ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನ ಕೋಟ್ಯಂತರ ರೂ ಆಸ್ತಿಗೆ ನಾಯಿಯನ್ನು ಉತ್ತರಾಧಿಕಾರಿ ಮಾಡಿದ ಮಧ್ಯಪ್ರದೇಶ ರೈತ

|
Google Oneindia Kannada News

ಭೋಪಾಲ್, ಡಿಸೆಂಬರ್ 31: ವಯಸ್ಸಾಗುತ್ತಿದ್ದಂತೆ ತಮ್ಮ ಆಸ್ತಿಯನ್ನು ತಮ್ಮ ಮಕ್ಕಳಿಗೋ, ಪ್ರೀತಿ ಪಾತ್ರರಿಗೋ ಅಥವಾ ಒಂದು ಒಳ್ಳೆಯ ಉದ್ದೇಶಕ್ಕೋ ಬರೆದುಕೊಡುವುದು ರೂಢಿ. ಆದರೆ ಮಧ್ಯಪ್ರದೇಶದ ರೈತರೊಬ್ಬರು ತಮ್ಮ ಹೆಂಡತಿಯೊಂದಿಗೆ, ತಾವು ಸಾಕಿರುವ ನಾಯಿಗೂ ಆಸ್ತಿಯನ್ನು ಬರೆದಿದ್ದಾರೆ.

ಈ ಬಗ್ಗೆ ವಿಲ್ ಮಾಡಿರುವ ಅವರು, ನನ್ನ ಹೆಂಡತಿ ಹಾಗೂ ಸಾಕು ನಾಯಿ ನನ್ನ ಸಾವಿನ ನಂತರ ನನ್ನ ಆಸ್ತಿಗೆ ಕಾನೂನುಬದ್ಧ ಉತ್ತರಾಧಿಕಾರಿಗಳು ಎಂದು ನಮೂದಿಸಿದ್ದಾರೆ.

ನಾಯಿಗೆ ಹೊಡೆದ ವಿಡಿಯೋ ವೈರಲ್; ನೌಕರನ ವಜಾ ಮಾಡಿದ ಕಂಪನಿನಾಯಿಗೆ ಹೊಡೆದ ವಿಡಿಯೋ ವೈರಲ್; ನೌಕರನ ವಜಾ ಮಾಡಿದ ಕಂಪನಿ

ಮಧ್ಯಪ್ರದೇಶದ ಚಿಂದವಾರ ಜಿಲ್ಲೆಯ 50 ವರ್ಷದ ರೈತ ಓಂನಾರಾಯಣ ವರ್ಮಾ ಈ ವಿಶೇಷ ವಿಲ್ ಮಾಡಿ ಸುದ್ದಿಯಾಗಿರುವುದು. "ನಾನು ಸತ್ತ ಬಳಿಕ ನನ್ನ ನಾಯಿಯನ್ನು ಯಾರೂ ನೋಡಿಕೊಳ್ಳುವುದಿಲ್ಲ ಎನಿಸುತ್ತಿದೆ. ಹೀಗಾಗಿ ವಿಲ್ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ. ಬಡಿವಾರ ಗ್ರಾಮದ ಓಂನಾರಾಯಣ ವರ್ಮಾ ವಾರದ ಹಿಂದಷ್ಟೇ ಈ ವಿಲ್ ಮಾಡಿದ್ದು, ಇದೇ ನನ್ನ ಮೊದಲ ಹಾಗೂ ಕೊನೇ ವಿಲ್ ಎಂದಿದ್ದಾರೆ.

Madhya pradesh Farmer Made His Pet Dog Legal Heir After His Death

ಪತ್ನಿ ಚಂಪಾಬಾಯಿ (47) ಹಾಗೂ 11 ತಿಂಗಳಿನ ನಾಯಿ ಜಾಕಿಯನ್ನು ಆಸ್ತಿ ಹಕ್ಕುದಾರರನ್ನಾಗಿ ವಿಲ್ ಮಾಡಿದ್ದು, "ನನ್ನ ಹೆಂಡತಿ ಚಂಪಾಬಾಯಿ ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ. ಜಾಕಿ ಕೂಡ ನನ್ನ ಜೊತೆ ಇದೆ. ಇಬ್ಬರನ್ನೂ ನಾನು ತುಂಬಾ ಪ್ರೀತಿಸುತ್ತೇನೆ. ಈಗ ನನ್ನ ಆರೋಗ್ಯಕ್ಕೆ ಏನೂ ಆಗಿಲ್ಲ. ಆದರೆ ನನ್ನ ಸಾವಿನ ನಂತರ ನನ್ನ ಮುದ್ದಿನ ನಾಯಿ ಅನಾಥವಾಗುತ್ತದೆ ಎನಿಸುತ್ತಿದೆ. ಆದ್ದರಿಂದ ಜಾಕಿಗೆ ನನ್ನ ಆಸ್ತಿಯಲ್ಲೂ ಪಾಲು ಕೊಡುತ್ತಿದ್ದೇನೆ. ನನ್ನ ಸಾವಿನ ನಂತರ ಜಾಕಿಯನ್ನು ಯಾರಾದರೂ ಚೆನ್ನಾಗಿ ನೋಡಿಕೊಳ್ಳಬೇಕು. ಕೊನೆವರೆಗೂ ಇವರಿಬ್ಬರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ನನ್ನ ಕೊನೆಯ ಕಾರ್ಯಗಳನ್ನು ಇವರಿಬ್ಬರೂ ನೆರವೇರಿಸುತ್ತಾರೆ ಎಂದು ಬರೆದಿದ್ದಾರೆ.

ನನ್ನ ಸಾವಿನ ನಂತರ ಜಾಕಿ ನೋಡಿಕೊಳ್ಳುವವರು ಈ ಹಣ ಬಳಸಬಹುದು. ಜಾಕಿ ಸಾವಿನ ನಂತರ ಆ ಆಸ್ತಿಗೆ ಅವರೇ ಮಾಲೀಕರಾಗುತ್ತಾರೆ ಎಂದು ತಿಳಿಸಿದ್ದಾರೆ. ಈ ವಿಲ್ ನಲ್ಲಿ 21 ಎಕರೆ ಕೃಷಿ ಭೂಮಿ ಸೇರಿದೆ.

ಆದರೆ ಈ ವಿಲ್ ಹಿಂಪಡೆಯುವಂತೆ ಗ್ರಾಮದ ಮುಖಂಡರು ಓಂನಾರಾಯಣ್ ಗೆ ಸೂಚಿಸಿದ್ದಾರೆ. ಕುಟುಂಬದಲ್ಲಿ ಕಲಹವಾಗಿದ್ದು, ಆ ಕೋಪದಿಂದ ಈ ರೀತಿ ವಿಲ್ ಮಾಡಲಾಗಿದೆ. ಇದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಓಂನಾರಾಯಣ್ ಮಾತ್ರ ವಿಲ್ ಹಿಂಪಡೆಯುವುದಿಲ್ಲ ಎನ್ನುತ್ತಿದ್ದಾರೆ.

English summary
A 50 year old farmer in Chhindwara district of Madhya Pradesh, has declared his pet dog as his legal heir after his death,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X