ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರ ವೋಟುಗಳಿಂದ ಮಾತ್ರ ಕಾಂಗ್ರೆಸ್‌ಗೆ ಜಯ: ವಿವಾದ ಸೃಷ್ಟಿಸಿದ ಕಮಲ್ ನಾಥ್

|
Google Oneindia Kannada News

ಭೋಪಾಲ್, ನವೆಂಬರ್ 21: ಮಧ್ಯಪ್ರದೇಶದಲ್ಲಿ ಮತದಾರರನ್ನು ಸೆಳೆಯಲು 'ಮುಸ್ಲಿಂ ಕಾರ್ಡ್' ಬಳಸಬೇಕು ಎಂದು ಗೋಪ್ಯ ಸಭೆಯಲ್ಲಿ ಮುಖಂಡ ಕಮಲ್ ನಾಥ್ ಪ್ರತಿಪಾದನೆ ಮಾಡಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಇಂದೋರ್‌ನಲ್ಲಿ ಖಾಸಗಿ ಕೂಟದ ಸಂದರ್ಭದ ಸಭೆಯಲ್ಲಿ ಕಮಲ್ ನಾಥ್ ಹಿಂದೂಗಳಿಗೆ ಬೆದರಿಕೆ ಒಡ್ಡುವ ಮತ್ತು ಮುಸ್ಲಿಮ್ ಮತದಾರರು ಕಾಂಗ್ರೆಸ್‌ಗೆ ಮತ ಹಾಕುವಂತೆ ಬೇಡಿಕೆ ಇರಿಸುವ ವಿಡಿಯೋವನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಬಿಡುಗಡೆ ಮಾಡಿದ್ದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಕೈಚಾಚಿದ ಎಸ್ಪಿಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಕೈಚಾಚಿದ ಎಸ್ಪಿ

ಮುಸ್ಲಿಮರ ವೋಟುಗಳಿಂದ ಮಾತ್ರವೇ ಕಾಂಗ್ರೆಸ್ ಗೆಲ್ಲಲು ಸಾಧ್ಯ ಎಂದು ಕಾಂಗ್ರೆಸ್ ನಾಯಕ ಕಮಲ್ ನಾಥ್ ವಿವಾದಾತ್ಮಕ ಹೇಳಿಕೆ ನೀಡಿರುವ ವಿಡಿಯೋ ಬಹಿರಂಗವಾಗಿದೆ.

ಮಧ್ಯಪ್ರದೇಶದಲ್ಲಿ ಜಿದ್ದಾಜಿದ್ದಿನ ಕದನ ಏರ್ಪಟ್ಟಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಹಳ ಸಮೀಪದ ಪೈಪೋಟಿ ಇರಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಉಭಯ ಪಕ್ಷಗಳು ಹೆಚ್ಚೂ ಕಡಿಮೆ ಸಮಾನ ಸೀಟುಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಕೆಲವು ಸಮೀಕ್ಷೆಗಳು ಹೇಳಿದರೆ, ಇನ್ನು ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲಿವೆ ಎಂದು ಭವಿಷ್ಯ ನುಡಿದಿವೆ.

ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ: ವಿಡಿಯೋ ವೈರಲ್ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ: ವಿಡಿಯೋ ವೈರಲ್

ಹೀಗಾಗಿ ಪಂಚರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶದ ಚುನಾವಣೆ ಬಹಳ ಕುತೂಹಲ ಕೆರಳಿಸಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅದಕ್ಕೆ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಮುಖ್ಯವಾಗಿದೆ. ಆದರೆ, ಕಮಲ್ ನಾಥ್ ಅವರ ವಿವಾದಾತ್ಮಕ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ.

ಕಮಲ್ ನಾಥ್ ಗೋಪ್ಯ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಮತ್ತು ಮುಸ್ಲಿಂ ಸಮುದಾಯದ ಮುಖಂಡರಿಗೆ ಮತದಾರರನ್ನು ಸೆಳೆಯುವಂತೆ ಹೇಳಿದ ವಿಡಿಯೋ ಲಭ್ಯವಾಗಿದೆ ಎಂದು ರಿಪಬ್ಲಿಕ್ ಟಿವಿ ಹೇಳಿಕೊಂಡಿದೆ.

ಶೇ 90ರಷ್ಟು ಮತ ಬಾರದಿದ್ದರೆ ಸೋಲು

ಶೇ 90ರಷ್ಟು ಮತ ಬಾರದಿದ್ದರೆ ಸೋಲು

ನಾವು ಮುಸ್ಲಿಂ ಸಮುದಾಯದ ಶೇ 90ರಷ್ಟು ಮತಗಳನ್ನು ಪಡೆದುಕೊಳ್ಳದೆ ಹೋದರೆ ಭಾರಿ ಅಂತರದ ಸೋಲು ಅನುಭವಿಸುತ್ತೇವೆ. ನಮಗೆ ಸಂಖ್ಯಾಬಲವಿದೆ. ಮುಸ್ಲಿಮರ ವೋಟುಗಳು ಎಲ್ಲಿವೆ ಎನ್ನುವುದು ನಿಮಗೆ ಗೊತ್ತು. ಆ ಮತಗಳು ಚಲಾವಣೆಯಾಗುತ್ತವೆ ಎಂಬುದನ್ನು ನೀವು ನೋಡಿಕೊಳ್ಳಬೇಕು. ನಮಗೆ ಕಡಿಮೆ ಮತಗಳು ದೊರೆತರೆ ಅದಕ್ಕೆ ಕಾರಣಗಳಿರುತ್ತವೆ. ನೀವು ಆ ಕಾರಣಗಳನ್ನು ಭೇದಿಸಬೇಕು ಎಂದು ಕಮಲ್ ನಾಥ್ ಹೇಳಿದ್ದಾರೆ.

ಹಿಂದೂವಿಗೆ ಮತ ಹಾಕಿ ಎನ್ನುತ್ತಾರೆ

ಹಿಂದೂವಿಗೆ ಮತ ಹಾಕಿ ಎನ್ನುತ್ತಾರೆ

ನಾನು ಚಿಂದ್ವಾರದ ಬಗ್ಗೆ ಮಾತನಾಡಿದಾಗ ಜನರು ತಾವಾಗಿಯೇ ಬಂದು ಆರೆಸ್ಸೆಸ್‌ನೊಂದಿಗೆ ನಾಗಪುರದ ನಂಟಿನ ಬಗ್ಗೆ ಹೇಳುತ್ತಾರೆ. ಅಲ್ಲಿ ಅವರಿಗೆ ಪ್ರಚಾರ ಬಹಳ ಸುಲಭವಾಗಿದೆ- ಬೆಳಿಗ್ಗೆ ಬಂದು ರಾತ್ರಿ ಹೋಗುತ್ತಾರೆ. ಅವರಲ್ಲಿ ಒಂದೇ ಒಂದು ಘೋಷವಾಕ್ಯವಿದೆ. ನೀವು ಹಿಂದೂವಿಗೆ ಮತ ಹಾಕುವುದಾದರೆ ಹಿಂದೂ ಹುಲಿ ಮೋದಿ ಅವರಿಗೆ ಮತ ಹಾಕಿ ಎನ್ನುತ್ತಾರೆ. ನೀವು ಮುಸ್ಲಿಮರಿಗೆ ಮತ ಹಾಕುವುದಾದರೆ ಕಾಂಗ್ರೆಸ್‌ಗೆ ಮತ ಹಾಕಿ.

'ನಮಗೆ ಎರಡು ಹಿಂದುಸ್ಥಾನ ಬೇಕಿಲ್ಲ', ರಾಹುಲ್ ಗಾಂಧಿ ಗುಡುಗು!'ನಮಗೆ ಎರಡು ಹಿಂದುಸ್ಥಾನ ಬೇಕಿಲ್ಲ', ರಾಹುಲ್ ಗಾಂಧಿ ಗುಡುಗು!

ಆರೆಸ್ಸೆಸ್-ಬಿಜೆಪಿಗೆ ಬೆದರಿಕೆ

ಆರೆಸ್ಸೆಸ್-ಬಿಜೆಪಿಗೆ ಬೆದರಿಕೆ

ಅದರಲ್ಲಿ ಎರಡು ಸಾಲುಗಳ ಹೊರತು ಬೇರೇನನ್ನೂ ಕಲಿಸುವುದಿಲ್ಲ. ಇದೇ ಅವರ ಕಾರ್ಯತಂತ್ರ. ಅವರು ಇದನ್ನು ಪದೇ ಪದೇ ಹೇಳಿ ನಿಮಗೆ ಅರ್ಥಮಾಡಿಸಲು ಪ್ರಯತ್ನಿಸುವುದರಿಂದ ನೀವು ಜಾಗ್ರತರಾಗಿ ಇರಬೇಕು. ನಾವು ಈ ವಿಚಾರವನ್ನು ನೋಡಿಕೊಳ್ಳುತ್ತೇವೆ. ಆದರೆ, ನೀವು ಮತದಾನ ಮಾಡುವ ದಿನದವರೆಗೂ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಬಳಿಕ ಅವರನ್ನು ನೋಡಿಕೊಳ್ಳುತ್ತೇವೆ ಎಂದು ಕಮಲ್ ನಾಥ್ ಆರೆಸ್ಸೆಸ್ ಮತ್ತು ಬಿಜೆಪಿಗೆ ಬೆದರಿಕೆ ಹಾಕಿದ್ದಾರೆ.

ಮಧ್ಯಪ್ರದೇಶ: ಚುನಾವಣೆ ಗೆಲ್ಲಲು ಆರೆಸ್ಸೆಸ್ ಮೊರೆಹೋದ ಬಿಜೆಪಿ?ಮಧ್ಯಪ್ರದೇಶ: ಚುನಾವಣೆ ಗೆಲ್ಲಲು ಆರೆಸ್ಸೆಸ್ ಮೊರೆಹೋದ ಬಿಜೆಪಿ?

ಕಳೆದ ಬಾರಿ ಏಕೆ ಮತ ಹಾಕಲಿಲ್ಲ?

ಕಳೆದ ಬಾರಿ ಏಕೆ ಮತ ಹಾಕಲಿಲ್ಲ?

ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದ್ದ ಕಮಲ್ ನಾಥ್, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಸಾಕಷ್ಟು ಸಂಖ್ಯೆಯಲ್ಲಿ ಏಕೆ ಬಂದು ಮತಚಲಾಯಿಸಲಿಲ್ಲ ಎಂದು ಅವರನ್ನು ಪ್ರಶ್ನಿಸಿದ್ದರು. ಇದರಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ಮತದಾರರ ಸಂಖ್ಯೆಯ ಕುರಿತು ಆಳವಾದ ವಿಶ್ಲೇಷಣೆ ನಡೆಸಿದೆ. ಮುಸ್ಲಿಂ ಸಮುದಾಯದವರನ್ನು ಕರೆದು ತಂದು ಮತಚಲಾಯಿಸದೆ ಇರುವುದಕ್ಕೆ ಕಾರಣವಾದ ಸಮಸ್ಯೆಗಳು ಏನೆಂದು ತಿಳಿಯುವಂತೆ ಮುಖಂಡರಿಗೆ ಸಲಹೆ ನೀಡಿದ್ದಾರೆ.

ರಾಹುಲ್ ಗಾಂಧಿಯದು 'ಫ್ಯಾನ್ಸಿ ಡ್ರೆಸ್ ಹಿಂದುತ್ವ': ಬಿಜೆಪಿ ಲೇವಡಿರಾಹುಲ್ ಗಾಂಧಿಯದು 'ಫ್ಯಾನ್ಸಿ ಡ್ರೆಸ್ ಹಿಂದುತ್ವ': ಬಿಜೆಪಿ ಲೇವಡಿ

ನೀತಿ ಸಂಹಿತೆಯೊಳಗೆ ಎಲ್ಲವನ್ನೂ ಮುಗಿಸಿ

ನೀತಿ ಸಂಹಿತೆಯೊಳಗೆ ಎಲ್ಲವನ್ನೂ ಮುಗಿಸಿ

ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದರೆ ಶೇ 80ರಷ್ಟು ಮುಸ್ಲಿಮರ ಮತಗಳು ಬಂದರೂ ಸಾಲುವುದಿಲ್ಲ. ಶೇ 90ರಷ್ಟು ಮತದಾನ ಮಾತ್ರ ತಮ್ಮನ್ನು ಉಳಿಸಲು ಸಾಧ್ಯ. ಇದನ್ನು ನೆರವೇರಿಸಲು ಮುಖಂಡರು ತಮ್ಮಿಂದ ಸಾಧ್ಯವಾದ ಎಲ್ಲವನ್ನೂ ಮಾಡಬೇಕು. ಮತಗಟ್ಟೆಯಿಂದ ಮತಗಟ್ಟಗೆ ತೆರಳಿ ಮತದಾರರನ್ನು ಕಂಡುಕೊಳ್ಳಿ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಇದೆಲ್ಲವೂ ನಡೆಯಬೇಕು ಎಂಬುದನ್ನೂ ಅವರು ಒತ್ತಿ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.

English summary
Madhya Pradesh Congress leader Kamal Nath in a controversial video found asking muslim leaders to vote for congress. Getting 90% Muslim vote can only help to save us, he told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X