• search
 • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್ ಚೌಹಾಣ್‌ಗೂ ಕೊರೊನಾ ಸೋಂಕು

|

ಭೋಪಾಲ್, ಜುಲೈ 25: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.

   ಯೋಧನ ಪತ್ನಿಗೆ ಸರ್ಕಾರಿ ಕೆಲಸ, 5 ಕೋಟಿ ದುಡ್ಡು, ಸೈಟು | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಈ ಕುರಿತು ಶಿವರಾಜ್‌ ಸಿಂಗ್ ಚೌಹಾಣ್ ಖುದ್ದಾಗಿ ಸರಣಿ ಟ್ವೀಟ್ ಮಾಡಿದ್ದಾರೆ. ಯಾರು ತಮ್ಮ ಬಳಿ ಸಂಪರ್ಕ ಹೊಂದಿದ್ದಾರೋ ಅವರೆಲ್ಲರೂ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಲು ತಿಳಿಸಿದ್ದಾರೆ.

   ನಮ್ಮನ್ನು ಯಾರು ಸಂಪರ್ಕ ಮಾಡಿದ್ದರೋ ಅವರು ಕಡ್ಡಾಯವಾಗಿ ಗೃಹ ಬಂಧನಕ್ಕೆ ಒಳಗಾಗಬೇಕು. ನಾನು ಕೂಡ ಗೃಹ ಬಂಧನಕ್ಕೊಳಗಾಗಿದ್ದೇನೆ. ರಾಜ್ಯದ ಜನತೆ ಎಚ್ಚರದಿಂದಿರುವಂತೆ ಸಲಹೆ ನೀಡಿದ್ದಾರೆ.

   ಕೊರೊನಾ ಲಕ್ಷಣಗಳು ಗೋಚರಿಸಿತ್ತು. ಬಳಿಕ ವರದಿಯಲ್ಲಿ ಪಾಸಿಟಿವ್ ಬಂದಿದೆ. ತಕ್ಷಣವೇ ಯಾರು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರೋ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ.

   ಶುಕ್ರವಾರ ಮಧ್ಯಪ್ರದೇಶದಲ್ಲಿ 736 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಭೋಪಾಲ್‌ನಲ್ಲಿ 177 ಪ್ರಕರಣಗಳು ದೃಢಪಟ್ಟಿತ್ತು. ಒಟ್ಟು 26,210 ಪ್ರಕರಣಗಳಿವೆ.

   ಒಟ್ಟು 791 ಮಂದಿ ಸಾವನ್ನಪ್ಪಿದ್ದಾರೆ. ಭೋಪಾಲ್‌ ಹಾಗೂ ಸಾಗರ್‌ನಲ್ಲಿ ಎರಡು, ಇಂದೋರ್, ಮೊರೆನಾ, ಜಬಲ್‌ಪುರ, ನೀಮುಚ್, ಹರ್ದಾ, ಸಾಟ್ನಾದಲ್ಲಿ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

   ಸಚಿವ ಆನಂದ ಸಿಂಗ್ ಕಾರು ಚಾಲಕನಿಗೆ ಕೊರೊನಾ ಸೋಂಕು

   507 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಇದುವರೆಗೆ 17,866 ಪ್ರಕರಣಗಳಿವೆ. 7553 ಪ್ರಕರಣಗಳು ಸಕ್ರಿಯವಾಗಿವೆ. ಭೋಪಾಲ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

   ಗ್ವಾಲಿಯರ್‌ನಲ್ಲಿ 63, ಇಂದೋರ್‌ನಲ್ಲಿ 99 ಪ್ರಕರಣಗಳು ದಾಖಲಾಗಿವೆ.ರಾಜ್ಯದಲ್ಲಿ 2839 ಕಂಟೈನ್ಮೆಂಟ್ ಜೋನ್‌ಗಳಿವೆ.

   English summary
   Madhya Pradesh Chief Minister Shivraj Singh Chouhan tests positive for coronavirus.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X