ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕರ ಮೇಲೆ ಗೋ ತೆರಿಗೆ ವಿಧಿಸಲು ಮುಂದಾದ ಮಧ್ಯಪ್ರದೇಶ ಸರ್ಕಾರ

|
Google Oneindia Kannada News

ಭೋಪಾಲ್, ನವೆಂಬರ್ 23: ಮಧ್ಯಪ್ರದೇಶ ಸರ್ಕಾರವು ಸಾರ್ವಜನಿಕರ ಮೇಲೆ ಗೋ ತೆರಿಗೆಯನ್ನು ವಿಧಿಸಲು ಮುಂದಾಗಿದೆ.

ಗೋ ಕಲ್ಯಾಣ ಚಟುವಟಿಕೆಗಳಿಗೆ ಹೆಚ್ಚುವರಿ ಹಣ ಸಂಗ್ರಹಿಸಲು ಮುಂದಾಗಿರುವ ಮಧ್ಯಪ್ರದೇಶ ಸರ್ಕಾರ ಗೋ ಸೇವಾ ಕರ್ (ಗೋ ತೆರಿಗೆ)ವಿಧಿಸಲು ಚಿಂತನೆ ನಡೆಸಿದೆ.

ಮಧ್ಯಪ್ರದೇಶದಲ್ಲಿ 'ಗೋವು ಸಚಿವಾಲಯ' ಅಸ್ತಿತ್ವಕ್ಕೆ: ಮುಖ್ಯಮಂತ್ರಿ ಘೋಷಣೆಮಧ್ಯಪ್ರದೇಶದಲ್ಲಿ 'ಗೋವು ಸಚಿವಾಲಯ' ಅಸ್ತಿತ್ವಕ್ಕೆ: ಮುಖ್ಯಮಂತ್ರಿ ಘೋಷಣೆ

ಕಂದಾಯ, ಅರಣ್ಯ, ವಸತಿ,ರೈತರ ಕಲ್ಯಾಣ, ಪಂಚಾಯತ್ ಹಾಗೂ ಗ್ರಾಮೀಣಾಭಿವೃದ್ಧಿ, ಪಶು ಸಂಗೋಪನೆ ಹಾಗೂ ಸಾಮಾಜಿಕ ನ್ಯಾಯದ ಖಾತೆಗಳನ್ನು ಹೊಂದಿರುವ ಆರು ಸಂಪುಟ ಸಚಿವರನ್ನು ಒಳಗೊಂಡ ಸಚಿವರ ಸಮಿತಿಯನ್ನು ರಚಿಸಲಾಗಿದೆ.

Madhya Pradesh Govt Wants To Levy Gauseva Tax To Raise Funds For Cow Welfare Schemes

ಸಾಕಷ್ಟು ಹಣ ಸಂಗ್ರಹಿಸುವ ಜತೆಗೆ ಗೋ ಸಂರಕ್ಷಣೆಯ ಪವಿತ್ರ ಕಾರ್ಯದಲ್ಲಿ ಜನತೆ ಪಾಲ್ಗೊಳ್ಳುವುದನ್ನು ಸೆಸ್ ಖಚಿತಪಡಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಹಸುವಿನ ರಕ್ಷಣೆ ಹಾಗೂ ಸಂರಕ್ಷಣೆಗಾಗಿ ರಾಜ್ಯಕ್ಕೆ ಹಣದ ಅಗತ್ಯವಿರುವುದರಿಂದ ಗೋನ ಸೆಸ್ ವಿಧಿಸುವ ಬಗ್ಗೆ ಚರ್ಚಿಸಲಾಗಿದೆ. ತೆರಿಗೆ ಮೇಲಿನ ಅತ್ಯಲ್ಪವಾಗಿದ್ದು,ಶೇ.0.1 ರಿಂದ 05ರವರೆಗೆ ಇರುತ್ತದೆ. ಹಣಕಾಸು ಇಲಾಖೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಮಧ್ಯಪ್ರದೇಶ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆ.ಎನ್ ಕನ್ಸೋತಿಯಾ ತಿಳಿಸಿದ್ದಾರೆ.

English summary
The Madhya Pradesh government is considering levying gauseva kar (cow cess) to raise additional funds for cow welfare activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X