ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯ ಪ್ರದೇಶ: ಮಹಾತ್ಮಾ ಗಾಂಧಿ ಅಸ್ಥಿ ಕಳುವು

|
Google Oneindia Kannada News

ಭೋಪಾಲ್, ಅಕ್ಟೋಬರ್ 04: ಮಹಾತ್ಮಾ ಗಾಂಧಿ ಅವರ 150 ನೇ ಜಯಂತಿಯನ್ನು ಎರಡು ದಿನಗಳ ಹಿಂದಷ್ಟೆ ದೇಶ ಆಚರಿಸಿದೆ. ಆದರೆ ಗಾಂಧೀಜಿ ಅವರ ನೆನಪಾಗಿದ್ದ ಅವರ ಅಸ್ಥಿಯನ್ನು ಯಾರೋ ದುಷ್ಕರ್ಮಿಗಳು ಕಳುವು ಮಾಡಿದ್ದಾರೆ.

ಜನಪ್ರಿಯತೆ ಕಳೆದುಕೊಳ್ಳದ ಬದನಾಳು ಖಾದಿ!ಜನಪ್ರಿಯತೆ ಕಳೆದುಕೊಳ್ಳದ ಬದನಾಳು ಖಾದಿ!

ಮಹಾತ್ಮಾ ಗಾಂಧಿ ಅವರ ಮೃತದೇಹದ ಅಂತ್ಯಸಂಸ್ಕಾರದ ಬಳಿಕ ಅಸ್ಥಿಯನ್ನು ಮಧ್ಯ ಪ್ರದೇಶ ರಾಜ್ಯದ ರೇವಾ ಎಂಬಲ್ಲಿ ಗಾಂಧಿ ಭವನದಲ್ಲಿ ಇರಿಸಲಾಗಿತ್ತು. ಅದು ಕಳುವಾಗಿದ್ದು, ಕಳುವಾಗಿರುವ ವಿಷಯ ಅಕ್ಟೋಬರ್ ಎರಡರಂದು ಗೊತ್ತಾಗಿದೆ.

ವೈರಲ್ ವಿಡಿಯೋ: ಕೇಳಲೇ ಬೇಕಾದ ಪಿಯುಸಿ ವಿದ್ಯಾರ್ಥಿಯ ಭಾಷಣವೈರಲ್ ವಿಡಿಯೋ: ಕೇಳಲೇ ಬೇಕಾದ ಪಿಯುಸಿ ವಿದ್ಯಾರ್ಥಿಯ ಭಾಷಣ

ಪೂರ್ಣ ಅಸ್ಥಿ ಕಳುವಾಗಿಲ್ಲ, ಬದಲಿಗೆ ಸ್ವಲ್ಪವನ್ನಷ್ಟೆ ಯಾರೊ ದುಷ್ಕರ್ಮಿಗಳು ಕಳುವು ಮಾಡಿದ್ದಾರೆ. ಜೊತೆಗೆ ಭವನದ ಮಧ್ಯದಲ್ಲಿ ಇಡಲಾಗಿದ್ದ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿ, ಅದರ ಮೇಲೆ 'ದೇಶದ್ರೋಹಿ' ಎಂದು ಬರೆದಿದ್ದಾರೆ.

Madhya Pradesh: Mahatma Gandhis Ashes Stolen

ರೇವಾ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರು ಗಾಂಧಿ ಜಯಂತಿಯಂದು ಗಾಂಧಿ ಭವನಕ್ಕೆ ಭೇಟಿ ನೀಡಿದ್ದಾಗ ಗಾಂಧಿ ಅವರ ಅಸ್ಥಿ ಕಳುವಾಗಿರುವುದು ಗೊತ್ತಾಗಿದೆ. ಕೂಡಲೇ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅವಳಿ ಕರುಗಳಿಗೆ ಮನೆಯವರಿಟ್ಟ ಹೆಸರೇ ಹೇಳುತ್ತಿದೆ ಗಾಂಧಿಪ್ರೇಮದ ಕಥೆಯನ್ನು...ಅವಳಿ ಕರುಗಳಿಗೆ ಮನೆಯವರಿಟ್ಟ ಹೆಸರೇ ಹೇಳುತ್ತಿದೆ ಗಾಂಧಿಪ್ರೇಮದ ಕಥೆಯನ್ನು...

ರೇವಾ ಜಿಲ್ಲೆ ಎಸ್‌ಪಿ ಅಬಿದ್ ಖಾನ್ ಮಾತನಾಡಿ, 'ನಾವು ಪ್ರಕರಣ ದಾಖಲಿಸಿಕೊಂಡಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಗಾಂಧಿ ಭವನದ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುತ್ತೇವೆ' ಎಂದು ಹೇಳಿದ್ದಾರೆ.

English summary
Mahatma Gandhi's ashes stolen where they were kept in Madhya Pradesh's Rewa district's Gandhi Bhavan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X