ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಟ್‌ನಿಂದ ಬಾರಿಸಿದ್ದ ಶಾಸಕನ ಕೃತ್ಯ ಸಮರ್ಥಿಸಿಕೊಂಡ ತಂದೆ

|
Google Oneindia Kannada News

ಇಂದೋರ್, ಜುಲೈ 1: ಪಾಲಿಕೆ ಅಧಿಕಾರಿಯೊಬ್ಬರನ್ನು ಭ್ರಷ್ಟಾಚಾರ ನಡೆಸಿದ ಆರೋಪದಡಿ ಕ್ರಿಕೆಟ್ ಬ್ಯಾಟ್‌ನಿಂದ ಮನಬಂದಂತೆ ಥಳಿಸಿದ್ದ ಬಿಜೆಪಿ ಶಾಸಕ ಆಕಾಶ್ ವಿಜಯ್ ವರ್ಗಿಯಾ ಅವರ ಕೃತ್ಯವನ್ನು ಅವರ ತಂದೆ, ಹಿರಿಯ ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗಿಯಾ ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಮಗ ಅನನುಭವಿ ಎಂದು ಹೇಳಿರುವ ಕೈಲಾಶ್, ರಾಷ್ಟ್ರಾದ್ಯಂತ ಸುದ್ದಿಯಾಗಿರುವ ಈ ಹಲ್ಲೆ ಘಟನೆಯು ಅಷ್ಟೇನೂ ದೊಡ್ಡ ಸಂಗತಿಯೇನಲ್ಲ ಎಂದಿದ್ದಾರೆ.

ಜೈಲಿನಿಂದ ಹೊರ ಬಂದ 'ಬ್ಯಾಟ್ ಬೀಸಿದ' ಬಿಜೆಪಿ ಶಾಸಕ ಆಕಾಶ್ ಜೈಲಿನಿಂದ ಹೊರ ಬಂದ 'ಬ್ಯಾಟ್ ಬೀಸಿದ' ಬಿಜೆಪಿ ಶಾಸಕ ಆಕಾಶ್

ಎರಡೂ ಕಡೆಗಳಿಂದ ಕೈ ಕೈ ಮಿಲಾಯಿಸಿರಬಹುದು ಎಂದು ನನಗನ್ನಿಸುತ್ತದೆ. ಆಕಾಶ್‌ಜಿ ಮತ್ತು ಮುನಿಸಿಪಲ್ ಕಾರ್ಪೊರೇಷನ್ ಕಮಿಷನರ್ ಇಬ್ಬರೂ ಅನನುಭವಿಗಳು. ಇದೇ ಅಷ್ಟೇನೋ ದೊಡ್ಡ ವಿಷಯವೇನಲ್ಲ. ಆದರೆ ಅದರ ಉದ್ದೇಶ ಮೀರಿ ಬೇರೆ ಅರ್ಥ ಪಡೆದುಕೊಂಡಿತು ಎಂದು ಹೇಳಿದ್ದಾರೆ.

madhya pradesh BJP kailash vijayvargiya defends son mla akash he is a novice

ಹಲ್ಲೆ ನಡೆಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಆಕಾಶ್ (34) ಅವರನ್ನು ಭಾನುವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಮೊದಲ ಬಾರಿಗೆ ಶಾಸಕರಾಗಿರುವ ಅವರಿಗೆ ಜೈಲಿನ ಹೊರಗೆ ಕುಟುಂಬ ಮತ್ತು ಬೆಂಬಲಿಗರಿಂದ ಭರ್ಜರಿ ಸ್ವಾಗತ ಸಿಕ್ಕಿತು. ಅವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರ ತಂದೆ ಕೈಲಾಶ್ ಕೂಡ ಹಾಜರಿದ್ದರು.

ಭ್ರಷ್ಟಾಚಾರ ನಿಲ್ಲಿಸದಿದ್ದರೆ ಧನ್ ಧನಾ ಧನ್! ಇದು ಬಿಜೆಪಿ ಎಂಎಲ್ಎ ಬ್ಯಾಟಿಂಗ್ ಸ್ಟೈಲ್ ಭ್ರಷ್ಟಾಚಾರ ನಿಲ್ಲಿಸದಿದ್ದರೆ ಧನ್ ಧನಾ ಧನ್! ಇದು ಬಿಜೆಪಿ ಎಂಎಲ್ಎ ಬ್ಯಾಟಿಂಗ್ ಸ್ಟೈಲ್

ಪಾಲಿಕೆ ಅಧಿಕಾರಿಯು ತನ್ನ ಉದ್ಧಟತನ ತೋರಿಸಬಾರದಿತ್ತು. ಜನರಿಂದ ಚುನಾಯಿತರಾದವರೊಂದಿಗೆ ಅವರು ಸರಿಯಾಗಿ ಮಾತನಾಡಬೇಕಿತ್ತು ಎಂದರು.

ಮಗ ಮಾತ್ರ ಅಲ್ಲ, ಶಾಸಕನ ಅಪ್ಪನೂ ಹೀಗೆಯೇ ಇದ್ದಿದ್ದು!ಮಗ ಮಾತ್ರ ಅಲ್ಲ, ಶಾಸಕನ ಅಪ್ಪನೂ ಹೀಗೆಯೇ ಇದ್ದಿದ್ದು!

ಆಕಾಶ್ ಅವರ ತಂದೆ ಕೈಲಾಶ್ ಕೂಡ ಇದೇ ರೀತಿ ಅಧಿಕಾರಿಯೊಬ್ಬರನ್ನು ಥಳಿಸಿದ್ದರು ಎಂದು ಹೇಳಲಾಗಿದೆ. ತಮ್ಮ ಪ್ರದೇಶದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು 1994ರಲ್ಲಿ ನಡೆಸಿದ ಪ್ರತಿಭಟನೆ ವೇಳೆ ಕೈಲಾಶ್, ಇಂದೋರ್‌ನ ಮೇಯರ್ ಆಗಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಫಳನೀಕರ್ ಅವರಿಗೆ ಶೂನಿಂದ ಥಳಿಸಿದ್ದರು. ಕಾಂಗ್ರೆಸ್ ಇದರ ಚಿತ್ರವನ್ನು ಬಿಡುಗಡೆ ಮಾಡಿತ್ತು.

English summary
Madhya Pradesh Senion BJP leader Kailash Vijayvargiya has defended his son, MLA Akash Vijayvargariya, for assaulting a civic official with a cricket bat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X