• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೌಡ್ ಸ್ಪೀಕರ್‌ನಲ್ಲಿ 'ಶೋಲೆ' ಡೈಲಾಗ್ ಹೇಳಿ ಸಂಕಷ್ಟಕ್ಕೆ ಸಿಲುಕಿದ ಪೊಲೀಸ್: ವೈರಲ್ ವಿಡಿಯೋ

|

ಝಾಬುವಾ, ನವೆಂಬರ್ 16: ಬಾಲಿವುಡ್‌ನ ಐಕಾನಿಕ್ ಚಿತ್ರಗಳಲ್ಲಿ ಒಂದಾದ 'ಶೋಲೆ' ಸಿನಿಮಾದ ಡೈಲಾಗ್‌ಗಳನ್ನು ಹೇಳಿದ್ದ ಪೊಲೀಸ್ ಅಧಿಕಾರಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಧ್ಯಪ್ರದೇಶದ ಝಾಬುವಾ ಜಿಲ್ಲೆಯಲ್ಲಿ ಗಸ್ತು ತಿರುಗುವ ವೇಳೆ ಲೌಡ್ ಸ್ಪೀಕರ್‌ನಲ್ಲಿ ಕ್ಯಾಮೆರಾ ಎದುರು ನಿಂತು ಶೋಲೆ ಚಿತ್ರದ ಡೈಲಾಗ್ ಹೊಡೆದಿದ್ದ ಪೊಲೀಸ್‌ಗೆ ಷೋಕಾಸ್ ನೋಟಿಸ್ ನೀಡಲಾಗಿದೆ.

ಮಧ್ಯಪ್ರದೇಶದ ಝಾಬುವಾ ಜಿಲ್ಲೆಯ ಕಲ್ಯಾಣಪುರ ಪೊಲೀಸ್ ಠಾಣೆಯಲ್ಲಿ ಉಸ್ತುವಾರಿಯಾಗಿರುವ ಪೊಲೀಸ್ ಅಧಿಕಾರಿ ಕೆಎಲ್ ದಾಂಗಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಪೊಲೀಸರ ಕಿರುಕುಳ: ಚಲಿಸುವ ರೈಲಿನ ಮುಂದೆ ಹಾರಿ ಪ್ರಾಣಬಿಟ್ಟ ಕುಟುಂಬ

15 ಸೆಕೆಂಡುಗಳ ವಿಡಿಯೋದಲ್ಲಿ ದಾಂಗಿ ಅವರು, ತಮ್ಮ ಪೊಲೀಸ್ ಜೀಪ್‌ನ ಮೇಲೆ ಇರಿಸಿದ ಮೆಗಾಫೋನ್‌ನಲ್ಲಿ ಗಬ್ಬರ್ ಡೈಲಾಗ್ ಹೇಳಿದ್ದಾರೆ. ಶೋಲೆ ಚಿತ್ರದ ಜನಪ್ರಿಯ ಸಂಭಾಷಣೆಗಳಲ್ಲಿ ಒಂದಾದ 'ಸೋ ಜಾ ಬೇಟಾ ನಹಿ ತೊ ಗಬ್ಬರ್ ಆ ಜಾಯೆಗಾ' (ಮಲಗು ನನ್ನ ಮಗನೇ, ಇಲ್ಲದಿದ್ದರೆ ಗಬ್ಬರ್ ಬರುತ್ತಾನೆ) ಎಂಬ ಡೈಲಾಗ್‌ಅನ್ನು ಬದಲಿಸಿಕೊಂಡು ಹೇಳಿದ್ದಾರೆ.

'ಕಲ್ಯಾಣಪುರಕ್ಕಿಂತ 50 ಕಿಮೀ ದೂರದಲ್ಲಿಯೂ ಮಕ್ಕಳು ಅತ್ತರೆ ಅವರ ಅಮ್ಮಂದಿರು, ಅವರಿಗೆ ಮಲಗಲು ಹೇಳುತ್ತಾರೆ. ಇಲ್ಲದಿದ್ದರೆ ದಾಂಗಿ ಬರುತ್ತಾನೆ ಎನ್ನುತ್ತಾರೆ' ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡ ಅಲ್ಲಿದ್ದ ಪೊಲೀಸರು ನಸುನಗುತ್ತಾ ಸುಮ್ಮನೆ ನಿಂತಿದ್ದಾರೆ.

ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ದಾಂಗಿ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಮೇಲಧಿಕಾರಿಗಳು ಅವರಿಗೆ ಷೋಕಾಸ್ ನೋಟಿಸ್ ನೀಡಿದ್ದಾರೆ.

'ದಾಂಗಿ ಅವರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅವರಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಪ್ರಾಥಮಿಕ ತನಿಖೆಯ ಬಳಿಕ ಈ ಪ್ರಕರಣದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಹಿರಿಯ ಪೊಲೀಸ್ ಅಧಿಕಾರಿ ಆನಂದ್ ಸಿಂಗ್ ಹೇಳಿದ್ದಾರೆ.

English summary
Show-cause notice was issued to a Madhya Pradesh's Jhabua police who spotted shouting out the dialogue of Sholay on a speaker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X