ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾನು ರಾಹುಲ್ ಗಾಂಧಿ; ಆದರೆ ಕಾಂಗ್ರೆಸ್ ನಾಯಕನಲ್ಲ'!: ವ್ಯಕ್ತಿಯೊಬ್ಬನ ಸಂಕಟ

|
Google Oneindia Kannada News

ಇಂದೋರ್, ಜುಲೈ 31: ರಾಹುಲ್ ಗಾಂಧಿ ಸೋತು ಬಸವಳಿದಿದ್ದಾರೆ. ಅಷ್ಟೆಲ್ಲಾ ಓಡಾಡಿ, ತಮ್ಮ ಶಕ್ತಿಮೀರಿ ಪ್ರಯತ್ನಪಟ್ಟರೂ ಗೆಲುವು ದೊರಕಿಲ್ಲ. ಅವರಿಗೆ ತಮ್ಮ ಹೆಸರೇ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ತಮ್ಮ ಹೆಸರಿನಲ್ಲಿ ಸಿಮ್ ತೆಗೆದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸಾಲ ಕೇಳಲು ಹೋದರೆ ಬ್ಯಾಂಕ್‌ಗಳಲ್ಲಿ ಇವರ ಹೆಸರು ಕೇಳಿದಾಕ್ಷಣ 'ಸಾಧ್ಯವೇ ಇಲ್ಲ' ಎಂದು ಹೇಳಿ ಹೊರಕಳಿಸುತ್ತಿದ್ದಾರೆ!

ಅರೆ! ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿದ್ದ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಯಲ್ಲಿ ಹೋರಾಡಿ ಸೋತು ಹೈರಾಣಾಗಿದ್ದು ನಿಜ. ಆದರೆ, ಅವರೇಕೆ ಸಾಲ ಪಡೆಯಲು ಬ್ಯಾಂಕ್‌ಗೆ ಹೋಗುತ್ತಾರೆ? ಅಲ್ಲದೆ, ಸಾಲ ಪಡೆಯುವ ದುರ್ಗತಿ ಅವರಿಗೇಕೆ ಬಂತು? ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡುತ್ತಿರಬಹುದು. ಏಕೆಂದರೆ, ಈ ರಾಹುಲ್ ಗಾಂಧಿ, 'ಆ' ರಾಹುಲ್ ಗಾಂಧಿಯಲ್ಲ! ಒಂದರ್ಥದಲ್ಲಿ ಅವರು ಗಾಂಧಿಯಲ್ಲ. ಹಾಗಿದ್ದೂ ಹೆಸರಿನ ಮುಂದೆ ಪ್ರೀತಿ ಮತ್ತು ಹೆಮ್ಮೆಯಿಂದ ಅಂಟಿಸಿಕೊಂಡ 'ಗಾಂಧಿ' ಎಂಬ ಅಡ್ಡಹೆಸರು ತಮ್ಮನ್ನು ಈ ಪಾಟಿ ಜೀವ ತಿನ್ನಲಿದೆ ಎನ್ನುವುದು ಅವರಿಗೂ ಗೊತ್ತಿರಲಿಲ್ಲ.

ಬಂಡೀಪುರ ರಾತ್ರಿ ಸಂಚಾರದ ಮೇಲೆ ಮತ್ತೆ ರಾಹುಲ್ ಗಾಂಧಿ ಕಣ್ಣು ಬಂಡೀಪುರ ರಾತ್ರಿ ಸಂಚಾರದ ಮೇಲೆ ಮತ್ತೆ ರಾಹುಲ್ ಗಾಂಧಿ ಕಣ್ಣು

ಸೋನಿಯಾ ಗಾಂಧಿ ಅವರ ಮಗ ರಾಹುಲ್ ಗಾಂಧಿ ಎಲ್ಲರಿಗೂ ಚಿರಪರಿಚಿತ. ಆದರೆ, ಮಧ್ಯಪ್ರದೇಶದಲ್ಲೊಬ್ಬರು ರಾಹುಲ್ ಗಾಂಧಿ ಇದ್ದಾರೆ. ಇವರು ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲ. ಆದರೆ, ಈಗ ಎಲ್ಲೆಡೆ ಜನಪ್ರಿಯತೆ ಪಡೆಯುತ್ತಿದ್ದಾರೆ. ಅದು ತಮ್ಮ ಹೆಸರೇ ತಮಗೆ ಮುಳುವಾಗಿ ಪರಿಣಮಿಸುತ್ತಿರುವ ಸಂಕಟದ ಕಾರಣದಿಂದ. ರಾಹುಲ್ ಗಾಂಧಿ ಎಂಬ ಹೆಸರಿನಿಂದ ಅವರು ಪಡುತ್ತಿರುವ ಪಡಿಪಾಟಲು ಒಂದೆರಡಲ್ಲ.

ಮುಳ್ಳಾದ 'ರಾಹುಲ್ ಗಾಂಧಿ'

ಮುಳ್ಳಾದ 'ರಾಹುಲ್ ಗಾಂಧಿ'

ಮಧ್ಯಪ್ರದೇಶದ ಇಂದೋರ್‌ನ ಅಖಂಡ ನಗರದ ನಿವಾಸಿ, ಜವಳಿ ವ್ಯಾಪಾರಿಯಾಗಿರುವ ರಾಹುಲ್ ಗಾಂಧಿ ಎಂಬ ಯುವಕ, ತಮ್ಮ ಹೆಸರಿನ ಕಾರಣಕ್ಕೆ 'ನಕಲಿ ವ್ಯಕ್ತಿ' ಎಂದು ಜನರು ಕರೆಯುತ್ತಿರುವುದರಿಂದ ದೈನಂದಿನ ಜೀವನ ನಡೆಸಲು ಎಷ್ಟೆಲ್ಲ ಸವಾಲುಗಳನ್ನು, ಕಷ್ಟ ಕೋಟಲೆಗಳನ್ನು ಎದುರಿಸುವಂತಾಗಿದೆ ಎಂಬುದನ್ನು ವಿವರಿಸಿದ್ದಾರೆ. ರಾಹುಲ್ ಗಾಂಧಿ ಎಂಬ ಹೆಸರು ಅವರ ಪಾಲಿಗೆ ಹೆಮ್ಮೆ ಹಾಗೂ ಖುಷಿ ನೀಡುವ ಸಂಗತಿಯಾಗುವ ಬದಲು ಅವರ ಬದುಕಿಗೆ ಮುಳ್ಳಾಗಿ ಪರಿಣಮಿಸುತ್ತಿದೆ.

ಮೈತ್ರಿ ಸರಕಾರ ಬೀಳಲು ಸಿದ್ದರಾಮಯ್ಯ ಕಾರಣವೆಂದರೆ ರಾಹುಲ್ ಗಾಂಧಿ?ಮೈತ್ರಿ ಸರಕಾರ ಬೀಳಲು ಸಿದ್ದರಾಮಯ್ಯ ಕಾರಣವೆಂದರೆ ರಾಹುಲ್ ಗಾಂಧಿ?

ಅಪ್ಪನಿಗೆ ಪ್ರಿಯವಾದ 'ಗಾಂಧಿ'

ಅಪ್ಪನಿಗೆ ಪ್ರಿಯವಾದ 'ಗಾಂಧಿ'

''ನನ್ನ ತಂದೆ ಬಿಎಸ್‌ಎಫ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಉತ್ತಮ ನಡತೆಯನ್ನು ಮೆಚ್ಚಿಕೊಂಡಿದ್ದ ಅಧಿಕಾರಿಗಳು ಅವರಿಗೆ 'ಗಾಂಧಿ' ಎಂಬ ಅಡ್ಡ ಹೆಸರು ಕೊಟ್ಟಿದ್ದರು. ನಾನು ಹುಟ್ಟಿದಾಗ ನನ್ನ ತಂದೆ ನನಗೆ ರಾಹುಲ್ ಎಂದು ಹೆಸರಿಟ್ಟರು. 'ಗಾಂಧಿ' ಎಂಬ ಸರ್‌ನೇಮ್‌ ಬಗ್ಗೆ ವಿಶೇಷ ಅಪ್ಯಾಯತೆ ಬೆಳೆಸಿಕೊಂಡಿದ್ದ ನನ್ನ ತಂದೆ, ಕುಟುಂಬದ ಎಲ್ಲರಿಗೂ ಆ ಹೆಸರನ್ನು ಸೇರಿಸಿದರು. ಹೀಗಾಗಿ ನನ್ನ ಹೆಸರು ಸಹಜವಾಗಿಯೇ ರಾಹುಲ್ ಗಾಂಧಿ ಎಂದಾಯಿತು. ವಾಸ್ತವವಾಗಿ ನಮ್ಮ ಕುಟುಂಬದ ಸರ್‌ ನೇಮ್ ಮಾಳವೀಯ. ನನ್ನ ಹೆಸರು ರಾಹುಲ್ ಮಾಳವೀಯ ಎಂದಾಗಬೇಕಿತ್ತು. ಆದರೆ, ನನ್ನನ್ನು ಶಾಲೆಗೆ ದಾಖಲಿಸುವಾಗ ರಾಹುಲ್ ಗಾಂಧಿ ಎಂದೇ ದಾಖಲಿಸಲಾಯಿತು' ಎಂದು ಹೇಳಿದ್ದಾರೆ.

ಸಿಮ್ ಕಾರ್ಡ್, ಸಾಲ ಸಿಗುತ್ತಿಲ್ಲ

ಸಿಮ್ ಕಾರ್ಡ್, ಸಾಲ ಸಿಗುತ್ತಿಲ್ಲ

'ನನ್ನದು ನಕಲಿ ಹೆಸರು ಎಂದು ಪರಿಗಣಿಸಿ ಎಲ್ಲ ಇಲಾಖೆಗಳೂ ನನ್ನ ದಾಖಲೆಗಳನ್ನು ತಿರಸ್ಕರಿಸುತ್ತಿವೆ. ಅವರು ನನ್ನನ್ನು ತಮಾಷೆಯಾಗಿ ಆಡಿಕೊಳ್ಳುತ್ತಾರೆ. ಅವರು ನನಗೆ ಸಿಮ್ ಕಾರ್ಡ್, ಬಿಲ್, ಡ್ರೈವಿಂಗ್ ಲೈಸೆನ್ಸ್, ಸಾಲ ಅಥವಾ ಇತರೆ ಯಾವುದೇ ಅಗತ್ಯ ದಾಖಲೆಗಳನ್ನು ನನ್ನ ಹೆಸರಿಗೆ ನೀಡುತ್ತಿಲ್ಲ. ಅಪರಿಚಿತ ವ್ಯಕ್ತಿಗಳಿಗೆ ಕರೆ ಮಾಡಿ ನನ್ನ ಪರಿಚಯ ಹೇಳಿಕೊಂಡರೆ ಇದು ನಕಲಿ ಕರೆ ಎಂದು ಹೇಳಿ ನಗುತ್ತಾರೆ' ಎಂದು ನೋವು ತೋಡಿಕೊಂಡಿದ್ದಾರೆ.

ರಾಹುಲ್ ನಮ್ಮ ಕ್ಯಾಪ್ಟನ್: ನಂಟಿಗೆ ತೇಪೆ ಹಚ್ಚಲು ಮುಂದಾದ ಗೆಹ್ಲೋಟ್ ರಾಹುಲ್ ನಮ್ಮ ಕ್ಯಾಪ್ಟನ್: ನಂಟಿಗೆ ತೇಪೆ ಹಚ್ಚಲು ಮುಂದಾದ ಗೆಹ್ಲೋಟ್

ಹೆಸರು ಬದಲಿಸಲು ಚಿಂತನೆ

ಹೆಸರು ಬದಲಿಸಲು ಚಿಂತನೆ

ಅವರ ಹೆಸರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹೋಲಿಸಿ ಅಣಕಿಸಿದವರಿದ್ದಾರೆ. ಅವರ ಸ್ನೇಹಿತರ ವಲಯದಲ್ಲಿ ಅವರು ತಮಾಷೆಯ ವಸ್ತುವಾಗಿದ್ದಾರೆ. ಮಾತ್ರವಲ್ಲ, ರಾಹುಲ್ ಗಾಂಧಿ ಅವರ ಹೆಸರು ಹೇಳಿಕೊಂಡು ಮೋಸ ಮಾಡುತ್ತಿದ್ದಾನೆ ಎಂದು ಜನರು ನಿಂದಿಸಿದ್ದಾರೆ.

'ಈ ಎಲ್ಲ ನೋವಿನ ಅನುಭವಗಳಿಂದ ನಾನು ಸಾಕಷ್ಟು ನೊಂದಿದ್ದೇನೆ. ಕಾನೂನು ಪ್ರಕ್ರಿಯೆಯ ಮೂಲಕ ನನ್ನ ಸರ್‌ನೇಮ್‌ಅನ್ನು ಬದಲಿಸಿಕೊಳ್ಳಲು ಚಿಂತಿಸಿದ್ದೇನೆ. ಗಾಂಧಿ ಎಂಬ ಅಡ್ಡ ಹೆಸರನ್ನು ಬದಲಿಸಿ ಮಾಳವೀಯ ಎಂಬ ಹೆಸರನ್ನು ಸೇರಿಸಿಕೊಳ್ಳಲು ಸರ್ಕಾರದ ನೆರವು ಬಯಸುತ್ತಿದ್ದೇನೆ' ಎಂದು ಹೇಳಿದ್ದಾರೆ.

English summary
Rahul, A man in Madhya Pradesh's Indore facing difficulties due to his surname Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X