ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಇಲ್ಲ, ಅಂತರವೂ ಇಲ್ಲ: ಜೈನ ಮುಖಂಡನ ಸ್ವಾಗತಕ್ಕೆ ಜನವೋ ಜನ

|
Google Oneindia Kannada News

ಬೋಪಾಲ್, ಮೇ 14: ಕೊರೊನಾ ವೈರಸ್‌ಗೆ ಔಷಧಿ ಇಲ್ಲ. ಸಾಮಾಜಿಕ ಅಂತರವೇ ಬಹುದೊಡ್ಡ ಮದ್ದು ಎಂದು ಇಡೀ ವಿಶ್ವವೇ ಎಚ್ಚರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡದೇ ನೂರಾರು ಜನರು ಗುಂಪು ಸೇರಿರುವ ಘಟನೆ ವರದಿಯಾಗಿದೆ.

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಾಂಡಾ ನಗರದಲ್ಲಿ ಜೈನ ಸನ್ಯಾಸಿ ಪ್ರೇಮನ್‌ಸಾಗರ್ ಮತ್ತು ಜೈನ ಸನ್ಯಾಸಿಗಳು ಬಂದಾಗ, ಅವರನ್ನು ಸ್ವಾಗತಿಸಲು ಜನರು ಗುಂಪು ಸೇರಿದೆ. ಈ ಗುಂಪಿನಲ್ಲಿ ಯಾರೊಬ್ಬರು ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿಲ್ಲ.

24 ಗಂಟೆಯಲ್ಲಿ 3722 ಹೊಸ ಕೇಸ್ ಪತ್ತೆ, 134 ಸಾವು24 ಗಂಟೆಯಲ್ಲಿ 3722 ಹೊಸ ಕೇಸ್ ಪತ್ತೆ, 134 ಸಾವು

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಲಾಕ್‌ಡೌನ್‌ ಇದ್ದರೂ ನಗರದಲ್ಲಿ ಇಂತಹ ಘಟನೆ ಹೇಗೆ ನಡೆಯಿತು ಎಂದು ಸರ್ಕಾರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ, ಜಲ್ಲಾಡಳಿತ ಕಚೇರಿಯಿಂದ 35 ಕಿ.ಮೀ ದೂರದಲ್ಲಿ ಈ ಗುಂಪು ಸೇರಿದ್ದು ಈಗ ಟೀಕೆಗೆ ಗುರಿಯಾಗಿದೆ.

ಈ ಬಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಭೂರಿಯಾ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದು, 'ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋಗಳಿಂದ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದೆ. ಇದು ಸೆಕ್ಷನ್ 144ರ ಆದೇಶವನ್ನು ಉಲ್ಲಂಘಿಸಿದ ಪ್ರಕರಣವೆಂದು ಕಾಣುತ್ತಿದೆ. ವೀಡಿಯೋವನ್ನು ಪರಿಶೀಲಿಸಿದ ನಂತರ ಪ್ರಕರಣವನ್ನು ದಾಖಲಿಸುವಂತೆ ಬಾಂಡಾ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದಿದ್ದಾರೆ.

A Crowd Gathered To Welcome Jain Monk Pramansagar In Banda Amid Lockdowan

ಇನ್ನು ಬಾಂಡಾ ಪೊಲೀಸ್ ಠಾಣೆಯ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದು, ''ಲಾಕ್‌ಡೌನ್‌ ಉಲ್ಲಂಘನೆ ಮಾಡಿರುವ ಸುಮಾರು 400 ರಿಂದ 500 ಜನರ ಮೇಲೆ ಪ್ರಕರಣ ದಾಖಲಿಸುತ್ತೇವೆ'' ಎಂದಿದ್ದಾರೆ.

ಪ್ರಸ್ತುತ ಮಧ್ಯಪ್ರದೇಶದಲ್ಲಿ 4173 ಕೊರೊನಾ ಕೇಸ್ ದಾಖಲಾಗಿದೆ. 1937 ಪ್ರಕರಣಗಳು ಸಕ್ರಿಯವಾಗಿದ್ದು, 2004 ಜನರು ಚೇತರಿಕೆ ಕಂಡಿದ್ದಾರೆ. ಈವರೆಗೂ 232 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

English summary
Madhya Pradesh: A crowd gathered to welcome Jain monk Pramansagar in Banda, Sagar district yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X