್ಲೊಬ್ಬರಿಗೆ ಬಂದಿರುವ ವಿದ್ಯುತ್ ಬಿಲ್ ಅವರನ್ನು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ.

ಪ್ರತಿ ತಿಂಗಳಂತೆ ವಿದ್ಯುತ್ ಬಿಲ್ ಸ್ವೀಕರಿಸಿದ ಅವರು ಅದರಲ್ಲಿದ್ದ ಮೊತ್ತವನ್ನು ನೋಡಿ ಅಸ್ವಸ್ತರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ.

80 ಸಾವಿರಕ್ಕೂ ಹೆಚ್ಚು ವಿದ್ಯುತ್ ಬಿಲ್ ನೋಡಿ ಹೈಟೆನ್ಷನ್ ವೈರ್ ಮೇಲೇರಿ ಕುಳಿತ ರೈತ80 ಸಾವಿರಕ್ಕೂ ಹೆಚ್ಚು ವಿದ್ಯುತ್ ಬಿಲ್ ನೋಡಿ ಹೈಟೆನ್ಷನ್ ವೈರ್ ಮೇಲೇರಿ ಕುಳಿತ ರೈತ

ಗ್ವಾಲಿಯರ್ ನಗರದ ಶಿವ ವಿಹಾರ್ ಕಾಲೋನಿ ನಿವಾಸಿ ಪ್ರಿಯಾಂಕ ಗುಪ್ತಾ ಅವರಿ 3,419 ಕೋಟಿ ರುಪಾಯಿ ವಿದ್ಯುತ್ ಬಿಲ್ ಬಂದಿದೆ. ಇದನ್ನು ನೋಡಿದ ಅವರ ಮಾವ ಆತಂಕಕ್ಕೊಳಗಾಗಿ ಅಸ್ವಸ್ಥರಾಗಿದ್ದಾರೆ. ಪ್ರಿಯಾಂಕ ಗುಪ್ತಾ ಅವರ ಪತಿ ಸಂಜೀವ್ ಕಂಕಣೆ ಜುಲೈ ತಿಂಗಳ ಮನೆಯ ಬಳಕೆಗಾಗಿ ವಿದ್ಯುತ್ ಬಿಲ್‌ನಲ್ಲಿನ ದೊಡ್ಡ ಮೊತ್ತವನ್ನು ನೋಡಿದ ಬಳಿಕ ನಮ್ಮ ತಂದೆ ಅಸ್ವಸ್ಥರಾದರು ಎಂದು ತಿಳಿಸಿದ್ದಾರೆ.

ಜುಲೈ 20 ರಂದು ನೀಡಲಾದ ವಿದ್ಯುತ್ ಬಿಲ್ ಅನ್ನು ಮಧ್ಯಪ್ರದೇಶ ಮಧ್ಯ ಕ್ಷೇತ್ರ ವಿದ್ಯುತ್ ವಿತ್ರನ್ ಕಂಪನಿಯ (MPMKVVC) ಪೋರ್ಟಲ್ ಮೂಲಕ ಪರಿಶೀಲಿಸಿದ್ದಾರೆ. ಆದರೆ ಬಿಲ್ ಮೊತ್ತ ಸರಿಯಾಗಿದೆ ಎಂದು ಪೋರ್ಟಲ್‌ನಲ್ಲಿ ತೋರಿಸಿದೆ.

 ನೌಕರನ ಎಡವಟ್ಟಿನಿಂದ ಸಾವಿರ ಕೋಟಿಯ ಬಿಲ್

ನೌಕರನ ಎಡವಟ್ಟಿನಿಂದ ಸಾವಿರ ಕೋಟಿಯ ಬಿಲ್

ನೌಕರನೊಬ್ಬ ಮಾಡಿದ ಎಡವಟ್ಟಿನಿಂದ ಇಷ್ಟೊಂದು ಪ್ರಮಾಣದ ಬಿಲ್ ಬಂದಿದೆ ಎಂದು ವಿದ್ಯುತ್ ಕಂಪನಿ ಹೇಳಿಕೆ ನೀಡಿದೆ.
ಸಾಫ್ಟ್ ವೇರ್ ನಲ್ಲಿ ಬಳಕೆಯಾದ ಘಟಕಗಳ ಜಾಗದಲ್ಲಿ ನೌಕರನೊಬ್ಬ ಗ್ರಾಹಕರ ಸಂಖ್ಯೆ ನಮೂದಿಸಿದ್ದರಿಂದ ಹೆಚ್ಚಿನ ಮೊತ್ತದ ಬಿಲ್ ಬಂದಿದೆ. ಸರಿಪಡಿಸಿದ ₹ 1,300 ಬಿಲ್ ಅನ್ನು ವಿದ್ಯುತ್ ಗ್ರಾಹಕರಿಗೆ ನೀಡಲಾಗಿದೆ. ಸರಿಪಡಿಸಿದ ಬಿಲ್ ಅನ್ನು ಪಡೆದ ಸಂಜೀವ್ ಕಂಕಣೆ ಕುಟುಂಬ ನಿಟ್ಟುಸಿರು ಬಿಟ್ಟಿದೆ.

ವಿದ್ಯುತ್ ಬಿಲ್ ಪಾವತಿ; ವೈರಲ್ ಸುದ್ದಿಗೆ ಸ್ಪಷ್ಟನೆ ಕೊಟ್ಟ ಬೆಸ್ಕಾಂವಿದ್ಯುತ್ ಬಿಲ್ ಪಾವತಿ; ವೈರಲ್ ಸುದ್ದಿಗೆ ಸ್ಪಷ್ಟನೆ ಕೊಟ್ಟ ಬೆಸ್ಕಾಂ

 ನೌಕರನ ವಿರುದ್ಧ ಕ್ರಮ

ನೌಕರನ ವಿರುದ್ಧ ಕ್ರಮ

ಎಂಪಿಎಂಕೆವಿವಿಸಿ ಜನರಲ್ ಮ್ಯಾನೇಜರ್ ನಿತಿನ್ ಮಾಂಗ್ಲಿಕ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ್ದು, ನೌಕರನೊಬ್ಬನ ತಪ್ಪಿನಿಂದ ಅಧಿಕ ಮೊತ್ತದ ಬಿಲ್ ಬಂದಿದೆ ಎಂದು ಹೇಳಿದ್ದಾರೆ. ಸಂಬಂಧಪಟ್ಟ ನೌಕರನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ದೋಷವನ್ನು ಸರಿಪಡಿಸಲಾಗಿದ್ದು, ಸಂಬಂಧಪಟ್ಟ ನೌಕರನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

 ವಿದ್ಯುತ್ ಬಿಲ್ ಹೆಸರಿನಲ್ಲಿ ಆರು ಜನರಿಗೆ ವಂಚನೆ

ವಿದ್ಯುತ್ ಬಿಲ್ ಹೆಸರಿನಲ್ಲಿ ಆರು ಜನರಿಗೆ ವಂಚನೆ

ರಾಜ್ಯದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಒಂದು ವಾರದೊಳಗೆ ಬಾಕಿ ಇರುವ ವಿದ್ಯುತ್ ಬಿಲ್‌ಗಳನ್ನು ಪಾವತಿಸುವಂತೆ ಸಂದೇಶಗಳನ್ನು ಕಳುಹಿಸಿ ಆರು ಜನರನ್ನು ವಂಚಿಸಿದ್ದಾರೆ.
ಸಂದೇಶಗಳಲ್ಲಿ ನಮೂದಿಸಿದ ಸಂಖ್ಯೆಗೆ ಫೋನ್ ಮಾಡಿದಾಗ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಪ್ರವೇಶವನ್ನು ಪಡೆದ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಲು ಮತ್ತು ಬಿಲ್ ಮೊತ್ತವನ್ನು ವರ್ಗಾಯಿಸಲು ಸೂಚಿಸಲಾಗಿದೆ.

 ನಕಲಿ ಆಪ್ ಬಳಸಿ 1 ಲಕ್ಷ ರುಪಾಯಿ ವಂಚನೆ

ನಕಲಿ ಆಪ್ ಬಳಸಿ 1 ಲಕ್ಷ ರುಪಾಯಿ ವಂಚನೆ

ಕ್ರೈಂ ಬ್ರಾಂಚ್ ಅಧಿಕಾರಿಯ ಪ್ರಕಾರ, ಮೊದಲ ಪ್ರಕರಣದಲ್ಲಿ, ದೂರುದಾರ ಅನಂತ್‌ ಎನ್ನುವವರಿಂದ ಮಾಹಿತಿ ಸಂಗ್ರಹಿಸಿದ್ದಾರೆ, ವಿದ್ಯುತ್ ಬಿಲ್ ಬಾಕಿಯಿದೆ ಎಂಬ ಸಂದೇಶವನ್ನು ಅನಂತ್ ಸ್ವೀಕರಿಸಿದ್ದಾರೆ.

ಬಿಲ್ ಪಾವತಿಸಲು ವಿಫಲವಾದರೆ ದೂರುದಾರರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಸಂದೇಶ ಬಂದಿದೆ. ಮೆಸೇಜ್ ಓದಿದ ಅನಂತ್ ಮೆಸೇಜ್ ಕಳುಹಿಸಿದವರು ಕೊಟ್ಟ ನಂಬರ್ ಗೆ ಫೋನ್ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ವಿದ್ಯುತ್ ವಿತರಣಾ ಕಂಪನಿಯ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ, ಮೊಬೈಲ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೇಳಿದ್ದಾರೆ.

ದೂರುದಾರರು ತಮ್ಮ ಮೊಬೈಲ್ ಫೋನ್‌ನಲ್ಲಿ ರಿಮೋಟ್ ಆ್ಯಪ್ ಡೌನ್‌ಲೋಡ್ ಮಾಡಿದಾಗ, ಆರೋಪಿಗೆ ಅವರ ಮೊಬೈಲ್ ಫೋನ್‌ಗೆ ಪ್ರವೇಶ ಸಿಕ್ಕಿತು. ದಂಡದಿಂದ ತಪ್ಪಿಸಿಕೊಳ್ಳಲು 50 ರೂಪಾಯಿ ಪಾವತಿಸುವಂತೆ ತಿಳಿಸಿದ್ದಾರೆ. ದೂರುದಾರರು ಪಾವತಿಸಿದ ನಂತರ ಆರೋಪಿಯು ಅನಂತ್ ಬ್ಯಾಂಕ್ ಖಾತೆಯಿಂದ ಎರಡು ಕಂತುಗಳಲ್ಲಿ 1 ಲಕ್ಷ ರೂ. ಕಳುವು ಮಾಡಿದ್ದಾನೆ.

ಸಿಟಿ ಕ್ರೈಂ ಬ್ರಾಂಚ್‌ನ ವಂಚನೆ ತನಿಖಾ ಇಲಾಖೆ ವಂಚನೆ ಸಂತ್ರಸ್ತರಿಗೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಮುಖವಾಗಿ, ಎಲ್ಲಾ ಘಟನೆಗಳಲ್ಲಿ, ಕಾರ್ಯಾಚರಣೆಯ ವಿಧಾನ ಒಂದೇ ಆಗಿತ್ತು ಎಂದು ವಿವರಣೆ ನೀಡಿದ್ದಾರೆ.

Recommended Video

Sonia Gandhi ED ಎದುರು ಹಾಜರು , ಪ್ರತಿಭಟನೆ ಮಾಡಿದ Rahul ಬಂಧನ | OneIndia Kannada

English summary
Priyanka Gupta A resident of Gwalior in Madhya Pradesh, was in for a huge shock when she received a electricity bill of a whopping Rs 3,419 crore due to which her father-in-law fell ill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X