ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಚ್ಚರಿ ಮೂಡಿಸಲಿದೆ ಮಧ್ಯಪ್ರದೇಶ ಫಲಿತಾಂಶ: ಕಮಲ್ ನಾಥ್

|
Google Oneindia Kannada News

ಭೋಪಾಲ್, ನವೆಂಬರ್ 29: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಎಲ್ಲರಲ್ಲೂ ಅಚ್ಚರಿ ಮೂಡಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಮರು ಚುನಾವಣೆ ನಡೆಸಿ : ಕಮಲ್‌ನಾಥ್ ಮಧ್ಯಪ್ರದೇಶದಲ್ಲಿ ಮರು ಚುನಾವಣೆ ನಡೆಸಿ : ಕಮಲ್‌ನಾಥ್

ಇದಕ್ಕೂ ಮುನ್ನ ಕಾಂಗ್ರೆಸ್ 140 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಆತ್ಮವಿಶ್ವಾಸದಲ್ಲಿ ಹೇಳಿದ್ದ ಕಮಲ್ ನಾಥ್ ಇದೀಗ ವರಸೆ ಬದಲಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಬೆಟುಲ್ ಕ್ಷೇತ್ರ ಗೆದ್ದವರು ರಾಜ್ಯ ಆಳ್ತಾರೆ!ಮಧ್ಯಪ್ರದೇಶದಲ್ಲಿ ಬೆಟುಲ್ ಕ್ಷೇತ್ರ ಗೆದ್ದವರು ರಾಜ್ಯ ಆಳ್ತಾರೆ!

ಮಧ್ಯಪ್ರದೇಶದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಶೇ.74 ರಷ್ಟು ಮತದಾನ ದಾಖಲಾಗಿತ್ತು. ಮತದದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಇವಿಎಂ ದೋಷದ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ 'ಮರು ಚುನಾವಣೆ' ನಡೆಸುವಂತೆ ಚುನಾವಣಾ ಆಯೋಗವನ್ನು ಮನವಿ ಮಾಡಿದ್ದರು ಕಮಲ್ ನಾಥ್.

Madhya Pradesh assembly polls results will be surprising: Kamal Nath

ಆದರೆ ಚುನಾವಣೆಯ ನಂತರ ಅವರು ಮಾತನಾಡಿ, 'ಅಚ್ಚರಿಯ ಫಲಿತಾಂಶ ಹೊರಬರಲಿದೆ' ಎಂದಿದ್ದಾರೆ. ಮತದಾನದ ಪ್ರಮಾಣ ಹೆಚ್ಚಾದಷ್ಟೂ ಆಡಳಿತಾರೂಢ ಪಕ್ಷಕ್ಕೆ ನಷ್ಟವೇ ಜಾಸ್ತಿ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಮಧ್ಯಪ್ರದೇಶದಲ್ಲಿ ದಾಖಲೆಯ ಮತದಾನವಾಗಿದ್ದು, ಆಡಳಿತಾರೂಢ ಬಿಜೆಪಿಗೆ ನಷ್ಟವಾಗಬಹುದು. ಕಮಲ್ ನಾಥ್ ಮಾತೂ ಅದಕ್ಕೆ ಪುಷ್ಠಿ ನೀಡಿದೆ.

English summary
Madhya Pradesh Congress state unit chief Kamal Nath on Wednesday claimed that the result of assembly polls might surprise everyone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X