ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜವಾದ ಎಕ್ಸಿಟ್ ಪೋಲ್ ಭವಿಷ್ಯ: ಮಧ್ಯಪ್ರದೇಶದಲ್ಲಿ ಅತಂತ್ರ ಸ್ಥಿತಿ

|
Google Oneindia Kannada News

ಭೋಪಾಲ್, ಡಿಸೆಂಬರ್ 11: ಕಳೆದ 15 ವರ್ಷಗಳಿಂದ ಆಡಳಿತ ನಡೆಸಿದ್ದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಇನ್ನೊಂದು ಅವಧಿಗೆ ಮುಂದುವರೆಯಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದವು. ಆದರೆ, ಮತದಾನದ ನಂತರ ಬಂದ ಎಕ್ಸಿಟ್ ಪೋಲ್ ಫಲಿತಾಂಶದ ಚಿತ್ರಣವೇ ಬೇರೆಯಾಗಿತ್ತು. ಇಂದು ಫಲಿತಾಂಶದ ಟ್ರೆಂಡಿಂಗ್ ನೋಡಿದರೆ ಎಕ್ಸಿಟ್ ಪೋಲ್ ನ ಫಲಿತಾಂಶ ನಿಜವಾಗುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿವೆ.

ಪಂಚರಾಜ್ಯ ಚುನಾವಣೆ ಫಲಿತಾಂಶ LIVE:ರೋಚಕ ಘಟ್ಟದಲ್ಲಿ ಮಧ್ಯಪ್ರದೇಶ ಫಲಿತಾಂಶಪಂಚರಾಜ್ಯ ಚುನಾವಣೆ ಫಲಿತಾಂಶ LIVE:ರೋಚಕ ಘಟ್ಟದಲ್ಲಿ ಮಧ್ಯಪ್ರದೇಶ ಫಲಿತಾಂಶ

ನವೆಂಬರ್ 28ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಶೇ 75ರಷ್ಟು ಮತದಾನದ ದಾಖಲಾಯಿತು. ಬಿಜೆಪಿ 230 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಕಾಂಗ್ರೆಸ್ 229ರಲ್ಲಿ ಸ್ಪರ್ಧಿಸಿದ್ದರೆ, ತಿಕ್ಮಾಘರ್ ಜಿಲ್ಲೆಯ ಜತಾರಾ ಸೀಟನ್ನು ಶರದ್ ಯಾದವ್ ನೇತೃತ್ವದ ಲೋಕ್ ತಾಂತ್ರಿಕ್ ಜನತಾ ದಳ(ಎಲ್ ಜೆಡಿ)ಗೆ ಬಿಟ್ಟುಕೊಟ್ಟಿತ್ತು. ಎಕ್ಸಿಟ್ ಪೋಲ್ ಗಳ ಸರಾಸರಿಯಂತೆ ಯಾವ ಪಕ್ಷ ಕೂಡಾ ಅಧಿಕಾರಕ್ಕೆ ಹತ್ತಿರವಾಗುವುದಿಲ್ಲ, ಸರ್ಕಾರ ರಚಿಸುವಲ್ಲಿ ಪಕ್ಷೇತರರ ಪಾತ್ರ ಮಹತ್ವವಾಗಲಿದೆ

2018ರ ಎಕ್ಸಿಟ್ ಪೋಲ್ ಸರಾಸರಿ Poll of Polls : 230 ಸ್ಥಾನ : ಬಿಜೆಪಿ 109; ಕಾಂಗ್ರೆಸ್ 112; ಇತರೆ 09

ಎಸ್ಪಿ ಹಾಗೂ ಬಿಎಸ್ಪಿ ಬೆಂಬಲ ಅತ್ಯಗತ್ಯ

ಎಸ್ಪಿ ಹಾಗೂ ಬಿಎಸ್ಪಿ ಬೆಂಬಲ ಅತ್ಯಗತ್ಯ

ಮಧ್ಯಪ್ರದೇಶ ಚುನಾವಣೆ ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮ್ಯಾಜಿಕ್ ನಂಬರ್ ದಾಟುವುದು ಕಷ್ಟವಾಗತೊಡಗಿದೆ. 116 ಮ್ಯಾಜಿಕ್ ನಂಬರ್ ದಾಟುವ ಗುರಿಯನ್ನು ಹೊಂದಿರುವ ಈ ಎರಡು ಪಕ್ಷಗಳಿಗೆ ಪಕ್ಷೇತರರು ಹಾಗೂ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದ ಬೆಂಬಲ ಅತ್ಯಗತ್ಯ.

ಕಳೆದ ಚುನಾವಣೆಯಲ್ಲಿ ಕೇವಲ 4 ಸ್ಥಾನ ಮಾತ್ರ ಗೆದ್ದಿದ್ದ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಈ ಬಾರಿ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

2 ಗಂಟೆ ಟ್ರೆಂಡಿಂಗ್ ನಂತೆ ಬಿಜೆಪಿ 114, ಕಾಂಗ್ರೆಸ್ 106, ಬಿಎಸ್ಪಿ 5, ಇತರೆ 6

ಮಧ್ಯಪ್ರದೇಶದ ಬಲಾಬಲ

ಮಧ್ಯಪ್ರದೇಶದ ಬಲಾಬಲ

ಮಧ್ಯಪ್ರದೇಶದ 230 ಸ್ಥಾನಗಳ ವಿಧಾನಸಭೆ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116. ಕಳೆದ 15 ವರ್ಷಗಳಿಂದ ಬಿಜೆಪಿ ನೇತೃತ್ವದ ಸರ್ಕಾರವನ್ನು ಶಿವರಾಜ್ ಸಿಂಗ್ ಚೌಹಾಣ್ ಅವರು ಮುನ್ನಡೆಸುತ್ತಿದ್ದಾರೆ.

2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3. 2013ರಲ್ಲಿ ಶೇಕಡಾವಾರು ಮತ ಗಳಿಕೆ : ಬಿಜೆಪಿ ಶೇ 44.68, ಕಾಂಗ್ರೆಸ್ ಶೇ 36.38

ಮಧ್ಯಪ್ರದೇಶದಲ್ಲಿ ಬೆಟುಲ್ ಕ್ಷೇತ್ರ ಗೆದ್ದವರು ರಾಜ್ಯ ಆಳ್ತಾರೆ!ಮಧ್ಯಪ್ರದೇಶದಲ್ಲಿ ಬೆಟುಲ್ ಕ್ಷೇತ್ರ ಗೆದ್ದವರು ರಾಜ್ಯ ಆಳ್ತಾರೆ!

ಟೈಮ್ಸ್ ನೌ ಸಿಎನ್ ಎಕ್ಸ್ ವರದಿಯಲ್ಲಿ ಬಿಜೆಪಿಗೆ ಮುನ್ನಡೆ

ಟೈಮ್ಸ್ ನೌ ಸಿಎನ್ ಎಕ್ಸ್ ವರದಿಯಲ್ಲಿ ಬಿಜೆಪಿಗೆ ಮುನ್ನಡೆ

ಟೈಮ್ಸ್ ನೌ ಸಿಎನ್ ಎಕ್ಸ್ ವರದಿಯಂತೆ ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದ್ದು, ಹೊಸ ಇತಿಹಾಸ ಸ್ಥಾಪಿಸಲಿದೆ. 230 ಸ್ಥಾನಗಳ ಪೈಕಿ ಬಿಜೆಪಿ 126 ಕಾಂಗ್ರೆಸ್ 89 ಬಿಎಸ್ಪಿ 6 ಇತರೆ 9

ಆದರೆ, 2013ರ ಫಲಿತಾಂಶಕ್ಕೆ ಹೋಲಿಸಿದರೆ, ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ ಹಿಂದೆ ಬೀಳಲಿದೆ.

* ಬಿಜೆಪಿ ಶೇ 45.20(2013ರಲ್ಲಿ ಶೇ44.88) * ಕಾಂಗ್ರೆಸ್ ಶೇ 36.38 (2013ರಲ್ಲಿ 38.33) ಎಂದಿತ್ತು.

ಇತರೆ ಸಮೀಕ್ಷೆಗಳ ತುಲನೆ

ಇತರೆ ಸಮೀಕ್ಷೆಗಳ ತುಲನೆ

ಎಂಪಿ ನೇತಾ ನ್ಯೂಸ್ ಎಕ್ಸ್ ನಡೆಸಿದ ಚುನಾವಣೋತ್ತರ ಸಮೀಕ್ಷಾ ವರದಿಯಂತೆ,
ಬಿಜೆಪಿ :106
ಕಾಂಗ್ರೆಸ್: 112
ಇತರೆ : 12

***

ಎಬಿಪಿ-ಸಿಎಸ್ ಡಿಎಸ್
ಬಿಜೆಪಿ : 94
ಕಾಂಗ್ರೆಸ್ + : 126
ಬಿಎಸ್ಪಿ: 0 ಇತರೆ : 10
***
ಆಕ್ಸಿಸ್ ಮೈಇಂಡಿಯಾ
ಬಿಜೆಪಿ :111
ಕಾಂಗ್ರೆಸ್ +: 113
ಬಿಎಸ್ಪಿ :2
ಇತರೆ 4
***
ಜನ್ ಕಿ ಬಾತ್ -ರಿಪಬ್ಲಿಕ್ ಟಿವಿ ನಡೆಸಿದ ಎಕ್ಸಿಟ್ ಪೋಲ್ ಸಮೀಕ್ಷೆ ಫಲಿತಾಂಶ
ಬಿಜೆಪಿ : 118
ಕಾಂಗ್ರೆಸ್ + : 105
ಬಿಎಸ್ಪಿ : 0
ಇತರೆ : 7

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಅಖಿಲೇಶ್ ಬೆಂಬಲ, ಮಾಯಾ ನಡೆ ನಿಗೂಢಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಅಖಿಲೇಶ್ ಬೆಂಬಲ, ಮಾಯಾ ನಡೆ ನಿಗೂಢ

ಟುಡೇಸ್ ಚಾಣಕ್ಯ ಭವಿಷ್ಯ ಸುಳ್ಳಾಯ್ತು

ಟುಡೇಸ್ ಚಾಣಕ್ಯ ಭವಿಷ್ಯ ಸುಳ್ಳಾಯ್ತು

ಇಂಡಿಯಾ ಟುಡೇ ಆಕ್ಸಿಸ್
ಬಿಜೆಪಿ : 102-120
ಕಾಂಗ್ರೆಸ್ : 104-122
ಇತರೆ : 4-11
**
ರಿಪಬ್ಲಿಕ್ ಸಿ ವೋಟರ್
ಬಿಜೆಪಿ : 90-106
ಕಾಂಗ್ರೆಸ್ + : 110-126
ಬಿಎಸ್ಪಿ: 0
ಇತರೆ : 6-22

***

ಟುಡೇಸ್ ಚಾಣಕ್ಯ
ಬಿಜೆಪಿ : 103
ಕಾಂಗ್ರೆಸ್: 125
ಇತರೆ : 2
***
ನ್ಯೂಸ್ ನೇಷನ್ ಸಮೀಕ್ಷೆ
ಬಿಜೆಪಿ : 108 ರಿಂದ 112
ಕಾಂಗ್ರೆಸ್ : 105 ರಿಂದ 109
ಇತರೆ : 11 ರಿಂದ 15

English summary
The Bharatiya Janta Party and Congress have become almost neck and neck in the state as Congress is leading 108 seats whereas BJP is leading in 111 seats in the state.Magic number is 116
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X