ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಕಚೇರಿ ಶುದ್ಧೀಕರಣಕ್ಕೆ ಗೋಮೂತ್ರ ಮಿಶ್ರಿತ ಫಿನಾಯಿಲ್!

|
Google Oneindia Kannada News

ಭೋಪಾಲ್, ಫೆಬ್ರವರಿ.02: ಮಧ್ಯಪ್ರದೇಶದಲ್ಲಿ ಇರುವ ಎಲ್ಲ ಸರ್ಕಾರಿ ಕಚೇರಿಗಳನ್ನು ಹಸುವಿನ ಮೂತ್ರದಿಂದ ಸಿದ್ಧಪಡಿಸಿದ ಫಿನಾಯಿಲ್ ಬಳಸಿಕೊಂಡು ಸ್ವಚ್ಛಗೊಳಿಸಬೇಕು ಎಂದು ರಾಜ್ಯ ಸರ್ಕಾರವೇ ಆದೇಶ ಹೊರಡಿಸಿದೆ.

ರಾಜ್ಯದ ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ) ಈ ಕುರಿತು ಆದೇಶವನ್ನು ಬಿಡುಗಡೆ ಮಾಡಿದೆ. ಎಲ್ಲಾ ಸರ್ಕಾರಿ ಕಚೇರಿಗಳು ರಾಸಾಯನಿಕವಾಗಿ ತಯಾರಿಸಿದ ಫಿನಾಯಿಲ್ ಬದಲಿಗೆ ಹಸುವಿನ ಮೂತ್ರದಿಂದ ಆಗಿರುವ ಪಿನಾಯಿಲ್ ಬಳಸಬೇಕು ಎಂದು ಘೋಷಿಸಿದೆ.

ಗೋವಿನ ಸಗಣಿ, ಗೋಮೂತ್ರದಿಂದ ಗುಣಮುಖವಾಗುತ್ತದೆಯೇ ಕೊರೊನಾವೈರಸ್? ಗೋವಿನ ಸಗಣಿ, ಗೋಮೂತ್ರದಿಂದ ಗುಣಮುಖವಾಗುತ್ತದೆಯೇ ಕೊರೊನಾವೈರಸ್?

ಕಳೆದ 2020ರ ನವೆಂಬರ್ ತಿಂಗಳಿನಲ್ಲಿ ಮೊದಲ ಬಾರಿಗೆ ಮಧ್ಯಪ್ರದೇಶ ಸರ್ಕಾರವು ಹಸುಗಳ ಸಂರಕ್ಷಣೆ ಮತ್ತು ಗೋ-ಸಾಕಾಣಿಕೆ ಕುರಿತು ಪ್ರಚಾರಕ್ಕಾಗಿ ನಡೆಸಿದ "ಹಸುವಿನ ಸಂಪುಟ"ದಲ್ಲಿ ಈ ಕುರಿತು ನಿರ್ಧಾರವನ್ನು ತೆಗೆದೆುಕೊಳ್ಳಲಾಗಿತ್ತು. ಮಧ್ಯಪ್ರದೇಶ ಸರ್ಕಾರ ಹೊರಡಿಸಿರುವ ಆದೇಶಕ್ಕೆ ನೆಟ್ಟಿಗರು ಹಣೆಹಣೆ ಚಚ್ಚಿಕೊಳ್ಳುತ್ತಿದ್ದಾರೆ. ಗೋ-ಮೂತ್ರದಿಂದ ಸಿದ್ಧಪಡಿಸಿದ ಸರ್ಕಾರಿ ಕಚೇರಿಗಳ ಸ್ಥಿತಿ ಹೇಗಿರುತ್ತದೆ ಎಂದು ಲೇವಡಿ ಮಾಡುತ್ತಿದ್ದಾರೆ.

Madhya Pradesh Govt Order To Clean Govt Offices With Cow Urine Phenyl Only

ಮಧ್ಯಪ್ರದೇಶ ಸರ್ಕಾರ ಹೇಳುವುದೇನು:

ಮಧ್ಯಪ್ರದೇಶದಲ್ಲಿ ಹಸುವಿನ ಮೂತ್ರವನ್ನು ಸಂಗ್ರಹಿಸಲಾಗುತ್ತದೆ. ಹಸುವಿನ ಮೂತ್ರದಿಂದ ಫಿನಾಯಿಲ್ ತಯಾರಿಸುವ ಕಾರ್ಖಾನೆಗಳನ್ನು ಸ್ಥಾಪಿಸುವುದಕ್ಕೆ ಉದ್ದೇಶಿಸಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಸಚಿವ ಪ್ರೇಮ್ ಸಿಂಗ್ ಪಟೇಲ್ ತಿಳಿಸಿದ್ದಾರೆ. ಸದ್ಯದ ಮಟ್ಟಿಗೆ ನಾವು ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡುತ್ತಿದ್ದೇವೆ. ಇದರಿಂದ ಹಾಲು ಕರೆಯದ ಹಸುಗಳನ್ನು ಕೂಡಾ ಜನರು ತಿರಸ್ಕರಿಸುವಂತಿಲ್ಲ. ಹೀಗಾಗಿ ರಾಜ್ಯದಲ್ಲಿನ ಹಸುಗಳ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.

English summary
Madhya Pradesh Govt Order To Clean Govt Offices With Cow Urine Phenyl Only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X