ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರ ವೋಟಿಗಾಗಿ ಕಮಲ್ ನಾಥ್ ಮನವಿ ವಿಡಿಯೋ: ಕಾಂಗ್ರೆಸ್‌ಗೆ ಮುಜುಗರ

|
Google Oneindia Kannada News

ಭೋಪಾಲ್, ನವೆಂಬರ್ 22: ಮಧ್ಯಪ್ರದೇಶ ವಿಧಾನಸಭೆಯಲ್ಲಿ ಶೇ 90ರಷ್ಟು ಮುಸ್ಲಿಮರು ಮತದಾನ ಮಾಡದೆ ಇದ್ದರೆ ಕಾಂಗ್ರೆಸ್ ಖಂಡಿತವಾಗಿಯೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದ ಕಾಂಗ್ರೆಸ್‌ನ ಮುಖ್ಯಮಂತ್ರಿ ಆಕಾಂಕ್ಷಿ ಕಮಲ್ ನಾಥ್, ವಿವಾದದ ಬಗ್ಗೆ ಕ್ಷಮೆ ಕೋರಿಲ್ಲ. ಬದಲಾಗಿ ತಮ್ಮ ಮಾತನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.

ಮುಸ್ಲಿಮರ ವೋಟುಗಳಿಂದ ಮಾತ್ರವೇ ಕಾಂಗ್ರೆಸ್ ಗೆಲ್ಲಲು ಸಾಧ್ಯ ಎಂದು ಕಾಂಗ್ರೆಸ್ ನಾಯಕ ಕಮಲ್ ನಾಥ್ ವಿವಾದಾತ್ಮಕ ಹೇಳಿಕೆ ನೀಡಿರುವ ವಿಡಿಯೋ ಬಹಿರಂಗವಾಗಿತ್ತು.

ನಾವು ಮುಸ್ಲಿಂ ಸಮುದಾಯದ ಶೇ 90ರಷ್ಟು ಮತಗಳನ್ನು ಪಡೆದುಕೊಳ್ಳದೆ ಹೋದರೆ ಭಾರಿ ಅಂತರದ ಸೋಲು ಅನುಭವಿಸುತ್ತೇವೆ. ನಮಗೆ ಸಂಖ್ಯಾಬಲವಿದೆ. ಮುಸ್ಲಿಮರ ವೋಟುಗಳು ಎಲ್ಲಿವೆ ಎನ್ನುವುದು ನಿಮಗೆ ಗೊತ್ತು. ಆ ಮತಗಳು ಚಲಾವಣೆಯಾಗುತ್ತವೆ ಎಂಬುದನ್ನು ನೀವು ನೋಡಿಕೊಳ್ಳಬೇಕು. ನಮಗೆ ಕಡಿಮೆ ಮತಗಳು ದೊರೆತರೆ ಅದಕ್ಕೆ ಕಾರಣಗಳಿರುತ್ತವೆ. ನೀವು ಆ ಕಾರಣಗಳನ್ನು ಭೇದಿಸಬೇಕು ಎಂದು ಕಮಲ್ ನಾಥ್ ಮುಸ್ಲಿಂ ಮುಖಂಡರೊಂದಿಗೆ ನಡೆಸಿದ್ದ ಗೋಪ್ಯ ಸಭೆಯಲ್ಲಿ ಹೇಳಿದ್ದರು.

ಮುಸ್ಲಿಮರ ವೋಟುಗಳಿಂದ ಮಾತ್ರ ಕಾಂಗ್ರೆಸ್‌ಗೆ ಜಯ: ವಿವಾದ ಸೃಷ್ಟಿಸಿದ ಕಮಲ್ ನಾಥ್ ಮುಸ್ಲಿಮರ ವೋಟುಗಳಿಂದ ಮಾತ್ರ ಕಾಂಗ್ರೆಸ್‌ಗೆ ಜಯ: ವಿವಾದ ಸೃಷ್ಟಿಸಿದ ಕಮಲ್ ನಾಥ್

ಈ ವಿಡಿಯೋ ಮಧ್ಯಪ್ರದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಬಿಜೆಪಿ ಕಮಲ್ ನಾಥ್ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದರೆ, ಕಾಂಗ್ರೆಸ್ ತೀವ್ರ ಮುಜುಗರಕ್ಕೆ ಒಳಗಾಗಿದೆ.

ಆದರೆ, ಕಮಲ್ ನಾಥ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಂತೆ ಮಾತನಾಡಿದ್ದಾರೆ.

ಧರ್ಮ ಮತ್ತು ರಾಜನೀತಿ

ಧರ್ಮ ಮತ್ತು ರಾಜನೀತಿ

ಧರ್ಮದ ರಾಜನೀತಿಯಲ್ಲಿ ಇವೆಲ್ಲವೂ ಒಪ್ಪಿತ. ಈ ವಿಡಿಯೋ ಅಥವಾ ವಾಟ್ಸ್‌ಆಪ್ ರಾಜನೀತಿಯಲ್ಲಿ ಇವು ಈಗ ಸೇರಿಕೊಂಡಿವೆ. ನನಗೆ ಇವುಗಳ ಬಗ್ಗೆ ಚಿಂತೆಯಿಲ್ಲ. ಏಕೆಂದರೆ ಜನರು ಇಂತಹ ಮಾತುಗಳಿಂದ ಪ್ರಭಾವಿತರಾಗುವವರಲ್ಲ. ಸತ್ಯ ಎಲ್ಲರ ಎದುರೇ ಇದೆ ಎಂದು ಕಮಲ್ ನಾಥ್ ತಮ್ಮ ವೈರಲ್ ವಿಡಿಯೋ ಬಗ್ಗೆ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಕೈಚಾಚಿದ ಎಸ್ಪಿಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಕೈಚಾಚಿದ ಎಸ್ಪಿ

Array

ಕ್ರಮ ತೆಗೆದುಕೊಳ್ಳಲು ಆಗ್ರಹ

ಧರ್ಮದ ಆಧಾರದಲ್ಲಿ ಮತ ಚಲಾಯಿಸಲು ಮನವಿ ಮಾಡುತ್ತಿರುವ ಕಮಲ್ ನಾಥ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮಧ್ಯಪ್ರದೇಶ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಕಾಂಗ್ರೆಸ್ ತನ್ನ ಜಾತ್ಯತೀತತೆಯನ್ನು ಕೋಮುವಾದದೊಂದಿಗೆ ಬೆರೆಸುತ್ತಿರುವ ಪ್ರಕರಣವಿದು. ಇದೊಂದು ರೀತಿ ರಸ್ತೆಯಲ್ಲಿ ಹೋಗುವಾಗ ತಿಲಕವಿಟ್ಟುಕೊಂಡು, ಖಾಸಗಿಯಾಗಿ ಮನೆಯಲ್ಲಿ ಟೊಪ್ಪಿ ಧರಿಸಿದಂತೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಟೀಕಿಸಿದ್ದಾರೆ.

ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ: ವಿಡಿಯೋ ವೈರಲ್ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ: ವಿಡಿಯೋ ವೈರಲ್

ನೀತಿ ಸಂಹಿತೆಯೊಳಗೆ ಮುಗಿಸಿ

ನೀತಿ ಸಂಹಿತೆಯೊಳಗೆ ಮುಗಿಸಿ

ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದರೆ ಶೇ 80ರಷ್ಟು ಮುಸ್ಲಿಮರ ಮತಗಳು ಬಂದರೂ ಸಾಲುವುದಿಲ್ಲ. ಶೇ 90ರಷ್ಟು ಮತದಾನ ಮಾತ್ರ ಕಾಂಗ್ರೆಸ್‌ಅನ್ನು ಉಳಿಸಲು ಸಾಧ್ಯ. ಇದನ್ನು ನೆರವೇರಿಸಲು ಮುಖಂಡರು ತಮ್ಮಿಂದ ಸಾಧ್ಯವಾದ ಎಲ್ಲವನ್ನೂ ಮಾಡಬೇಕು. ಮತಗಟ್ಟೆಯಿಂದ ಮತಗಟ್ಟೆಗೆ ತೆರಳಿ ಮುಸ್ಲಿಂ ಮತದಾರರನ್ನು ಕಂಡುಕೊಳ್ಳಿ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಇದೆಲ್ಲವೂ ನಡೆಯಬೇಕು ಎಂದು ಕಮಲ್ ನಾಥ್ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಮಧ್ಯಪ್ರದೇಶ: ಚುನಾವಣೆ ಗೆಲ್ಲಲು ಆರೆಸ್ಸೆಸ್ ಮೊರೆಹೋದ ಬಿಜೆಪಿ?ಮಧ್ಯಪ್ರದೇಶ: ಚುನಾವಣೆ ಗೆಲ್ಲಲು ಆರೆಸ್ಸೆಸ್ ಮೊರೆಹೋದ ಬಿಜೆಪಿ?

ನೆಟ್ಟಿಗರ ಆಕ್ರೋಶ

ಮೂಲಭೂತವಾದಿಗಳನ್ನು ಓಲೈಕೆ ಮಾಡಲು ಮತ್ತು ಸಾಮಾನ್ಯ ಮುಸ್ಲಿಮರಲ್ಲಿ ನೀತಿ ಭ್ರಷ್ಟತೆಯನ್ನು ಉಳಿಸಲು ಕಾಂಗ್ರೆಸ್ ರಾಜಕಾರಣಿಗಳು ನಡೆಸುತ್ತಿರುವ ಅಪಾಯಕಾರಿ ಓಲೈಕೆಯ ಆಟ ಎಂದು ನೀತು ಗರ್ಗ್ ಎಂಬುವವರು ಹರಿಹಾಯ್ದಿದ್ದಾರೆ.

English summary
Madhya Pradesh Congress leader Kamal Nath reacted to his controversial statement as there is no Rajniti in Videos and Whatsapp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X