• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಧ್ಯಪ್ರದೇಶದಲ್ಲಿ ಬೆಟುಲ್ ಕ್ಷೇತ್ರ ಗೆದ್ದವರು ರಾಜ್ಯ ಆಳ್ತಾರೆ!

|

ಭೋಪಾಲ್, ನವೆಂಬರ್ 28: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಶೇ 74ಕ್ಕೂ ಅಧಿಕ ಮತದಾನ ಕಂಡು ಬಂದಿದೆ. 231 ವಿಧಾನಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ಮತ್ತೊಮ್ಮೆ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಮುಖ್ಯಮಂತ್ರಿಯಾಗಿ ಕಾಣಲು ಬಯಸಿದೆ.

ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಬುದ್ನಿ ವಿಧಾನಸಭಾ ಕ್ಷೇತ್ರದಿಂದ ಶಿವರಾಜ್ ಸಿಂಗ್ ಅವರು ಸ್ಪರ್ಧಿಸಿದ್ದಾರೆ. ಡಿಸೆಂಬರ್ 11ರಂದು ಫಲಿತಾಂಶ ಹೊರಬೀಳಲಿದೆ.

ನಾಲ್ಕನೇ ಬಾರಿಯ ಅವಕಾಶಕ್ಕಾಗಿ ಮಧ್ಯಪ್ರದೇಶದ ಜನರ ಎದುರು ಚೌಹಾಣ್

ಆದರೆ, ಎಲ್ಲರ ಕಣ್ಣು ಈಗ ಬೆಟುಲ್ ವಿಧಾನಸಭಾ ಕ್ಷೇತ್ರದ ಮೇಲೆ ಬಿದ್ದಿದೆ. 1956ರಿಂದ ಬೆಟುಲ್ ಕ್ಷೇತ್ರದಲ್ಲಿ ಗೆದ್ದವರು ರಾಜ್ಯವನ್ನು ಆಳುತ್ತಾರೆ ಎಂಬ ಪ್ರತೀತಿಯಿದೆ. 1980ರಲ್ಲಿ ಮಾತ್ರ ಈ ಕ್ಷೇತ್ರವನ್ನು ಗೆದ್ದ ಅಭ್ಯರ್ಥಿಯು ವಿರೋಧ ಪಕ್ಷದಲ್ಲಿ ಕೂರಬೇಕಾಯಿತು.

ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿ ಹವಾ..? ಕಾಂಗ್ರೆಸ್ ಜಸ್ಟ್ ಮಿಸ್?! NDTV ವಿಶ್ಲೇಷಣೆ

1957 ರಿಂದ 1962ರ ತನಕ ಕಾಂಗ್ರೆಸ್ ಗೆಲುವು ಸಾಧಿಸಿದ್ದಲ್ಲದೆ ಆಡಳಿತ ನಡೆಸಿತ್ತು. ಸುಪ್ರೀಂಕೋರ್ಟಿನ ಜಡ್ಜ್ ಮಾರ್ಕಂಡೇಯ್ ಕಟ್ಜು ಅವರ ಅಜ್ಜ ಕೈಲಾಶ್ ನಾಥ್ ಕಟ್ಜು ಸೇರಿದಂತೆ ಮೂವರು ಸಿಎಂಗಳನ್ನು ಕಾಂಗ್ರೆಸ್ ನೀಡಿದೆ.

ಬಿಜೆಎಸ್ -ಎಸ್ ವಿಡಿ ಮೈತ್ರಿ ಸರ್ಕಾರ

ಬಿಜೆಎಸ್ -ಎಸ್ ವಿಡಿ ಮೈತ್ರಿ ಸರ್ಕಾರ

ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಮೂಲ ಸಂಸ್ಥೆ ಭಾರತೀಯ ಜನ ಸಂಘ(ಬಿಜೆಎಸ್)ದ ಅಭ್ಯರ್ಥಿ 1967ರಲ್ಲಿ ಗೆಲುವು ಸಾಧಿಸಿದ್ದರು. ಸಂಯುಕ್ತ ವಿಧಾಯಕ್ ದಳ್ (ಎಸ್ ವಿಡಿ) ಸರ್ಕಾರ ರಚನೆ ಮಾಡಿತ್ತು. ಬಿಜೆಎಸ್ ಕೂಡಾ ಎಸ್ ವಿಡಿ ಜತೆಗೂಡಿ ಮೈತ್ರಿ ಸಾಧಿಸಿತ್ತು.

ಕಾಂಗ್ರೆಸ್ ಪಕ್ಷವು 1972ರಲ್ಲಿ ಮತ್ತೊಮ್ಮೆ ಗೆದ್ದು ಸರ್ಕಾರ ರಚನೆ ಮಾಡಿತ್ತು. 1977ರಲ್ಲಿ ಇಂದಿರಾಗಾಂಧಿ ವಿರೋಧಿ ಅಲೆ ಕಂಡು ಬಂದಿತ್ತು. ಸ್ವತಂತ್ರ ಅಭ್ಯರ್ಥಿ ಮಾಧವ್ ಗೋಪಾಲ್ ನಸೇರಿ ಗೆದ್ದಿದ್ದರು. ಅವರು ಜನತಾ ಪಕ್ಷವು ಅಧಿಕಾರ ಸ್ಥಾಪನೆ ಮಾಡಿತ್ತು.

1980ರಲ್ಲಿ ಬದಲಾಗಿತ್ತು, ಅರ್ಜುನ್ ಸಿಂಗ್ ಗೆದ್ದಿತ್ರು

1980ರಲ್ಲಿ ಬದಲಾಗಿತ್ತು, ಅರ್ಜುನ್ ಸಿಂಗ್ ಗೆದ್ದಿತ್ರು

1980ರಲ್ಲಿ ಮಾತ್ರ ಬೆಟುಲ್ ನಲ್ಲಿ ಕಾಂಗ್ರೆಸ್ ಸೋಲು ಕಂಡರೂ ಲೇಟ್ ಅರ್ಜುನ್ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದರು. ಕೆಎನ್ ಕಾಟ್ಜು ಅವರ ನಂತರ ಅರ್ಜುನ್ ಸಿಂಗ್ ಮಾತ್ರ ಪೂರ್ಣಾವಧಿ ಅಧಿಕಾರ ಅನುಭವಿಸಿದರು. 1985ರಲ್ಲಿ ಅಧಿಕಾರ ಮರು ಸ್ಥಾಪಿಸಿಕೊಂಡಿತು. 1984ರ ಭೋಪಾಲ್ ಅನಿಲ ದುರಂತ ಸಂಭವಿಸಿದರೂ ಕಾಂಗ್ರೆಸ್ ಅಧಿಕಾರ ಹಿಡಿಯಿತು.

1990ರಲ್ಲಿ ಬೆಟುಲ್ ನಲ್ಲಿ ಬಿಜೆಪಿ ಗೆಲುವು ಸಾಧಿಸಿತು

1990ರಲ್ಲಿ ಬೆಟುಲ್ ನಲ್ಲಿ ಬಿಜೆಪಿ ಗೆಲುವು ಸಾಧಿಸಿತು

1990ರಲ್ಲಿ ಬೆಟುಲ್ ನಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಸುಂದರ್ ಲಾಲ್ ಪಾಟ್ವಾ ಅವರು ಮುಖ್ಯಮಂತ್ರಿಯಾದರು ಆದರೆ, 28ದಿನಗಳಲ್ಲಿ ಸರ್ಕಾರ ಮುರಿದು ಬಿದ್ದಿತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಘಟನೆ ನಂತರ 1993ರಲ್ಲಿ ಮತ್ತೆ ಚುನಾವಣೆ ನಡೆಸಲಾಯಿತು ಕಾಂಗ್ರೆಸ್ ಇಲ್ಲಿ ಗೆದ್ದು ಅಧಿಕಾರ ಹಿಡಿಯಿತು. ದಿಗ್ವಿಜಯ್ ಸಿಂಗ್ ಅವರು ಮುಖ್ಯಮಂತ್ರಿಯಾದರು. 1998ರಲ್ಲೂ ಕಾಂಗ್ರೆಸ್ ಗೆಲುವು ಕಂಡಿತು.

2003ರಿಂದ ಸತತವಾಗಿ ಬಿಜೆಪಿಗೆ ಅಧಿಕಾರ

2003ರಿಂದ ಸತತವಾಗಿ ಬಿಜೆಪಿಗೆ ಅಧಿಕಾರ

2003ರಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಶಿವರಾಜ್ ಸಿಂಗ್ ಚೌಹಾಣ್ ಅವರು ಅಧಿಕಾರಕ್ಕೆ ಬಂದರು. ಇದಾದ ಬಳಿಕ ಬಂದ ಚುನಾವಣೆಗಳಲ್ಲಿ ಪ್ರತಿ ಬಾರಿ ಹೊಸ ಅಭ್ಯರ್ಥಿಗಳನ್ನು ನಿಲ್ಲಿಸಿ ಬಿಜೆಪಿ ಗೆಲುವು ಕಂಡಿದೆ. ಈ ಬಾರಿ ಬೆಟುಲ್ ನಿಂದ ಹಾಲಿ ಶಾಸಕ ಹೇಮಂತ್ ಖಾಂಡೆಲ್ವಾಲ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ಸಿನ ನಿಲಾಯ್ ಡಾಗಾ ಅವರು ಪ್ರತಿಸ್ಪರ್ಧಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Madhya Pradesh goes to assembly polls on November 28 for all 231 seats. Chief Minister Shivraj Singh Chouhan has a daunting task of beating the strong anti-incumbency sentiments against the 15-year rule of the BJP in Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more