ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿಯೂ 'ಲವ್ ಜಿಹಾದ್' ಮಸೂದೆ ಅನುಮೋದನೆ: 10 ವರ್ಷ ಜೈಲು

|
Google Oneindia Kannada News

ಭೋಪಾಲ್, ಡಿಸೆಂಬರ್ 26: ಉತ್ತರ ಪ್ರದೇಶದ ಬಳಿಕ ಮಧ್ಯಪ್ರದೇಶ ಸಂಪುಟ ಕೂಡ ಬಲವಂತದ ಧಾರ್ಮಿಕ ಮತಾಂತರದ ತಡೆಯುವ ಮಸೂದೆಯನ್ನು ಅಂಗೀಕರಿಸಿದೆ. ಇದು ಕಾನೂನಾಗಿ ಅನುಮೋದನೆಗೊಂಡರೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂವರೆಗೆ ದಂಡ ವಿಧಿಸಬಹುದು. ಸಂಘಟನೆಗಳು ಮತ್ತು ಸಂಸ್ಥೆಗಳು ಸೇರಿದಂತೆ ಆರೋಪಿಗಳು, ಆರೋಪಿಗಳ ಸಹಚರರ ವಿರುದ್ಧ ಸಾಕ್ಷ್ಯಗಳು ದೊರೆತರೆ ಈ ಕಠಿಣ ಶಿಕ್ಷೆಗೆ ಗುರಿಯಾಗಲಿದ್ದಾರೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಂಪುಟ ಸಭೆಯ ಮುಂದೆ ಧರ್ಮ ಸ್ವಾತಂತ್ರ್ಯ ಮಸೂದೆ 2020ಅನ್ನು ಶನಿವಾರ ಪ್ರಸ್ತಾಪಿಸಲಾಯಿತು. ಅದಕ್ಕೆ ಧ್ವನಿಮತದ ಅಂಗೀಕಾರ ದೊರಕಿತು. ಈ ತಿಂಗಳ ಕೊನೆಯಲ್ಲಿ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಆಗ ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ.

ಬರ್ಥಡೇ ಪಾರ್ಟಿ ಮುಗಿಸಿ ಬರುತ್ತಿದ್ದವನ ಮೇಲೆ 'ಲವ್ ಜಿಹಾದ್' ಕೇಸ್ಬರ್ಥಡೇ ಪಾರ್ಟಿ ಮುಗಿಸಿ ಬರುತ್ತಿದ್ದವನ ಮೇಲೆ 'ಲವ್ ಜಿಹಾದ್' ಕೇಸ್

ಹೊಸ ಮಸೂದೆಯ ಪ್ರಕಾರ ಬಲವಂತವಾಗಿ ಧಾರ್ಮಿಕ ಮತಾಂತರ ಮಾಡುವುದು 1-5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 25,000 ರೂ. ದಂಡ ವಿಧಿಸಲಾಗುತ್ತದೆ. ಆದರೆ ಮತಾಂತರಕ್ಕೆ ಒಳಗಾದ ವ್ಯಕ್ತಿ ಪರಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಆರೋಪಿಗೆ ಕನಿಷ್ಠ 2-10 ವರ್ಷ ಜೈಲು ಮತ್ತು ಗರಿಷ್ಠ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ. ಮುಂದೆ ಓದಿ.

ವಿಧಾನಸಭೆಯಲ್ಲಿ ಮಂಡನೆ

ವಿಧಾನಸಭೆಯಲ್ಲಿ ಮಂಡನೆ

ಅಪ್ರಾಪ್ತ ವಯಸ್ಸಿನವರು ಮತ್ತು ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡಿದರೂ ಕನಿಷ್ಠ 2-10 ವರ್ಷ ಜೈಲು ಮತ್ತು ಗರಿಷ್ಠ 1 ಲಕ್ಷ ರೂ. ದಂಡದ ಶಿಕ್ಷೆ ಎದುರಾಗಲಿದೆ. ಸಂಪುಟದಲ್ಲಿ ಅನುಮೋದನೆಗೊಂಡಿರುವ ಈ ಮಸೂದೆಯನ್ನು, ಕಾಯ್ದೆಯಾಗಿ ಅಂತಿಮ ಅನುಮೋದನೆ ಪಡೆದುಕೊಳ್ಳಲು ವಿಧಾನಸಭೆಯಲ್ಲಿ ಮಂಡಿಸಲಾಗುತ್ತದೆ.

ಎರಡು ತಿಂಗಳು ಮುನ್ನ ಮಾಹಿತಿ

ಎರಡು ತಿಂಗಳು ಮುನ್ನ ಮಾಹಿತಿ

ಯಾರಾದರೂ ಮದುವೆ ಕಾರಣ ಸ್ವ ಇಚ್ಛೆಯಿಂದ ಮತಾಂತರ ಮಾಡಿಕೊಳ್ಳಲು ಬಯಸಿದ್ದರೆ ಅವರು ಜಿಲ್ಲಾಡಳಿತಕ್ಕೆ ಎರಡು ತಿಂಗಳ ಮುಂಚೆಯೇ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಅಂತಹ ಮದುವೆಗಳು ಹೊಸ ಕಾನೂನಿನ ಅಡಿಯಲ್ಲಿ ಅಸಿಂಧು ಎನಿಸಿಕೊಳ್ಳಲಿದೆ.

ಉತ್ತರ ಪ್ರದೇಶದ ಮೊದಲ 'ಲವ್ ಜಿಹಾದ್' ಪ್ರಕರಣಕ್ಕೆ ತಿರುವುಉತ್ತರ ಪ್ರದೇಶದ ಮೊದಲ 'ಲವ್ ಜಿಹಾದ್' ಪ್ರಕರಣಕ್ಕೆ ತಿರುವು

ನೇರ ಅಥವಾ ಪರೋಕ್ಷ ಮತಾಂತರ

ನೇರ ಅಥವಾ ಪರೋಕ್ಷ ಮತಾಂತರ

ಈ ಮಸೂದೆಯು ವಿಧಾನಸಭೆಯಲ್ಲಿ ಅನುಮೋದನೆಗೊಂಡ ಬಳಿಕ 1968ರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಸ್ಥಾನಕ್ಕೆ ಬರಲಿದೆ. ಪ್ರಸ್ತಾಪಿತ ಕಾನೂನಿನಡಿ ಮಧ್ಯಪ್ರದೇಶದಲ್ಲಿ ಯಾರೊಬ್ಬರೂ ಯಾರನ್ನೂ ನೇರವಾಗಿ ಅಥವಾ ಪರೋಕ್ಷವಾಗಿ ಮತಾಂತರ ಮಾಡಲು ಸಾಧ್ಯವಾಗುವುದಿಲ್ಲ. ಮದುವೆ ಅಥವಾ ಆಮಿಷವೊಡ್ಡುವಿಕೆ ಅಥವಾ ಬೆದರಿಕೆ ಹಾಕುವಂತಹ ಚಟುವಟಿಕೆಗಳ ಮೂಲಕವೂ ಇದು ಸಾಧ್ಯವಾಗುವುದಿಲ್ಲ.

ಪೋಷಕರು, ರಕ್ತಸಂಬಂಧಿಕರು ದೂರು ನೀಡಬಹುದು

ಪೋಷಕರು, ರಕ್ತಸಂಬಂಧಿಕರು ದೂರು ನೀಡಬಹುದು

ಒಬ್ಬ ವ್ಯಕ್ತಿಗೆ ಆಮಿಷ, ತಪ್ಪುದಾರಿಗೆ ಎಳೆಯುವುದು, ಬೆದರಿಕೆ ಅಥವಾ ಮದುವೆ ಮೂಲಕ ಮತಾಂತರ ಮಾಡುವ ಪ್ರಯತ್ನ ಮಾಡುವ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು. ಅಪ್ರಾಪ್ತ ವಯಸ್ಸಿನವರು, ಗುಂಪುಗಳು, ಎಸ್‌ಸಿ ಅಥವಾ ಎಸ್‌ಟಿ ಸಮುದಾಯದವರ ಧಾರ್ಮಿಕ ಮತಾಂತರವು ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗುತ್ತದೆ. ಅಂತಹ ಧಾರ್ಮಿಕ ಮತಾಂತರದ ಸಂತ್ರಸ್ತರ ಪೋಷಕರು ಅಥವಾ ರಕ್ತ ಸಂಬಂಧಿಕರು ದೂರು ನೀಡಬಹುದು.

English summary
Madhya Pradesh cabinet has approved Dharma Swatantrya Bill 2020, which aimed at curbing forced religious conversions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X