ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದ ವ್ಯಕ್ತಿ ಸಾವು

|
Google Oneindia Kannada News

ಭೋಪಾಲ್, ಜನವರಿ 9: ಖಾಸಗಿ ಆಸ್ಪತ್ರೆಯೊಂದರಲ್ಲಿ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗಕ್ಕೆ ಒಳಪಟ್ಟಿದ್ದ ಮಧ್ಯಪ್ರದೇಶದ 42 ವರ್ಷದ ಸ್ವಯಂ ಸೇವಕರೊಬ್ಬರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈಸ್ ಚಾನ್ಸಲರ್ ತಿಳಿಸಿದ್ದಾರೆ. ಭೋಪಾಲ್‌ನ ವ್ಯಕ್ತಿಗೆ ವಿಷ ಪ್ರಾಶನ ಮಾಡಿಸಿರಬಹುದು ಎಂಬ ಅನುಮಾನವನ್ನು ಸರ್ಕಾರಿ ಅಧಿಕಾರಿಗಳು ವ್ಯಕ್ತಪಡಿಸಿದ್ದು, ಅವರ ಅಂಗಾಂಗ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.

2020ರ ಡಿಸೆಂಬರ್ 12ರಂದು ನಡೆದ ಕೋವ್ಯಾಕ್ಸಿನ್ ಪ್ರಯೋಗದಲ್ಲಿ ದೀಪಕ್ ಮರಾವಿ ಎಂಬ ವ್ಯಕ್ತಿ ಪಾಲ್ಗೊಂಡಿದ್ದರು ಎಂದು ಪೀಪಲ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈಸ್ ಚಾನ್ಸಲರ್ ಡಾ. ರಾಜೇಶ್ ಕಪೂರ್ ತಿಳಿಸಿದ್ದಾರೆ.

ಸಂಗ್ರಹಣಾ ಸ್ಥಳಗಳಲ್ಲಿ ಕೋವಿಡ್-19 ಲಸಿಕೆ ಸುರಕ್ಷತೆಗೆ ಎಸ್‌ಒಪಿಸಂಗ್ರಹಣಾ ಸ್ಥಳಗಳಲ್ಲಿ ಕೋವಿಡ್-19 ಲಸಿಕೆ ಸುರಕ್ಷತೆಗೆ ಎಸ್‌ಒಪಿ

ಅವರ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು, ಆ ವ್ಯಕ್ತಿಗೆ ವಿಷ ಪ್ರಾಶನ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಮಧ್ಯಪ್ರದೇಶ ಮೆಡಿಕೋ ಲೀಗಲ್ ಸಂಸ್ಥೆ ನಿರ್ದೇಶಕ ಡಾ. ಅಶೋಕ್ ಶರ್ಮಾ ತಿಳಿಸಿದ್ದಾರೆ. ಆದರೆ ಅಂಗಾಂಗ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದಿದ್ದಾರೆ.

Madhya Pradesh Man Dies 10 Days After Taking Bharat Biotechs Covaxin

ಮೆರಾವಿ ಅವರು ಡಿ 21ರಂದೇ ಮೃತಪಟ್ಟಿದ್ದರು. ಈ ಘಟನೆ ಬಗ್ಗೆ ಲಸಿಕೆ ತಯಾರಕ ಸಂಸ್ಥೆಗಳಾದ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್‌ಗೆ ಮಾಹಿತಿ ನೀಡಲಾಗಿತ್ತು. ಪ್ರಯೋಗದಲ್ಲಿ ಮೆರಾವಿ ಅವರನ್ನು ಬಳಸುವ ಮುನ್ನ ಅವರ ಒಪ್ಪಿಗೆ ಪಡೆಯಲು ಎಲ್ಲ ಶಿಷ್ಟಾಚಾರಗಳನ್ನು ಅನುಸರಿಸಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಮಾರ್ಗಸೂಚಿಯಂತೆ ಲಸಿಕೆ ಪಡೆದುಕೊಂಡ ಅರ್ಧ ಗಂಟೆ ಮೆರಾವಿ ಅವರನ್ನು ಸೂಕ್ಷ್ಮವಾಗಿ ಗಮನಿಸಲಾಗಿತ್ತು. ಬಳಿಕ ಏಳೆಂಟು ದಿನಗಳ ವರೆಗೆ ಅವರ ಆರೋಗ್ಯವನ್ನು ಗಮನಿಸಲಾಗಿತ್ತು ಎಂದಿದ್ದಾರೆ.

 ದೇಶದಲ್ಲಿ ಶೀಘ್ರದಲ್ಲಿಯೇ ಬರಲಿದೆ ಮೂಗಿನ ಮೂಲಕ ನೀಡುವ ಕೋವಿಡ್-19 ಲಸಿಕೆ ದೇಶದಲ್ಲಿ ಶೀಘ್ರದಲ್ಲಿಯೇ ಬರಲಿದೆ ಮೂಗಿನ ಮೂಲಕ ನೀಡುವ ಕೋವಿಡ್-19 ಲಸಿಕೆ

ಬುಡಕಟ್ಟು ಸಮುದಾಯದ ಮೇರಾವಿ ಕಾರ್ಮಿಕನಾಗಿ ದುಡಿಮೆ ಮಾಡುತ್ತಿದ್ದರು. ಮೆರಾವಿ ಮತ್ತು ಆತನ ಜತೆಗಾರರು ಡಿ. 12ರಂದು ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿದ್ದರು. ಮನೆಗೆ ಮರಳಿದ ಬಳಿಕ ಅವರಲ್ಲಿ ಆಯಾಸ ಹಾಗೂ ಕೆಲವು ಆರೋಗ್ಯ ಸಮಸ್ಯೆಗಳು ಕಂಡುಬಂದಿದ್ದವು. ಡಿಸೆಂಬರ್ 17ರಂದು ಅವರು ತೋಳು ನೋವು ಎಂದು ತಿಳಿಸಿದ್ದರು. ಎರಡು ದಿನಗಳ ಬಳಿಕ ಬಾಯಲ್ಲಿ ನೊರೆ ಬಂದಿತ್ತು. ಒಂದೆರಡು ದಿನಗಲ್ಲಿ ಸರಿ ಹೋಗುತ್ತದೆ ಎಂದು ವೈದ್ಯರ ಬಳಿ ಹೋಗಲು ನಿರಾಕರಿಸಿದ್ದರು. ಪರಿಸ್ಥಿತಿ ಮತ್ತಷ್ಟು ಹದಗೆಟ್ಟಾಗ ಡಿ. 21ರಂದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಕುಟುಂಬದವರು ತಿಳಿಸಿದ್ದಾರೆ.

English summary
A man who participated as volunteer for Bharat Biotech's Covaxin trials in Madhya Pradesh died 10 days after vaccination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X