• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಧ್ಯಪ್ರದೇಶ ರಾಜ್ಯಪಾಲ ಲಾಲ್‌ಜಿ ಟಂಡನ್‌ ನಿಧನ

|

ಭೋಪಾಲ್, ಜುಲೈ 21 : ಮಧ್ಯಪ್ರದೇಶದ ರಾಜ್ಯಪಾಲರಾದ ಲಾಲ್‌ಜಿ ಟಂಡನ್‌ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜೂನ್ ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಮಂಗಳವಾರ ಬೆಳಗ್ಗೆ ಲಾಲ್‌ಜಿ ಟಂಡನ್ (85) ನಿಧನ ಹೊಂದಿದ್ದಾರೆ. ಟ್ವೀಟರ್‌ನಲ್ಲಿ ಈ ಕುರಿತು ಅವರ ಪುತ್ರ ಅಶುತೋಷ್ ಟಂಡನ್ ಮಾಹಿತಿ ನೀಡಿದ್ದಾರೆ.

ಮೇಲುಕೋಟೆಗೆ ಹರಕೆ ತೀರಿಸಲು ಬಂದ ಮಧ್ಯಪ್ರದೇಶ ಸಿಎಂ

ಉಸಿರಾಟದ ತೊಂದರೆ, ಜ್ವರ ಮತ್ತು ಮೂತ್ರಕೋಶದ ತೊಂದೆಯ ಕಾರಣದಿಂದಾಗಿ ಲಾಲ್‌ಜಿ ಟಂಡನ್‌ ಅವರನ್ನು ಜೂನ್ 11ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಸಣ್ಣ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿತ್ತು. ಆದರೆ, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರಲಿಲ್ಲ.

ಮಧ್ಯಪ್ರದೇಶ ರಾಜ್ಯಪಾಲ ಲಾಲ್‌ ಜಿ ಟಂಡನ್ ಸ್ಥಿತಿ ಚಿಂತಾಜನಕ

ಲಾಲ್‌ಜಿ ಟಂಡನ್ ಅನಾರೋಗ್ಯದ ಹಿನ್ನಲೆಯಲ್ಲಿ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಮಧ್ಯಪ್ರದೇಶದ ಉಸ್ತುವಾರಿ ರಾಜ್ಯಪಾಲರಾಗಿದ್ದರು. ಎರಡು ವಾರದ ಹಿಂದೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನೂತನ ಸಚಿವರಿಗೆ ಅವರೇ ಪ್ರಮಾಣ ವಚನ ಬೋಧಿಸಿದ್ದರು.

ಮಧ್ಯಪ್ರದೇಶ; ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕ್ವಾರಂಟೈನ್‌

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್, ಆನಂದಿ ಬೆನ್ ಪಟೇಲ್ ಕೆಲವು ದಿನಗಳ ಹಿಂದೆ ಲಕ್ನೋದ ಆಸ್ಪತ್ರೆಗೆ ಭೇಟಿ ನೀಡಿ ಲಾಲ್‌ಜಿ ಟಂಡನ್ ಅವರ ಆರೋಗ್ಯ ವಿಚಾರಿಸಿದ್ದರು.

ಲಾಲ್‌ಜಿ ಟಂಡನ್ ಮಧ್ಯಪ್ರದೇಶದ 22ನೇ ರಾಜ್ಯಪಾಲರು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದ ಲಾಲ್‌ಜಿ ಟಂಡನ್ ಅಟಲ್ ಬಿಹಾರಿ ವಾಜಪೇಯಿ ಅವರು ಗರಡಿಯಲ್ಲಿ ಪಳಗಿದವರು.

English summary
Madhya Pradesh Governor Lalji Tandon (85) no more. Son of the Lalji Tandon Ashutosh Tandon announces his demise in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X